Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಚಿತ ಥೈರಾಯಿಡ್, ಬಿಪಿ, ಬಿಪಿ, ಶುಗರ್ ತಪಾಸನೆ ಶಿಬಿರ




ಬೈಲಹೊಂಗಲ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ ವಕ್ಕುಂದ ಗ್ರಾಮದ  ಶ್ರೀ ಅಕ್ಕಮಹಾದೇವಿ  ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಇಶಾ ಮಲ್ಟಿಸ್ಪೆಶಾಲಿಟಿ  ಆಸ್ಪತ್ರೆ ಬೈಲಹೊಂಗಲ ಇವರ ಸಹಯೋಗದಲ್ಲಿ  ಉಚಿತ ಥೈರೈಡ್ಪಿ, ಬಿ ಪಿ, ಶುಗರ್ ತಪಾಸನೆ   ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಕಲ್ಲಿ, ಪಿಡಿಓ  ಶ್ರೀಮತಿ ವಿಜಯಲಕ್ಷ್ಮಿ ಅನಿಗೋಳ,ಬೈಲಹೊಂಗಲ ತಾಲೂಕ ಯೋಜನಾಧಿಕಾರಿಗಳಾದ ವಿಜಯಕುಮಾರ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಶ್ರೀಮತಿ ರೇಖಾ ಡವಳೆ, ಇಶಾ ಆಸ್ಪತ್ರೆ ಸಿಬ್ಬಂದಿ ಸಂತೋಷ್ ಸರ್ ಇವರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿ ಪಿಡಿಓ  ವಿಜಯಲಕ್ಷ್ಮಿ ಅನಿಗೋಳ ಮಾತನಾಡಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದಿರುವ ಕಾರ್ಯಗಳಿಲ್ಲ, ಆರೋಗ್ಯ ತಪಾಸಣೆ ಶಿಬಿರಗಳು  ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ, ವೀರೇಂದ್ರ ಹೆಗ್ಗಡೆ ಅವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು,ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವದರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ.  ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು ಅದೆಷ್ಟೋ ಕುಟುಂಗಳಿಗೆ ದಾರಿದೀಪವಾಗಿದೆ.ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.   ತಾಲೂಕಿನ  ಯೋಜನಾಧಿಕಾರಿಗಳಾದ ವಿಜಯಕುಮಾರ ಮಾತನಾಡಿ  ಯೋಜನೆ ಕಾರ್ಯಕ್ರಮಗಳ ಬಗ್ಗೆ ಉದಾರಣೆ ಸಮುದಾಯ ಅಭಿವೃದ್ಧಿ ಮಾಶಾಸನ ವಾತ್ಸಲ್ಯ,ಸುಜ್ಞಾನಿಧಿ,ಶಿಷ್ಯವೇತನ,ಜಲಮಂಗಳ, ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ  ಕುರಿತು ಮಾಹಿತಿ ನೀಡಿದರು. ಹಾಗೂ 100 ಜನ ಸದಸ್ಯರ ಥೈರಾಡ್, ಬಿ ಪಿ, ಶುಗರ್ ಪರೀಕ್ಷೆ  ಮಾಡಿಸಲಾಯಿತು. ಈ ಸಂದರ್ಭದಲ್ಲಿ    ನಿರೂಪಣೆಯನ್ನು  ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜೆ  ನಡೆಸಿಕೊಟ್ಟರು, ಸ್ವಾಗತವನ್ನು  ವಲಯದ ಮೇಲ್ವಿಚಾರಕರಾದ  ಜಗದೀಶ್ ನೆರವೇರಿಸಿದರು, ಸೇವಾಪ್ರತಿನಿಧಿ ರೇಣುಕಾ,  ಭಾರತಿ   ಡವಳೆ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ