ಜೂನ್ ೨೧ರಂದು ವಿಶ್ವ ೧೧ನೇ ಯೋಗ ದಿನಾಚರಣೆ
ಹುನಗುಂದ; ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕದ ಮೈದಾನದಲ್ಲಿ ಜೂನ್ ೨೧ರಂದು ಬೆಳಿಗ್ಗೆ ೬.೪೫ಕ್ಕೆ ವಿಶ್ವ ೧೧ನೇ ಯೋಗ ದಿನಾಚರಣೆ ಕಾರ್‍ಯಕ್ರಮ ನಡೆಯುವದೆಂದು ವಿಮ ಸಂಘದ ಗೌರವ ಕಾರ್‍ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು. ಗುರುವಾರ ಬೆಳಿಗ್ಗೆ ವಿಮ ಸಂಘದಲ್ಲಿ ನಡೆಸಿದ ಪತ್ರಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಖ್ಯಾತ ಯೋಗ ಶಿಕ್ಷಕ ಮಹಾಂತೇಶ ಗೌಡರ ಮತ್ತು ಸಂಸ್ಥೆಯಲ್ಲಿ ಕಾರ್‍ಯನಿರ್ವಹಿಸುವ ಎಲ್ಲ ಶಾಲೆಗಳ ಶಾರೀರಿಕ ಶಿಕ್ಷಕರ ಮಾರ್ಗದರ್ಶನಲ್ಲಿ ಈ ಯೋಗ ದಿನಾಚರಣೆ ಪ್ರಾತ್ಯಕ್ಷಿಕೆ ನಡೆಯಲಿದೆ. ಅಂದು ಬೆಳಿಗ್ಗೆ ೬.೪೫ಕ್ಕೆ ಪ್ರಾರಂಭವಾಗುವ ಯೋಗಾ ಕಾರ್‍ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಸಾರ್ವಜನಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲೊಳ್ಳಬೇಕು. ಜೊತೆಗೆ ಸಂಘದ ಅಡಿಯಲ್ಲಿ ನಡೆಯುವ ಎಲ್ಲ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮತ್ತು ಸಿಬ್ಬಂಗಳು ಹಾಗೂ ಸಂಸ್ಥೆಯ ನಿರ್ದೇಶಕ ಮಂಡಳಿ ಪಾಲ್ಗೊಳ್ಳಲಿದ್ದಾರೆ. ಈ ಯೋಗಾ ಕಾರ್‍ಯಕ್ರಮದಲ್ಲಿ ನಗರದ ಸಾರ್ವಜನಿಕರು ಪಾಲ್ಗೊಳ್ಳಲು ಶುಕ್ರವಾರ ಧ್ವನಿವರ್ಧಕ ಮೂಲಕ ಪ್ರಚಾರ ನೀಡಲಾಗುವದೆಂದು ಡಾ. ಕಡಪಟ್ಟಿ ತಿಳಿಸಿದರು. ಹಿರಿಯ ನಿರ್ದೇಶಕ ಬಸವರಾಜ ಕೆಂದೂರ, ಡಾ. ದೇಸಾಯಪ್ಪ ಹವಾಲ್ದಾರ, ರಾಚಪ್ಪ ರಾಜಮನಿ, ವೀರಣ್ಣ ಬಳೂಟಗಿ, ಅರುಣ ದುದ್ಗಿ ಇದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.