ಸಂಕೇಶ್ವರ: ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ ಕನ್ನಡ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ 2025 26 ನೇ ಸಾಲಿನ ಶಾಲೆಯ ಫಲಿತಾಂಶ 100 ಪ್ರತಿಶತ ಆಗಿರುತ್ತದೆ. ಪ್ರಥಮ ಕ್ರಮಾಂಕ ಲಕ್ಷ್ಮಿ ಸಿದ್ದೇಶ್ವರ ಸುಲ್ತಾನಪುರೆ, 625/615 98,40% ದ್ವಿತೀಯ ಕ್ರಮಾಂಕ ವರುಣ್ ಚಿದಾನಂದ ಸ್ವಾಮಿ, 625/599 95,84% ತೃತಿಯ ಕ್ರಮಾಂಕ ಓಂಕಾರ್ ಚಂದ್ರಕಾಂತ್ ಮಂಗಸೂಳಿ, 625/587 93,92% ನಂತರ ಆದರ್ಶ ಶಂಕರ್ ಲಕ್ಷ್ಮೇಶ್ವರ, 625/587 93,92% ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಉತ್ತಮ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಎಸ್ ಡಿ ವಿ ಎಸ್ ಸಂಘದ ಕಾರ್ಯಧ್ಯಕ್ಷರಾದ ಹಾಗೂ ಮಾಜಿ ಸಚಿವ ಎ. ಬಿ. ಪಾಟೀಲ್ ಸ್ಥಾನಿಕ ನಿಯಂತ್ರಣ ಸಮಿತಿ ಅಧ್ಯಕ್ಷ ಬಾಳಸಾಹೇಬ್ ವೈರಾಗಿ ಸಂಘದ ಕಾರ್ಯದರ್ಶಿಗಳಾದ ಜಿ. ಸಿ. ಕೋಟಿಗಿ ಆಡಳಿತ ಅಧಿಕಾರಿಗಳಾದ ಡಾಕ್ಟರ್ ಬಿ. ಎ. ಪೂಜಾರಿ ಮುಖ್ಯ ಅಧ್ಯಾಪಕಿ ಶ್ರೀಮತಿ ಕೆ. ಎಂ. ಕೋಳಿ ಶ್ರೀ ಡಿ ಎ ಬಡಕರ ಪ್ರಭಾರಿ ಮುಖ್ಯಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.