Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುನಗುಂದ; ಕೇಂದ್ರ ಮತ್ತು ಸಮಾಜ ಕೇಂದ್ರ ಶಾಲೆಯು ಮೂಲಭೂತ ಸೌಲಭ್ಯಗಳಿಲ್ಲದೆ ಮತ್ತು ಸಂಪೂರ್ಣ ಕಳೆ ಕಟ್ಟಡವಾಗಿದ್ದರಿಂದ ಇಡೀ ಕಟ್ಟಡವೆ ಶಿಥಿಲಾವಸ್ಥೆಯಲ್ಲಿದ್ದು, ಸಧ್ಯ ಅವಶ್ಯವಿದ್ದಷ್ಟು ಕಟ್ಟಡ ತೆರವುಗೊಳಿಸಿ ಕಾಲಕಾಲಕ್ಕೆ ಬರುವ ಅನುದಾನದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲಾಗುವದೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದ ವಿಶಾಲವಾದ ಬಯಲು ಹೊಂದಿದ ಕೇಂದ್ರ ಮತ್ತು ಸಮಾಜ ಕೇಂದ್ರ ಶಾಲೆ ಆವರಣದಲ್ಲಿ ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಎಸ್‌ಎಫ್‌ಸಿ ಯೋಜನೆಯ ರೂ. ೫೦ಲಕ್ಷ ಅನುದಾನದಲ್ಲಿ ೩ಕೊಠಡಿಗಳನ್ನು ನಿರ್ಮಿಸುವ ಉದ್ದೇಶದದಿಂದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತ ೧೯೯೦ರಲ್ಲಿ ಶಾಸಕ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ ಕಾಲದಲ್ಲಿ ಲೋಕೋಪಯೋಗಿ ಸಚಿವ ರಾಜಶೇಖರ ಮೂರ್ತಿಯವರು ಈ ಜಾಗೆಯಲ್ಲಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟನೆಗೊಳಿಸಿದ್ದರು. ೪ದಶಕಗಳು ಗತಿಸಿರುವದರಿಂದ ಈ ಕಟ್ಟಡ ಶಿಥೀಲಾವಸ್ಥೆಗೆ ಬಂದಿದೆ. ಇದನ್ನು ಹಂತಹಂತವಾಗಿ ಅನುದಾನ ಪಡೆದು ಇಗಿರುವಂತೆ ಸಂಪೂರ್ಣ ಕಟ್ಟಡವನ್ನು ನಿರ್ಮಿಸಿ ಒಂದು ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿರುವದಾಗಿ ಶಾಸಕರು ತಿಳಿಸಿದರು. ಈಗಾಗಲೆ ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ದಿಗಾಗೆಯೆ ಪ್ರೌಢ ಮತ್ತು ಕಾಲೇಜು ಹಂತದಲ್ಲಿ ಸುಧಾರಣೆ ಮತ್ತು ವಸತಿ ನಿಲಯಗಳು ಸೇರಿದಂತೆ ಅಂದಾಜು ರೂ. ೧೩ಕೋಟಿ ಅನುದಾನ ಬಳಸಲಾಗಿದೆ. ಈಗಾಗಲೆ ಇಲ್ಲಿರುವ ಅಬ್ದುಲ್ ಕಲಾಂ ಉರ್ದು ಶಾಲೆ ಇರರುವದರಿಂದ ಅದಕ್ಕೂ ಹೆಚ್ಚಿನ ಸೌಲಭ್ಯ ಒದಗಿಸಬೇಕಾಗಿದೆ. ಇನ್ನೂ ಹೆಚ್ಚಿನ ಅನುದಾನ ತಂದು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿರುವದಾಗಿ ಶಾಸಕ ಕಾಶಪ್ಪನವರ ತಿಳಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಮಹದೇವ ಕಲಾಲ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ, ಬಿಆರ್‌ಸಿ ಅಮರೇಶ ಗುಡಗುಂಟಿ, ಮುಖ್ಯ ಶಿಕ್ಷಕ ಕೆ.ವ್ಹಿ. ಮಡಿವಾಳರ, ಮುಖಂಡರಾದ ಸಂಗಣ್ಣ ಗಂಜಿಹಾಳ, ಜಬ್ಬಾರ ಕಲಬುರ್ಗಿ, ಮಹಿಬೂಬ ಸರಕಾವಸ್, ಬಸವರಾಜ ಅಂಟರತಾನಿ, ಜೈನಸಾಬ ಹಗೇದಾಳ, ಬಸವರಾಜ ಬಂಗಾರಿ ಸೇರಿದಂತೆ ಇತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ