ನೇಸರಗಿ. ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ದಿ. 14 ರಂದು ರಾತ್ರಿ ಗ್ರಾಮದ ಎಲ್ಲ ಭಜನಾ ಮಂಡಳಿಗಳಿಂದ ಮಳೆಗಾಗಿ ಪ್ರಾರ್ಥಿಸಿ ಭಕ್ತಿ ಭಜನೆ ಜಾಗರಣೆ ನೆರವೇರಿದವು. ಮತ್ತು ದಿ. 15 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಗೆ ಪೂಜಾ ಕಾರ್ಯಕ್ರಮ, ಗಂಗಾ ಪೂಜೆ,ಗಣಪತಿ ಪೂಜೆ, ಉಮಾಮಹೇಶ್ವರರ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶತ ನಾಮಾವಳಿ,ಮಹಾ ಮಂಗಳಾರತಿ,ಮಹಾಪ್ರಸಾದ ವಿಶೇಷವಾಗಿರುವಂತಹ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವೇದಬ್ರಹ್ಮ ವಿಶ್ವನಾಥ ಗುರೂಜಿ ವಹಿಸಿದ್ದರು. ಸಂಗಪ್ಪ ಗುಜನಟ್ಟಿ, ಮಹದೇವ ಕಾರಜೋಳ,ಮಲ್ಲಪ್ಪ ಗುಜನಟ್ಟಿ, ಸಿದ್ದಯ್ಯ ಚರಂತಿಮಠ, ಗುರುಪಾದಯ್ಯ ಚರಂತಿಮಠ,ಮಹಾಂತೇಶ ಮರಿಯಪ್ಪನವರ,ಬಸಪ್ಪ ಕಗ್ಗಣಗಿ,ಜಗದೀಶ ಕರಡಿ, ಬಸವರಾಜ ಕಾರಜೋಳ,ಬಸವರಾಜ ಹಾತರಕಿ, ಈರಣ್ಣ ಮೂಲಿಮನಿ,ಗಂಗಪ್ಪ ಗಲಿಬಿ ಮಲ್ಲಿಕಾರ್ಜುನ ಸೋಮಣ್ಣನವರ ಹಾಗು ಗ್ರಾಮದ ಎಲ್ಲ ಸಮಾಜದ ಜನತೆ ಪಾಲ್ಗೊಂಡು ಆ ಭಗವಂತನಲ್ಲಿ ಮಳೆಗಾಗಿ ಪ್ರಾರ್ಥಿಸಿದರು.