ತಂತ್ರಜ್ಞಾನದ ಮೂಲಕ ಕಳೆದುಕೊಂಡ ೨೧ ಮೊಬೈಲಗಳನ್ನು ಹುಡುಕಿ ಕೊಟ್ಟ ಪೊಲಿಸರು
ಹುನಗುಂದ; ಠಾಣಾ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಲ್ಲಿ ಕಳೆದುಕೊಂಡ ಮೊಬೈಲಗಳನ್ನು ನೂತನ ಯ್ಯಾಪ್ ತಂತ್ರಜ್ಞಾನದ ಮೂಲಕ ಶೀಘ್ರದಲ್ಲಿ ಪತ್ತೆ ಹಚ್ಚಿ ೨೧ ಮೊಬೈಲಗಳನ್ನು ಹುಡುಕಿ ಮತ್ತೆ ಮಾಲಿಕನಿಗೆ ಕೊಡಲುವಲ್ಲಿ ಹುನಗುಂದ ಠಾಣಾ ಪೊಲಿಸ್ ಸಿಬ್ಬಂದಿಗಳ ಕಾರ್‍ಯ ಶ್ಲಾಘನೀಯವೆಂದು ಕಾನೂನು ಸುವ್ಯವಸ್ಥೆ ಪಿಎಸ್‌ಐ ಪ್ರಕಾಶ ಡಿ. ಹೇಳಿದರು. ಇಲ್ಲಿನ ಪೊಲಿಸ್ ಠಾಣಾದಲ್ಲಿ ಸಿಕ್ಕಂತ ಮೋಬೈಲಗಳನ್ನು ವಿತರಿಸಿ ಅವರು ಮಾತನಾಡುತ್ತ ಕಳೆದುಕೊಂಡ ಮೋಬೈಲ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತಗಳನ್ನು ಒದಗಿಸಿದಾಗ ಇ ಲಾಸ್ಟ್ ಎನ್ನುವ ಹೊಸ ಯ್ಯಾಪ್ ಬಳಸಿ ಪೊಲಿಸ್ ಸಿಬ್ಬಂದಿ ಕಳೆದ ವಸ್ತುಗಳನ್ನು ಪತ್ತೆ ಹಚ್ಚಿರುತ್ತಾರೆ. ತಂತ್ರಜ್ಞಾನ ಬಹಳ ವೇಗದಲ್ಲಿರುವದರಿಂದ ಸಾರ್ವಜನಿಕರು ತಮ್ಮ ಪ್ರತಿಯೊಂದು ವಸ್ತುವಿನ ಬಗ್ಗೆ ಕಾಳಜಿ ವಹಿಸಿ ರಕ್ಷಿಸಿಕೊಳ್ಳಬೇಕು. ನಿಷ್ಕಾಳಜಿಯಾದರೆ ಕಳೆದ ವಸ್ತು ಸಿಗಬಹುದು ಸಿಗಲಿಕ್ಕಿಲ್ಲ ಆದರೂ ಎಚ್ಚರಿಕೆ ಇರಬೇಕು ಎಂದರು. ಅಪರಾಧ ವಿಭಾಗದ ಪಿಎಸ್‌ಐ ಎಂ.ಎಸ್. ಮಹಾರಾಜನವರ ಮಾತನಾಡಿ ಸಾರ್ವಜನಿಕರ ರಕ್ಷಣೆಗೆ, ಕಳ್ಳತನ ಪತ್ತೆ ಹಚ್ಚುವಲ್ಲಿ, ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲಿಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುತ್ತದೆ. ಆದಾಗ್ಯೂ ಸಹಿತಿ ಎಲ್ಲೊ ಒಂದು ದುರ್ಘಟಣೆ ನಡೆಯುತ್ತದೆ. ಅದು ಯಾವ ಕಾಲಕ್ಕೂ ಪೊಲಿಸ್ ಇಲಾಖೆಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎಂದರು. ಪೊಲಿಸ್ ಸಿಬ್ಬಂದಿಗಳಾದ ನಾಗರಾಜ ಕುಂದರಗಿ, ಬಸವರಾಜ ಗೌಡರ, ಎನ್.ಸಿ. ಪಾಟೀಲ, ವಿಜಯ ರಾಠೋಡ, ಶಿವರಾಜ ವಾಲಿಕಾರ, ಎಸ್.ವೈ.ಬಜಂತ್ರಿ ಇದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.