Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಐಆರ್ ನಮೂನೆ ವಿತರಣೆಯಲ್ಲಿ ಶೇ.100 ರಷ್ಟು ಪ್ರಗತಿ

ಬಳ್ಳಾರಿ ಗ್ರಾಮೀಣ ಮತ್ತು ನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ



ಬಳ್ಳಾರಿ,ಜು.18 ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 93-ಬಳ್ಳಾರಿ ಗ್ರಾಮೀಣ ಮತ್ತು 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಭೇಟಿ ನೀಡಿ ವಿತರಿಸುವ ಗಣತಿ ನಮೂನೆ ಕಾರ್ಯವು ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ.
ಕ್ಷೇತ್ರವಾರು ವಿತರಣೆ ವಿವರ:
*93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:*
ಈ ಕ್ಷೇತ್ರದಲ್ಲಿ ಒಟ್ಟು 2,51,325 ಮತದಾರರಿದ್ದು, ಇವರಿಗಾಗಿ ಒಟ್ಟು 236 ಮತಗಟ್ಟೆಗಳಿದ್ದು, ಒಟ್ಟು ಶೇ. 97.21 ರಷ್ಟು ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ.
ವಿತರಿಸಲಾದ 2,51,325 ಗಣತಿ ನಮೂನೆಗಳ ಪೈಕಿ 1,29,589 ನಮೂನೆಗಳು (ಶೇ. 51.56) ಗಣಕೀಕರಣಗೊಂಡಿವೆ. ಜೊತೆಗೆ 393 ನಮೂನೆಗಳು ಆನ್‌ಲೈನ್ ಮೂಲಕ ಸ್ವೀಕೃತವಾಗಿವೆ.
ಒಟ್ಟು 7,154 ಮತದಾರರನ್ನು ವಿವಿಧ ವರ್ಗಗಳಡಿ ಗುರುತಿಸಲಾಗಿದೆ. ಇದರಲ್ಲಿ 3,047 ಮರಣ ಹೊಂದಿದ ಮತದಾರರು, 3,314 ಶಾಶ್ವತ ವಲಸೆ ಹೊಂದಿರುವವರು, 712 ಪುನರಾವರ್ತಿತ ಮತದಾರರು, 62 ಗೈರು ಹಾಜರಿ ಮತ್ತು 19 ಇತರೆ ಪ್ರಕರಣಗಳಿವೆ.
*94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:*
ಈ ಕ್ಷೇತ್ರದಲ್ಲಿ ಒಟ್ಟು 2,79,144 ಮತದಾರರಿದ್ದು, 261 ಮತಗಟ್ಟೆಗಳನ್ನು ಒಳಗೊಂಡಿದೆ. ಶೇ. 98.01 ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ವಿತರಿಸಲಾದ 2,79,144 ಗಣತಿ ನಮೂನೆಗಳ ಪೈಕಿ 1,10,297 ನಮೂನೆಗಳು (ಶೇ. 39.51) ಗಣಕೀಕರಣಗೊಂಡಿವೆ. ಆನ್‌ಲೈನ್ ಮೂಲಕ 962 (ಶೇ. 0.34) ನಮೂನೆಗಳು ಸ್ವೀಕೃತವಾಗಿವೆ.
ಒಟ್ಟು 3,932 ಮತದಾರರನ್ನು ವಿವಿಧ ವರ್ಗಗಳಡಿ ಗುರುತಿಸಲಾಗಿದ್ದು, ಇದರಲ್ಲಿ 2,198 ಮರಣ ಹೊಂದಿದ ಮತದಾರರು, 1,329 ಶಾಶ್ವತ ವಲಸೆ ಹೊಂದಿರುವವರು, 343 ಈಗಾಗಲೇ ನೋಂದಾಯಿತರಾಗಿರುವವರು, 32 ಗೈರು ಹಾಜರಿ ಇರುವವರು, 30 ಇತರೆ ಪ್ರಕರಣಗಳು ಒಳಗೊಂಡಿವೆ.
ಎಸ್‌ಐಆರ್ ಅಂಗವಾಗಿ ಮನೆ ಮನೆಗೆ ವಿತರಿಸಲಾಗಿರುವ ಪ್ರಿ-ಪ್ರಿಂಟೆಡ್ ಭಾವಚಿತ್ರ ಹೊಂದಿರುವ ‘ಗಣತಿ ನಮೂನೆ' ಅನ್ನು ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು 93-ಬಳ್ಳಾರಿ ಗ್ರಾಮೀಣ ಮತದಾರರ ನೋಂದಣಾಧಿಕಾರಿಯೂ ಆದ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಮತ್ತು 94- ಬಳ್ಳಾರಿ ನಗರ ಮತದಾರರ ನೋಂದಣಾಧಿಕಾರಿ ಆಗಿರುವ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ