Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೆಚ್ಚು ಮಕ್ಕಳನ್ನು ಹೆತ್ತರೆ ಮಾತ್ರ ಜೈನ ಧರ್ಮಕ್ಕೆ ಉಳಿಗಾಲ: 108 ಕುಲರತ್ನ ಭೂಷಣ ಮುನಿ

ಅಥಣಿ: ಜೈನ ಧರ್ಮದ ಸಮುದಾಯದವರ ಮನೆ ತುಂಬ ಮಕ್ಕಳಿರಲಿ. ಮಕ್ಕಳನ್ನು ಸಾಕಲಾಗದೆ ತೊಂದರೆಯಾದರೆ ಮುಂಬರುವ ದಿನಗಳಲ್ಲಿ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಗುರುಕುಲ ತೆಗೆಯಲಾಗುವುದು. ಅಲ್ಲಿ ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಂಸ್ಕಾರ ಜೈನ ಧರ್ಮದ ಆಚಾರ ವಿಚಾರ ತಿಳಿಸಿಕೊಡಲಾಗುವುದು ಎಂದು  ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ಹೇಳಿದರು.

ಸಮೀಪದ ಮಹೇಶವಾಡಗಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹಾಮಹೋತ್ಸವದ ತೀರ್ಥಂಕರ ಜನ್ಮ ಕಲ್ಯಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ಜೈನ ಧರ್ಮದ ಉಳಿವಿಗಾಗಿ ಅದರ ಪಾಲನೆಗಾಗಿ ಜೈನ ಬಂಧುಗಳು ಹೆಣ್ಣಾಗಲಿ ಗಂಡಾಗಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ಜೈನ ಧರ್ಮದ ಜನಸಂಖ್ಯೆ ಹೆಚ್ಚಾದರೆ ಮಾತ್ರ ಜೈನ ಧರ್ಮಕ್ಕೆ ಉಳಿಗಾಲವಿದೆ.


ಹೆಣ್ಣು ಮಕ್ಕಳು ಜನಿಸಿದ ಮನೆಯಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ಆಹಾರ ಸೇವಿಸಲಾಗುವುದು ಎಂಬ ಪ್ರತಿಜ್ಞೆ ಮಾಡಲಿದ್ದೇವೆ. ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ದೂರಾಗಬೇಕು. ಮಗನಿಗೆ ಸೊಸೆಯಾಗಿ ಹೆಣ್ಣು ಬೇಕು ಆದರೆ ಸ್ವಂತ ಮಗಳಾಗಿ ಹೆಣ್ಣು ಮಗಳು ಬೇಡ ಎನ್ನುವುದು ಮೂರ್ಖತನವಾಗಿದೆ ಎಂದು ಹೇಳಿದ ಅವರು ತೀರ್ಥಂಕರ ಜನ್ಮ ಕಲ್ಯಾಣ ಜನ್ಮ ಅಭಿಷೇಕ ನಾಮಕರಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಜೈನ ಪುಣ್ಯ ಕ್ಷೇತ್ರ ಶಿಖರಜಿಗೆ ಹೋಗಿ ಬಂದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.


ಆಚರಿ ಶ್ರೀ 108 ಉತ್ತಮ ಸಾಗರ ಮುನಿ ಮಹಾರಾಜರ ಮಾತನಾಡಿ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಜೈನ ಧರ್ಮದವರು ಹೆಚ್ಚು ಮಕ್ಕಳನ್ನು ಹೆತ್ತರೆ ಸಾಕಲು ಸಲುವಲು ಹೆದರುವ ಅವಶ್ಯಕತೆ ಇಲ್ಲ ತೀರ್ಥಂಕರ ಆಶೀರ್ವಾದವಿರುತ್ತದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಶ್ರೀ 108 ಶಾಂತಿಧರ್ಮ ಮಹರಾಜರು, 105 ಕರುಣಾಮತಿ ಮಾತಾಜಿ, 105 ದರ್ಶನ ಭೂಷಣಮತಿ ಮಾತಾಜಿ, 105 ಜ್ಞಾನ ಭೂಷಣಮತಿ ಮಾತಾಜಿ, 105 ಚಾರಿತ್ರ್ಯ ಭೂಷಣಮತಿ ಮಾತಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜನ್ಮ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿವಿಧ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.1 ಎನ್ ಡಿ ಆರ್ ಫೊಟೋ ಶಿರ್ಷಿಕೆ 1  ಮಹಿಷವಾಡಗಿ ಗ್ರಾಮದ ಪಂಚಕಲ್ಯಾಣ ಮಹೋತ್ಸವದಲ್ಲಿ   ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ಸಪ್ತ ಮಕ್ಕಳಿಗೆ ಜನ್ಮ ನೀಡಿರುವ ವಿವೇಕಾನಂದ ಯಲಗುದ್ರಿ ದಂಪತಿಗಳನ್ನು ಆಶೀರ್ವದಿಸಿ ಸತ್ಕರಿಸಿದರು. ಆಚಾರ್ಯ ಶ್ರೀ 108 ಉತ್ತಮ ಸಾಗರ ಮುನಿ ಮಹಾರಾಜರು ಇದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ