Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ಲಭಿಸುವದು - ಪವನ ಕತ್ತಿ


ಹುಕ್ಕೇರಿ.ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ಜೋತೆಗೆ ಧನ್ಯತಾ ಭಾವನೆ ಮೂಡುವದು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪನನವಕತ್ತಿ ಹೇಳಿದರು.


ಹುಕ್ಕೇರಿ ನಗರದ ಸಂತ ನಿರಂಕಾರಿ ಸತ್ಸಂಗ ಮಂಡಳ ವತಿಯಿಂದ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ನಿರಂಕಾರಿ ಸತ್ಸಂಗ ಮಂಡಳಿ ವತಿಯಿಂದ ಚಂದ್ರಶೇಖರ ಗಂಗಣ್ಣವರ ಮತ್ತು ಸಿದ್ದೇಶ್ ಬೆನಾಡಿಕರ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.


ಹುಕ್ಕೇರಿ ಸೆಕ್ಟರ್ ಸಂತ ನಿರಂಕಾರಿ ಮಂಡಳಿ ಜ್ಞಾನ ಪ್ರಚಾರಕ ಮುಖಿ ಮಾರುತಿ ಮೋರೆ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಸದ್ಗುರು ಮಾತಾ ಸುದಿಕ್ಷಾ ಹರದೇವಜಿ ಮಹಾರಾಜರ ಕೃಪೆಯಿಂದ ಮಾನವ ಏಕತಾ ದಿವಸ ಅಂಗವಾಗಿ ಭಾರತ ದೇಶದಲ್ಲಿ ಇಂದು ರಕ್ತದಾನ ಶಿಬಿರಗಳು ಜರಗುತ್ತಿವೆ,ಅದೆ ರೀತಿ ಇಂದು ಹುಕ್ಕೇರಿ ಶಾಖೆಯಲ್ಲಿ ಸುನಿಲ್ ಕುಮಾರ ರಾತ್ರಾಜಿ ಯವರ ಆದೇಶದ ಅನುಸಾರ ವಿವಿಧ ಶಾಖೆಗಳ ಸದ್ಬಕ್ತರು ಬಂದು ರಕ್ತದಾನ ಮಾಡುತ್ತಿದ್ದಾರೆ, ಒಬ್ಬರು ರಕ್ತ ದಾನ ಮಾಡುವದರಿಂದ ನಾಲ್ಕು ಜನರ ಜೀವ ಉಳಿಸ ಬಹುದು ಎಂದರು.


ವೇದಿಕೆ ಮೇಲೆ ಡಾ, ಡಿ ಎನ್ ಮಿಸಾಳೆ, ವಿಕಾಸ ಕಲಘಟಗಿ, ಎಸ್ ಎನರ ಮೂಲಿಮನಿ, ಎಸ್ ವಿ ವಿರಾಗಿ,ಡಿ ಎಮ್ ಗುರವ, ಸಂಜಯ ಕುಸ್ತಿಗಾರ ಉಪಸ್ಥಿತರಿದ್ದರು.


ಪವನ ಕತ್ತಿ ಮಾತನಾಡಿ ರಕ್ತದಾನ ಮಹಾ ದಾನವಾಗಿದೆ ಒಬ್ಬರು ನಿಡುವ ರಕ್ತ ಇನ್ನೊಬ್ಬರ ಜೀವ ಉಳಿಸಿದ ಪುಣ್ಯರ್ದಂದಿಗೆ ಧನ್ಯತಾ ಭಾವನೆ ಮೂಡುವದು ಇದಕ್ಕಾಗಿ ಸಂತ ನಿರಂಕಾರಿ ಮಂಡಳಿ ಸಂಸ್ಥೆ ಮನುಷ್ಯನ ರಕ್ತ ದೇಹದಲ್ಲಿ ಹರಿಯ ಬೇಕೆ ಹೋರತು ನಾಲೆಗಳಲ್ಲಿ ಅಲ್ಲ ಎಂಬ ಘೋಷನೆಯೊಂದಿಗೆ ದೇಶದಲ್ಲಿ ಪ್ರತವರ್ಷ ರಕ್ತದಾನ ಶಿಬಿರ ಹಮ್ಮಿಕೊಂಡು ಇನ್ನೊಬ್ಬರ ಜೀವ ಕಾಪಾಡುವ ಕಾರ್ಯ ಮಾಡುತ್ತಿದೆ ಈ ಸಂಸ್ಥೆ ಯ ಕಾರ್ಯ ಶ್ಲಾಘನೀಯ ವಾಗಿದ್ದು ಎಂದರು.


ನಂತರ ಬೆಳಗಾವಿ ಕೆ ಎಲ್ ಇ ಆಸ್ಪತ್ರೆ , ಗಡಿಂಗ್ಲಜ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ ಕ್ಲಬ್ ಸಹಯೋಗ ನೂರಾರು ಯುವಕ ಯುವತಿಯರ ರಕ್ತ ಸಂಗ್ರಹಿಸಲಾಯಿತು.

 ಡಾ, ಗುರವ ಮತ್ತು ಮಿಸಾಳೆ ಯವರು ರಕ್ತದಾನ ಮತ್ತು ಅದರ ಪ್ರಯೋಜನೆ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದರು.


ಕಳೆದ ಏಳು ದಿನದಿಂದ ವಿವಿಧ ನಗರಗಳಲ್ಲಿ ರಕ್ತದಾನ ಶಿಬಿರ ಕುರಿತು ಜಾಗ್ರತಾ ಜಾಥ ಹಮ್ಮಿಕೋಳ್ಳಲಾಗಿತ್ತು.  ಈ ಸಂದರ್ಭದಲ್ಲಿ ಬಿ ಎನ್ ಕೋಳೆಕರ, ಸಿದ್ದೇಶ ಬೆನಾಡಿಕರ, ಭರಮಣ್ಣಾ ಜಾಧವ, ಚಂದು ಗಂಗಣ್ಣವರ, ಅಶೋಕ ಕಲಾಜ, ಕೆಂಪಣ್ಣಾ ಅಂಬಲೆ, ರಮೇಶ ಭೋವಿ,ಸಂಜಿವ ತಿಬಲೆ, ಕಲಗೌಡ ಪಾಟೀಲ,  ಬಸವರಾಜ ಸದ್ರೆ, ಸಂದೀಪ ಸೂರ್ಯವಂಶಿ, ರಾಜು ಕೋಷ್ಟಿ, ರವಿ ಕದಮ, ಸುನಿತಾ ಮೋರೆ, ಸುವರ್ಣಾ ಅಂಬಲೆ, ಸುಧಾ ಕಲಾಜ, ಸ್ವಪ್ನಾ ಮತ್ತು ಸವಿತಾ ಬೆನಾಡಿಕರ, ಲಕ್ಷ್ಮಿ ಜಾಧವ ಮೊದಲಾದವರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ