Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಚೆ ಸೇವೆ ಹೊಸ ತಂತ್ರಾಂಶಗಳ ಬಳಕೆಗೆ ಬಾಗಲಕೋಟ ಜಿಲ್ಲೆ ಆಯ್ಕೆ

ಹುನಗುಂದ; ಹೊಸ ತಂತ್ರಾಂಶಗಳ ಬಳಕೆಗೆ ಬಾಗಲಕೋಟ ಜಿಲ್ಲೆ ಆಯ್ಕೆಯಾದಂತೆ ಜಿಲ್ಲೆಯಾದ್ಯಂತ ೪೬ ಎಲ್ಲ ಅಂಚೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದ್ದು ಎಲ್ಲ ಕಚೇರಿಗಳೂ ಗಣಕೀಕರಣಗೊಂಡಿದ್ದು ಸೌಲಭ್ಯ ನೀಡಲು ಸಿದ್ದವಾಗಿದೆ ಎಂದು ಅಂಚೆ ನಿರೀಕ್ಷಕ ಎಸ್. ಜಿ. ಪಾಟೀಲ ಹೇಳಿದರು. ಬುಧವಾರ ಇಲ್ಲಿ ಮುಖ್ಯ ಅಂಚೇರಿಯಲ್ಲಿ ನಡೆಸಿದ ಅಂಚೆ ಸೇವೆ ಆನ್‌ಲೈನ್ ಸೇವೆ ಕಾರ್‍ಯಕ್ರಮವನ್ನು ಕೇಕ್ ಕಟ್ ಮಾಡುವ ಮೂಲಕ ಉದ್ಘಾಟನೆಗೊಂಡ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತ ಇಲಾಖೆ ಅಡ್ವಾನ್ಸಡ್ ಪೋಸ್ಷಲ್ ಟೆಕ್ನಾಲಜಿ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ ಹೊಸ ಯೋಜನೆಗೆ ಮೈಸೂರ ಮತ್ತು ಬಾಗಲಕೋಟ ಅಂಚೆವಿಭಾಗಗಳನ್ನು ಇಲಾಖೆ ಆಯ್ಕೆ ಮಾಡಿದ್ದು ಇದರ ಯಶಸ್ವಿ ಬಳಿಕ ದೇಶಾದ್ಯಂತ ಗ್ರಾಹಕರಿಗೆ ಸೇವೆ ನಿಲುಕಲಿದೆ ಎಂದರು. ಮಂಜುನಾಥ ಮಾತನಾಡಿ ಈ ಹೊಸ ತಂತ್ರಾಂಶದಿಂದ ಗ್ರಾಹಕರ ಸರಕು ಮತ್ತು ಪತ್ರಗಳ ರವಾನೆಯನ್ನು ಆನ್‌ಲೈನ್ ಸೌಲಭ್ಯದಡಿ ಒದಗಿಸಲಾಗುತ್ತಿದೆ. ಸಧ್ಯ ಈಪ್ರಯೋಗವನ್ನು ನೋಡಿಕೊಂಡು ರಾಷ್ಟ್ರದಾದ್ಯಂತ ಇಲಾಖೆ ಯೊಜನೆ ರೂಪಿಸಿದೆ. ಹೊಸ ಹೊಸ ತಂತ್ರಜ್ಞಾನದ ಓಟದ ಜೊತೆಗೆ ಸಮಯ ದ್ಭಳಕೆಯಾಗುವಂತೆ ಎಲ್ಲ ಸೌಲಭ್ಯಗಳನ್ನು ಹೊಸದಾಗಿ ಗಣಕೀಕೃತಗೊಳಿಸಿ ಅಂಚೆ ಇಲಾಖೆ ಗ್ರಾಹಕರಿಗೆ ಇನ್ಮುಂದೆ ಸರಳ ವ್ಯವಸ್ಥೆ ಕಲ್ಪಿಸುತ್ತಿದ್ದು, ನಮ್ಮ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳಲ್ಲಿ ಗಣಕೀಕೃತ ಸೌಲಭ್ಯ ಜಾರಿಗೆ ಎಲ್ಲ ಸಿದ್ದತೆ ಪೂರ್ಣಗೊಂಡಿದೆ ಎಂದು ಮಂಜುನಾಥ ತಿಳಿಸಿದರು. ತಾಲೂಕ ಪಂಚಾಯತ್ ಕಾರ್‍ಯನಿವಾಹಕ ಅಧಿಕರಿ ಮಜುರಳೀಧರ ದೇಶಪಾಂಡೆ ಕೇಕ್ ಕಟ್ ಮಾಡುವ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿದರು. ನಗರ ಮುಖ್ಯ ಅಂಚೆ ಕಚೇರಿ ಸಿಬ್ಬಂದಿ ಸೇರಿ ಒಟ್ಟು ೩೨ ಸಿಬ್ಬಂದಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾಕ್ಸ್; ಇಂದಿನಿಂದ ಬುಕ್ಕಿಂಗ್ ಹಾಗೂ ಡೆಲಿವ್ಹರಿ ಸೌಭ್ಯ ಆನ್ ಲೈನ್ ಆಗಲಿವೆ. ಗ್ರಾಹಕರು ಅಂಚೆ ಮೂಲಕ ವಸ್ತಯೊಂದನ್ನು ಕಳಿಸಬೇಕಿದ್ದರೆ ಆನ್‌ಲೈನ್ ಬುಕ್ಕ ಮಾಡಬಹುದು. ನಿಗದಿತ ಶುಲ್ಕ ಆಕರಿಸಿ ಈ ಸೇವೆ ಒದಗಿಸಲಾಗುತ್ತಿದೆ. ಬುಕ್ ಮಾಡಿದ ನಂತರ ಪೋಸ್ಟ್ ಮನ್ ಮನೆಗೆ ಬಂದು ಪಾರ್ಸಲ್ ಪಡೆಯುತ್ತಾರೆ. ಪಾರ್ಸಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಇದರಡಿ ತಮ್ಮ ಪಾರ್ಸಲೆ ಎಲ್ಲಿದೆ ಎಂಬ ಮಾಹಿತಿಯನ್ನು ಆನ್‌ಲೈನ್ ಮೂಲಕ ಪಡೆಯಬಹುದು. ಜಿ.ಎಸ್. ಗುಂಜಿ ಅಂಚೆ ಪಾಲಕ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ