Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರು ರೈತ ಸೇವಾ ಸಂಘಗಳ ಮೂಲಕ ಓಪೆಡಾ ದೊಂದಿಗೆ ಸದಸ್ಯತ್ವ ಹೊಂದಿ : ಮಧುಮತಿ ಅಂಡ್ರೂಸ್

ಇಂಡಿ: ತಾಲೂಕಿನಲ್ಲಿ ಬೆಳೆದ ನಿಂಬೆ ರೈತರು ಓಪೆಡಾ ಬೆಂಗಳೂರ ದೊಂದಿಗೆ ಸದಸ್ಯ ಹೊಂದಿ ಇಲ್ಲವೆ ಇಲ್ಲಿಯ ರೈತರು ರೈತ ಸೇವಾ ಸಂಘಗಳ ಮೂಲಕ ಓಪೆಡಾ ದೊಂದಿಗೆ ಸದಸ್ಯತ್ವ ಹೊಂದಿ ನಿಂಬೆಯನ್ನು ಹೊರದೇಶಕ್ಕೆ ಕಳುಹಿಸಬಹುದು ಎಂದು ಓಪೆಡಾ ವ್ಯವಸ್ಥಾಪಕಿ ಮಧುಮತಿ ಅಂಡ್ರೂಸ್ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಇಂಡಿ ಮತ್ತು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತು ಪ್ರಾಧಿಕಾರ ಇವರ ಸಹಯೋಗದಲ್ಲಿ ನಡೆದ ನಿಂಬೆ ಬೆಳೆಗಾರರಿಗೆ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಡಿಯ ನಿಂಬೆಯನ್ನು ಆಸ್ರೇಲಿಯಾ, ಸಿಂಗಾಪುರ,ಯುನೈಟೆಡ್ ಸ್ಟೇಟ್ಸ, ಕತರ, ಯನೈಟೆಡ್ ಅರಬ ಯಮಿರೇಟ್ಸ ಮತ್ತು ಕೆನಡಾ ದೇಶಗಳಿಗೆ ಕಳುಹಿಸಬಹುದು. ಪ್ರಾಧಿಕಾರ ೧೯೮೬ ರಲ್ಲಿ ಪ್ರಾರಂಭಮಾಡಿದ್ದು ಕರ್ನಾಟಕದಲ್ಲಿ ೧೮ ಕೇಂದ್ರಗಳಿವೆ. ಮತ್ತು ೧೬ರಾಜ್ಯಗಳಲ್ಲಿ ಓಪೆಡಾ ಕಚೇರಿ ಹೊಂದಿದೆ. ರಸಾಯನಿಕ ಔಷಧಿಗಳನ್ನು ಬಳಸದ ಉತ್ತಮ ಗುಣಮಟ್ಟದ ನಿಂಬೆ ರಫ್ತು ಮಾಡಬಹುದು. ಓಪೆಡಾ ದೊಂದಿಗೆ ರೈತರು ಸದಸ್ಯರಾದರೆ ಓಪೆಡಾದವರು ನಿಮ್ಮ ಹೊಲಕ್ಕೆ ಬಂದು ಸರಿಯಾದ ಮಾರ್ಗದರ್ಶನ ನೀಡಿ ನಿಮ್ಮ ನಿಂಬೆ ರಫ್ತು ಮಾಡುವಲ್ಲಿ ಸಹಕರಿಸುತ್ತಾರೆ. ಇಂಡಿಯ ನಿಂಬೆಗೆ ಜಿ.ಐ ಟ್ಯಾಗ ಇದ್ದು ಇಲ್ಲಿಯ ನಿಂಬೆ ವಿದೇಶಗಳಲ್ಲಿಯೂ ಪ್ರಸಿದ್ದಿ ಹೊಂದಿದೆ. ಇಂಡಿಯವರೇ ಆದ ಕೊಳುರಗಿ ಗ್ರಾಮದ ಚಂದ್ರಕಾಂತ ಮೆಂಡೆದಾರರವರು ನಿಂಬೆ ಮೌಲ್ಯವರ್ಧನ ಮಾಡಿ ಪರದೇಶಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ಕೂಡ ನೀಡಲಾಗುತ್ತಿದೆ ಎಂದರು.
ಸಿಎಫ್‌ಟಿಆರ್ ಐ ನ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಅನೀಲಕುಮಾರ ಮಾಡನಾಡಿ ಇಂಡಿಯ ನಿಂಬೆ ೪೫ ದಿನಗಳ ವರೆಗೆ ಶೇಖರಿಸಬಹುದು. ಮತ್ತು ನಿಂಬೆಯಲ್ಲಿನ ಶೇ ೮೦ ರಷ್ಟು ಪ್ರಮಾಣದ ನೀರನ್ನು ಕಡಿಮೆ ಮಾಡಿ ಅದನ್ನು ಮೌಲ್ಯವರ್ಧನ ಮಾಡಿ ಮಾರುವದರಿಂದ ಒಂದು ರೂ ನಿಂಬೆಪರದೇಶದಲ್ಲಿ ಮೂವತ್ತು ರೂ ಗೆ ಮಾರಾಟ ಮಾಡಬಹುದು. ಇಲ್ಲವೆ ತಂತ್ರಜ್ಞಾನದ ಬಳಕೆ ಮಾಡಿಕೊಂಡು ನಿಂಬೆ ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಮಾಡಿ ವಸ್ತುಗಳನ್ನು ತಯಾರಿಸಿದರೆ ಅಧಿಕ ಲಾಭ ಪಡೆಯಬಹುದು ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದ ಶೇ ೬೦ ರಷ್ಟು ನಿಂಬೆ ಇಂಡಿ ತಾಲೂಕಿನಲ್ಲಿದ್ದು ನಿಂಬೆಗೆ ಸಂಬಂದಿತ ಅನೇಕ ಸೇಮಿನಾರ ಮತ್ತು ವಿಚಾರಗೋಷ್ಠಿಗಳನ್ನು ತರಬೇತಿಗಳನ್ನು ರೈತರಿಗೆ ಹಮ್ಮಿಕೊಂಡು ರೈತರಿಗೆ ಉತ್ತಮ ಬೆಲೆ ಸಿಗುವ ಉದ್ದೇಶದಿಂದ ಎಲ್ಲರೂ ಕಾರ್ಯ ಮಾಡಬೇಕಾಗಿದೆ. ಇಂದು ನಮ್ಮ ಇಂಡಿ ನಿಂಬೆಗೆ ಜಿಐ ಟ್ಯಾಗ ದೊರಕಿದರಿಂದ ದೇಶ ವಿದೇಶಗಳಿಂದ ಬೇಡಿಕೆ ಬಂದಿದೆ. ಇದರಿಂದಗಾಗಿ ಇಂಡಿ ನಿಂಬೆ ಬಹು ಉಪಯೊಗಿ ಎಂಬುದನ್ನು ಸಾಬಿತು ಮಾಡಲಾಗಿದೆ ಎಂದರು
ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ,ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ತಿಡಗುಂದಿ ವಿಜ್ಞಾನಿ ಸಿದ್ದಣ್ಣರೋಕೆ, ಪುಂಡಲೀಕ ಹೂಗಾರ, ವೀಣಾ ಚಂದಾವರಿ ಮಾತನಾಡಿದರು.
ಕೆವಿಕೆ ಮುಖ್ಯಸ್ಥ ಡಾ. ಉಮರ ಫಾರುಕ, ಕಿಶೋರ ಜಾಧವ ವೇದಿಕೆಯ ಮೇಲಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ನಿಂಬೆ ಬೆಳೆಗಾರರು ಸಂಘದ ಪ್ರಮುಖರು ಮತ್ತು ರೈತರು ಪಾಲ್ಗೊಂಡಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ