Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರ ಅನುದಾನದಿಂದ ಸೈನಿಕ ಭವನ


ಬೈಲಹೊಂಗಲ: ಯುವಸಮುದಾಯ ದುಶ್ಚಟಕ್ಕೆ  ಬಲಿಯಾಗದೆ ದೈಹಿಕ ಸಾಮರ್ಥ್ಯಕ್ಕೆ   ಒಲವು ಕೊಡುವ ಉದ್ದೇಶದಿಂದ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಅನುದಾನದಲ್ಲಿ ಸೈನಿಕ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಗಣೇಶ ಪಿಕೆಪಿಎಸ್ ಅಧ್ಯಕ್ಷ ಗುರುಪಾದ ಕಳ್ಳಿ ಹೇಳಿದರು.


   ಸಮೀಪದ ಹೊಸೂರ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಮಾಜಿ ಸೈನಿಕರ ಸಂಘದ ಕಾರ್ಯಲಯ ನಿರ್ಮಾಣಕ್ಕಾಗಿ ಸೈನಿಕ ಭವನದ ಭೂಮಿ ಪೂಜಾ ನೆರವೆರಿಸಿ ಮಾತನಾಡಿ, ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೊಗಿ ದುಶ್ಚಟಕ್ಕೆ ಬಲಿಯಾಗಿ ತಮ್ಮ ಪ್ರಾಣಗಳಿಗೆ ಕುತ್ತು ತಗೆದುಕೊಳ್ಳುತಿದ್ದಾರೆ. ವಾಹನ ಅಪಘಾತದಲ್ಲಿ 35 ವರ್ಷದೊಳಗಿನ ಯುವಕರ ಸಾವಿನ ಸಂಖ್ಯೆ ಪ್ರತಿಶತ 85ರಷ್ಟಿದೆ.   ಕುಡಿತ, ಗಾಂಜಾ, ಗುಡ್ಕಾ ಮಟ್ಕಾ, ಜುಜೂ, ಬೆಟ್ಟಿಂಗ್ ದಂತಹ ಚಟಗಳು ಮನೆ ಮಾಡುತ್ತಿವೆ. ಇಂತವುಗಳಿಂದ ಯುವಕರನ್ನು ರಕ್ಷಿಸುವ ಕಾರ್ಯ ನಾಗರಿಕ‌ ಸಮಾಜದಲ್ಲಿರುವ ಪ್ರಜ್ಞಾವಂತರ  ಕರ್ತವ್ಯವಾಗಿದೆ.


ಈ ಉದ್ದೇಶದಿಂದ ಮಾಜಿ ಸೈನಿಕರಿಗೆ ಸೈನಿಕ ಭವನ ನಿರ್ಮಿಸಿ ಗ್ರಾಮದ ಯುವಕರಿಗೆ ದೈಹಿಕ ಸಾಮರ್ಥದ ಕಸರತ್ತುಗಳನ್ನು ಕಲಿಸಲು ಅನಕೂಲಕರವಾಗುವಂತೆ ಗ್ರಾಮದ ಹೊರ ವಲಯದಲ್ಲಿ ಸೈನಿಕ ಭವನ ನಿರ್ಮಿಸಲಾಗುತ್ತಿದೆ. ಸೈನಿಕರ ಶಿಸ್ತು ಸಂಯಮ, ದೈಹಿಕ ದೃಡತೆ ಹಾಗೂ ಸಮಯಪಾಲನೆಯನ್ನು ಯುವಕರಲ್ಲಿ ಅಳವಡಿಕೊಳ್ಳಲು ಅನುಮಾಡಿಕೊಡಲಾಗಿದೆ ಎಂದರು.


    ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಮಾಜಿ ತಾಪಂ‌ ಸದಸ್ಯ ಜಗದೀಶ ಬೂದಿಹಾಳ,

 ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ, ಮಾಜಿ ಸೈನಿಕರಾದ ಮಲ್ಲಿಕಾರ್ಜುನ ಇಂಗಳಗಿ, ಈಶ್ವರ ಹುಡೇದ, ಮಹೇಶ ಬೋಳೆತ್ತಿನ,ಶಿವಾನಂದ  ಶಿಂತ್ರಿ, ಸೋಮನಿಂಗ ಸೋಮನಟ್ಟಿ, ಮಲ್ಲಿಕಾರ್ಜುನ ಹಪ್ಪಳ್ಳಿ, ಮಡಿವಾಳಪ್ಪ ಬಾಗೇವಡಿ, ಫಕೀರಪ್ಪ ಕುರಿ, ಮಡಿವಾಳಪ್ಪ ಚಳಕೊಪ್ಪ, ಸೋಮು ವಣ್ಣೂರ, ಶಿವಾಜಿ ಪಾಟೀಲ, ಬಸಪ್ಪ ಹುಂಡೆಕಾರ, ಈರಣ್ಣ ಬೆಂಡಿಗೇರಿ, ಸುರೇಶ ರೊಟ್ಟಿ, ಗ್ರಾಪಂ‌ ಸದಸ್ಯರಾದ ಈರಣ್ಣ ಸಂಪಗಾಂವ, ಮಲ್ಲಿಕಾರ್ಜುನ ಕರಡಿಗುದ್ದಿ, ಬಸವರಾಜ ಬಾಳೆಕುಂದರಗಿ, ಮುನೀರ ಶೇಖ, ಮುಶೆಪ್ಪ ಜಡಿ, ಸಂಜು ಪಾಟೀಲ, ಮಡಿವಾಳಪ್ಪ ಕಮತಗಿ, ಮಲ್ಲವ್ವ ಬಾರಿಗಿಡದ, ದೀಪಾ ಪಾಟೀಲ, ಗೌಡಪ್ಪ ಹೊಸಮನಿ, ಸಾಗರ ವಣ್ಣೂರ, ಮೊಹನ ವಕ್ಕುಂದ ಇದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ