Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಕಾಂಗ್ರೆಸ್ ಕಾರ್ಯಾಲಯ ತೆರವುಗೊಳಿಸಿದ ನಂತರ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸುವ ಹೊಣೆ ಭೂಸನೂರ ಅವರದ್ದು"

ಸಿಂದಗಿ:ನನ್ನ ಕುರಿತು ಮಾಡಿದ ೧೬ ಆಪಾದನೆಗಳಲ್ಲಿ ಎಪಿಎಂಸಿಯಲ್ಲಿನ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಮಾಡಿದ್ದು ನನ್ನ ತಪ್ಪು, ಅದನ್ನು ನಾನು ಒಪ್ಪಿಕೊಂಡು ಕಾರ್ಯಾಲಯವನ್ನು ತೆರವುಗೊಳಿಸುವ ಕಾರ್ಯ ಮಾಡುತ್ತೇನೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ ೧೬ ವ್ಯಾಪಾರಸ್ಥರು ಎಂಪಿಎಂಸಿಯ ನಿಯಮ ಮೀರಿ ಬೇರೆ ಬೇರೆ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಾರ್ಯಾಲಯ ತೆರವುಗೊಳಿಸಿದ ನಂತರ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರಾಗುತ್ತಾರೆ. ನನ್ನ ವಿರುದ್ಧ ಮಾಡಿದ ಇನ್ನುಳಿದ ೧೫ ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ. ಅ?ರೊಳಗಾಗಿ ಸಾಬೀತು ಪಡಿಸಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಶಾಸಕ ಅಶೋಕ ಮನಗೂಳಿ ಸವಾಲು ಹಾಕಿದರು.

ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಪಾದನೆ ಮಾಡುವುದು ದೊಡ್ಡದಲ್ಲ. ಅದನ್ನು ಸಾಬೀತು ಪಡಿಸುವುದು ಬದ್ಧತೆ. ೨೦೨೦ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರ ಅವಧಿಯಲ್ಲಿ ೨೫೦ಹುಡ್ಕೋ ಮನೆಗಳು ಮಂಜೂರಾಗಿದ್ದು, ಅದನ್ನು ನಾನೇ ಮಾಡಿಸಿದ್ದು ಎಂದು ಭೂಸನೂರ ಬಿಗುತ್ತಿರುವುದು ಎ? ಸರಿ ಎಂದು ಪ್ರಶ್ನಿಸಿದರು. ತೆರವುಗೊಳಿಸಲಾದ ಸರ್ವೇ ನಂ.೮೪೨ರ ಜಾಗೆಯ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎಂದು ಹೇಳುವ ಮಾಜಿ ಶಾಸಕರು ಉಪ-ಚುನಾವಣೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದೇ ವಿಷಯ ಕುರಿತು ಸಲ್ಲಿಸಿದ ಮನವಿ ಪತ್ರ ನಮ್ಮ ಬಳಿ ಇದೆ. ತಮ್ಮ ಅವಧಿಯಲ್ಲಿ ಮಾಜಿ ಶಾಸಕ ಭೂಸನೂರ ಇದರ ಕುರಿತು ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ನಮ್ಮ ಕುಟುಂಬದ ಬಗ್ಗೆ ಆಪಾದನೆ ಮಾಡುವ ಮುಖಾಂತರ ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ ಎಂದು  ಹರಿಹಾಯ್ದರು.

 ನಗರಸಭೆ ಘೋ?ಣೆ ಇದೊಂದು ಸಾಮಾನ್ಯ ಪ್ರಕ್ರಿಯೆ ಇದಕ್ಕೆ ಯಾಕೆ ಅ?ಂದು ಮೆರವಣಿಗೆ ಮಾಡಿಕೊಳ್ಳಬೇಕು ಎಂದ ಅವರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ೨೦೨೧ರಲ್ಲಿಯೇ ಸಿಂದಗಿಯ ಜನಸಂಖ್ಯೆ ೫೦ಸಾವಿರದಷ್ಟಿತ್ತು. ಆ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಸಿಂದಗಿಯನ್ನು ನಗರಸಭೆ ಮಾಡುವಂತೆ ಸರಕಾರಕ್ಕೆ ಮನವಿ ಪತ್ರ ನೀಡಿದ ಒಂದಾದರೂ ಉದಾಹರಣೆ ತೋರಿಸಲಿ. ಆದರೆ ಭೂಸನೂರ ಅವರಿಗೆ ನಗರಸಭೆಯಾದದ್ದು ಖುಷಿ ಇದ್ದಂತಿಲ್ಲ. ಇದರಲ್ಲಿಯೂ ರಾಜಕೀಯ ಮಾಡುವ ದುರುದ್ದೇಶ ಅವರದು. ಮೆರವಣಿಗೆ ಮಾಡಿಕೊಂಡದ್ದು ನಾನಲ್ಲ. ಸಿಂದಗಿಯ ಜನತೆ ನಗರಸಭೆಯಾದ ಖುಷಿಯಲ್ಲಿ ತಮ್ಮ ಅಭಿಮಾನದಿಂದ ವಿಜಯೋತ್ಸವ ಮಾಡಿ ಸಂತೋ? ವ್ಯಕ್ತಪಡಿಸಿದ್ದಾರ?. ಆಲಮೇಲ ಭಾಗದಲ್ಲಿ ತೋಟಗಾರಿಕಾ ಬೆಳೆಗಳಿಲ್ಲ. ಮಹಾವಿದ್ಯಾಲಯ ಸ್ಥಾಪಿಸಲು ಸೂಕ್ತ ವಾತಾವರಣವಿಲ್ಲವೆಂಬ ಕಾರಣ ನೀಡಿ ತಿಡಗುಂದಿಗೆ ವರ್ಗಾವಣೆ ಮಾಡುವಂತೆ ಪತ್ರ ಕೊಡಸಿದ್ದು ಇದೇ ಭೂಸನೂರ ಎಂದು ಕೀಡಿಕಾರಿದರು.

 ಒಟ್ಟಾರೆಯಾಗಿ ನೊಂದ ೮೪ಬಡ ಕುಟುಂಬಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಸರಕಾರ, ತಾಲೂಕಾಡಳಿತ, ಜಿಲ್ಲಾಡಳಿತದಿಂದ ಸಿಗುವ ಎಲ್ಲ ಅನುದಾನ ಬಳಸಿಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಕಾಲೋನಿ ಮಾಡಿಕೊಡುವಲ್ಲಿ ಕಾರ್ಯಪ್ರವೃತ್ತನಾಗಿ ಅವರ ನೋವನ್ನು ನೀವಾರಿಸುವ ಎಲ್ಲ ಪ್ರಯತ್ನವನ್ನು ಪುರಸಭೆ ಹಾಗೂ ಸರಕಾರಿ ಅಧಿಕಾರಿಗಳ ಸಹಯೋಗದೊಂದಿಗೆ ಮಾಡುತ್ತೇನೆ. ಈ ಕಾರ್ಯಕ್ಕೆ ವಿರೋಧ ಪಕ್ಷದವರು ರಾಜಕೀಯ ಮಾಡದೇ ಬೆಂಬಲ, ಸಹಕಾರ ನೀಡಲೆಂದು ಆಶಿಸುತ್ತೇನೆ ಎಂದರು.

 ಈ ವೇಳೆ ಇಂಡಿ ಎಸಿ ಅನುರಾಧ ವಸ್ತ್ರದ ಸರ್ವೇ ನಂ.೮೪೨ರ ಜಾಗೆಯ ಸಂಪೂರ್ಣ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಭಾ?ಸಾಬ ತಾಂಬೊಳಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಸುರೇಶ ಪೂಜಾರಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ