Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುನಗುಂದ ತಾಲೂಕ ಇಬ್ಭಾಗ ವಿರೋಧಿಸಿ ಪ್ರತಿಭಟನೆ

ಹುನಗುಂದ; ಬಾಗಲಕೋಟ ಜಿಲ್ಲೆಯಲ್ಲೆಯೆ ಸಾಕಷ್ಟು ಹಳ್ಳಿಗಳನ್ನು ಹೊಂದಿದ ಹುನಗುಂದ ತಾಲೂಕನ್ನು ಇಬ್ಭಾಗ ಮಾಡಿ ಅರ್ಧ ಹಳ್ಳಿಗಳನ್ನು ನೂತನ ಇಲಕಲ್ಲ ತಾಲೂಕಿಗೆ ವರ್ಗಾಯಿಸಿದ ನೋವಿನಲ್ಲೆ ಮತ್ತಷ್ಟು ಹಳ್ಳಿಗಳನ್ನು ಬಾಗಲಕೋಟ ಮತ್ತು ಗುಳೇದಗುಡ್ಡ ತಾಲೂಕಿಗೆ ಸೇರಿಸಲು ಮುಂದಾದ ಶಾಸಕ ಎಚ್.ವೈ. ಮೇಟಿ ಅಭಿಪ್ರಾಯವನ್ನು ತಾಲೂಕ ಕರವೆ ಸಂಘಟನೆ ತೀವ್ರವಾಗಿ ಖಂಡಿಸುತ್ತಾ ಪ್ರತಿಭಟನೆ ಮೂಲಕ ವಿರೋಧಿಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿತು.

ಶುಕ್ರವಾರ ತಾಲೂಕಾ ಕರವೆ ಸಂಘಟನೆ ಮತ್ತು ನಗರದ ನಗರಿಕ ವೇದಿಕೆಯು ತಾಲೂಕಾ ಆಡಳಿತ ತಹಶೀಲ್ದಾರ ಕಚೇರಿ ಮುಂದೆ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾನಿದ್ಯವಹಿಸಿ ಮಾತನಾಡಿದ ವೇ.ಮೂ ಮಹಾಂತಯ್ಯ ಗಚ್ಚಿನಮಠ ಅವರು ನಮ್ಮ ಒಗ್ಗಟ್ಟಿನ ಕೂಗು ವಿಧಾನಸೌದಕ್ಕೆ ಮುಟ್ಟಬೇಕು. ಈ ಇಬ್ಭಾಗ ವಿಷಯ ರಾಜಕೀಯ ಪ್ರೇರಿತವಾಗಿದ್ದು, ಈ ವಿಷಯವನ್ನು ನಮ್ಮ ಶಾಸಕರು ಗಂಭೀರವಾಗಿ ಪರಿಗಣಿಸಿ ತಾಲೂಕ ಇಬ್ಭಾಗವಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.

ಮುಖಂಡ ಮಹಾಂತೇಶ ಹಳ್ಳೂರ ಮಾತನಾಡಿ ಹುನಗುಂದ ತಾಲೂಕ ೧೫೬ ಹಳ್ಳಿಗಳನ್ನು ಹೊಂದಿ ಬೃಹತ್ ತಾಲೂಕಾಗಿ ಕೃಷಿ, ನೇಕಾರಿಕೆ, ಗಣಿ ಉದ್ಯಮ, ವಿವಿದ ಬಗೆಯ ವ್ಯಾಪಾರ ವಹಿವಾಟು ಹೊಂದಿತ್ತು. ಕಾಲಾಯ ತಸ್ಮಯೆ ಎನ್ನುವಂತೆ ಕಳೆದ ಕೆಲವು ವರ್ಷಗಳಲ್ಲಿ ಇಲಕಲ್ಲ ನೂತನ ತಾಲೂಕಾಗಿ ನಮ್ಮ ತಾಲೂಕಿನ ೭೬ಹಳ್ಳಿಗಳನ್ನೆ ಪಡೆದುಕೊಂಡಿದೆ. ಸಮೃದ್ದ ನಡು ಕ್ಷೀಣಿಸುವ ಬೆನ್ನಲ್ಲೆ ಸರ್ಕಾರ ಬಳಸಿಕೊಂಡು ಎಚ್.ವೈ. ಮೇಟಿಯವರು ಮತ್ತೆ ಹುನಗುಂದ ತಾಲೂಕಿನ್ನು ಮತ್ತಷ್ಟು ಇಬ್ಭಾಗ ಮಾಡಿ ಜನಾಭಿಪ್ರಾಯ ಸಂಗ್ರಿಸುವ ಮೂಲಕ ೨೦ ಹಳ್ಳಿಗಳನ್ನು ತಮ್ಮ ತಾಲೂಕಿಗೆ ಸೇರಿಸಿಕೊಳ್ಳಲು ಮುಂದಾದ ವಿಷಯಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ನಾವು ನಮ್ಮ ಹಳ್ಳಿಗಳನ್ನು ಯಾವ ಕಾರಣಕ್ಕೂ ಕೊಡುವದಿಲ್ಲ. ನಮ್ಮ ತಾಲೂಕಿನ ಜನತೆ ಒಗ್ಗಟ್ಟಾಗಿ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುವದಾಗಿ ಹಳ್ಳೂರ ಎಚ್ಚರಿಸಿದರು.

ಕರವೆ ಜಿಲಾ ಉಪಾಧ್ಯಕ್ಷ ರಮ್‌ಜಾನ್ ನದಾಫ್ ಮಾತನಾಡಿ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಇಡೇರಿಸಿಕೊಳ್ಳಲು ಇದ್ದಂತ ವ್ಯವಸ್ಥೆಯನ್ನು ಹಾಳು ಮಾಡುವದು ಸರಿಯಾದ ಕ್ರಮವಲ್ಲ. ನಮ್ಮ ತಾಲೂಕ ಈಗಾಗಲೆ ಸಣ್ಣದಾಗಿದ್ದಕ್ಕೆ ಸಾಕಷ್ಟು ನೋವು ಅನುಭವಿಸಿದ್ದೇವೆ. ಯಾರೋ ಒಬ್ಬರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನಾಭಿಪ್ರಾಯದ ನೆಪವನ್ನು ನಾವು ಖಂಡಿಸಿ ನಮ್ಮ ಹಳ್ಳಿಗಳನ್ನು ನಾವು ಎಂದೂ ಬಿಡುವದಿಲ್ಲ. ನಿಮಗೆ ಅಭಿವೃದ್ದಿಪಡಿಸುವ ಇಚ್ಚಾಶಕ್ತಿಯಿದ್ದರೆ ಯಥಾಸ್ಥಿತಿಯಲ್ಲಿರುವ ಆ ಗ್ರಾಮಗಳಿಗೆ ಅನುದಾನ ಒದಗಿಸಿ ಅಭಿವೃದ್ದಿ ಮಾಡುವಂತೆ ಅವರು ಎಚ್ಚರಿಸುತ್ತ, ಈಗಾಗಲೆ ಬೇರೆ ತಾಲೂಕಿನಲ್ಲಿರುವ ನಮ್ಮ ಮೂಲ ಗ್ರಾಮಗಳನ್ನು ಪುನ: ನಮ್ಮ ತಾಲೂಕಿಗೆ ಸೇರಿಸಬೇಕೆಂದು ರಮ್‌ಜಾನ್ ಒತ್ತಾಯಿಸಿದರು.

ನಾಗರಿಕ ವೇದಿಕೆಯ, ಜಿ.ಬಿ. ಕಂಬಾಳಿಮಠ, ಕೃಷ್ಣಾ ಜಾಲಿಹಾಳ, ಕರವೆ ತಾಲೂಕ ಅಧ್ಯಕ್ಷ ರೋಹಿತ ಬಾರಕೇರ, ಅರ್ಜುನ್ ಲಮಾಣಿ, ಮಹಾಂತೇಶ ಬಿಜಿಕಲ್, ರಾಜೇಂದ್ರ ಬಜಂತ್ರಿ, ಜಾಹಿರ್ ಸಂಗಮಕರ, ಮಂಜು ವಡ್ಡರ, ಅಶೋಕ ಪೂಜಾರಿ, ನಜೀರ ಧನ್ನೂರ, ಹುಸೇನಸಾಬ ಸಂದಿಮನಿ, ಶ್ರವಣ ಹಿರೇಮಠ, ನಮದ್ ಸಂದಿಮನಿ, ಮಹ್ಮದ್ ನದಾಫ್, ನರಸಪ್ಪ ಹಿರೇಮನಿ, ಬಸವರಾಜ ಪಾಲಥಿ, ಮಲ್ಲು ಕಟ್ಟಿಮನಿ, ಮಹಾಂತಗೌಟ ವಂಕಲಕುಂಟಿ, ಶರಣಪ್ಪ ಬೋವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ