Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ : ಜಿಗಜಿಣಗಿ

ಇಂಡಿ: ಕುಟುಂಬ ರಾಜಕಾರಣ ಇರುವ ಕಾರಣ ಕಾಂಗ್ರೆಸ್ ಪಕ್ಷದಿಂದ ದೇಶದ ಅಭಿವೃದ್ಧಿಯಾಗಿಲ್ಲ. ಬದಲಿಗೆ ತಮ್ಮ ಕುಟುಂಬದ ಅಭಿವೃದ್ಧಿ ಮಾಡುವುದರಲ್ಲಿಯೇ ಕಾಂಗ್ರೆಸ್ ನಾಯಕರು ಕಾಲ ಕಳೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ೧೧ ವರ್ಷ ಪೂರೈಸಿದ ಪ್ರಯುಕ್ತ ಇಂಡಿ ಮಂಡಲದಿಂದ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೋದಿ ಒಬ್ಬರು ದೈವೀ ಪುರು? ಅವರನ್ನು ಯಾರೂ ಏನು ಮಾಡಲು ಆಗುವುದಿಲ್ಲ. ಸಮೃದ್ಧ ದೇಶ ಕಟ್ಟುವಲ್ಲಿ ಮೋದಿ ಪಾತ್ರ ಅನನ್ಯವಾಗಿದೆ. ದೇಶಕ್ಕೆ ಮೋದಿ ಕೊಡುಗೆ ಏನು ಎಂದು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೂನ್ಯ ಎಂಬ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಆಡಳಿತ ನೀಡುತ್ತಿದ್ದು ಆ ಶೂನ್ಯ ಎಂಬ ಪದ ಅವರ ಬಾಯಲ್ಲಿ ಬಾಯಪಾಠ ಆಗಿಬಿಟ್ಟಿದೆ ಎಂದ ಅವರು ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದರು
ಕೆಲ ಶಾಸಕರು ಇತ್ತೀಚೆಗೆ ಪತ್ರ ಬರೆದಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದ್ದು, ನಾನು ೨೦೨೪ರಲ್ಲಿ ನರೇಂದ್ರ ಮೋದಿಯವರಿಗೆ ಅನುದಾನ ನೀಡುವಂತೆ ಪತ್ರ ಬರೆದಿದ್ದೇನೆ. ತದನಂತರ ಸಿಡಬ್ಲ್ಯೂಸಿ ಮೀಟಿಂಗಿಗೆ ನನ್ನನ್ನು ಆಹ್ವಾನಿಸಿದ್ದು ನಾನು ಖುದ್ದಾಗಿ ಹೋಗಿ ಆ ಮೀಟಿಂಗ್ನಲ್ಲಿ ನಮ್ಮ ಫೈಲ್ ಅನ್ನು ಪಾಸ್ ಮಾಡಿಸಿದ್ದೇನೆ, ಯಾವ ಸ್ಥಳದಲ್ಲಿ ನಿಂತು ಹೇಳು ಎಂದರೂ ನಾನು ಧೈರ್ಯವಾಗಿ ಹೇಳುತ್ತೇನೆ, ಈ ಕಾಲುವೆಗೆ ಅನುದಾನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಎಂದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ೨೦೧೧ರಲ್ಲಿ ನಮ್ಮ ದೇಶದ ಬಡತನದ ರೇಖೆ ಪ್ರತಿಶತ ೨೭.೫ ರಷ್ಟು ಇತ್ತು ಆದರೆ ಈಗ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದಲ್ಲಿ ನಮ್ಮ ದೇಶದ ಬಡತನ ರೇಖೆಯ ಪ್ರತಿಶಥ ೫.೩ ರಷ್ಟು ಮಾತ್ರ ಇದೆ. ಆರ್ಥಿಕವಾಗಿ ನಮ್ಮ ದೇಶ ಈಗ ಸದೃಢವಾಗಿದ್ದು ವಿಶ್ವದಲ್ಲಿಯೇ ಆರ್ಥಿಕ ಮೂರನೇ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ವಿಜಯಪುರ ಜಿಲ್ಲೆಗೆ ಒಟ್ಟು ೬ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಿಸಿ ಕೆಲಸ ಮಾಡಿದ್ದೇನೆ. ಜಿಲ್ಲೆಗೆ ೧ ಲಕ್ಷ ೨೦ ಸಾವಿರ ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ, ಆದರೆ ನಾನು ಯಾವುದಕ್ಕೂ ಸಹ ಹೇಳಿಕೊಂಡಿಲ್ಲ. ಜಲಜೀವನ ಮಿ?ನ್ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಿದ್ದರೂ ಸಹ ಜಿಲ್ಲೆಯ ಶಾಸಕರು ನನಗೆ ಕಾಮಗಾರಿಯ ಪೂಜೆಗೆ ಸಹ ಕರೆದಿಲ್ಲ ಆದರೂ ಸಹ ಅಭಿವೃದ್ಧಿಗೆ ನಾನು ಯಾರಿಗೂ ಪ್ರಶ್ನೆ ಮಾಡಿಲ್ಲ ಎಂದರು.
ಭಾಜಪ ಮುಖಂಡರಾದ ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ಕಾಸು ಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೇ, ಶೀಲವಂತ ಉಮರಾಣಿ, ಮಳುಗೌಡ ಪಾಟೀಲ, ಭಾರತ ಕುಲಕರ್ಣಿ, ದೇವೇಂದ್ರ ಕುಂಬಾರ ಮಾತನಾಡಿದರು.
ವೇದಿಕೆಯಲ್ಲಿ ಹಣಮಂತರಾಯಗೌಡ ಪಾಟೀಲ ಅನಿಲ ಗೌಡ ಬಿರಾದಾರ ವಿಜಯಲಕ್ಷ್ಮಿ ರೋಗಿಮಠ ರವಿ ಬಗ್ಗೆ ಹೊನ್ನಪ್ಪ ಪಾಟೀಲ, ಇದ್ದರು.
ಕಾರ್ಯಕ್ರಮದಲ್ಲಿ ಬಾಳು ಮುಳಜಿ, ಶಾಂತು ಕಂಬಾರ, ಸಂಜೀವ ದಶವಂತ, ಮಂಜುನಾಥ ದೇವರ, ಮಹೇಶ್ ಹೂಗಾರ, ರಾಜಪ್ಪ ಬಡಿಗೇರ, ಶಾಮಲಾ ಬಗಲಿ, ನಾಗೇಶ ಹೆಗಡೆಯಾಳ, ಶರಣಗೌಡ ಬಂಡಿ, ರವಿಕಾಂತ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ