Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಯಶಸ್ಸಿಗೆ ಗುರುವಿನ ಮಾರ್ಗದರ್ಶನ ಅಗತ್ಯ: ಶ್ರೀ ಗುರುಸಿದ್ಧ ಮಹಾಸ್ವಾಮಿಗಳು

ಲಿಂಗಾಯತ ಮಹಿಳಾ ಸಮಾಜದದಿಂದ ʻಗುರು ಕಾರುಣ್ಯʼ ನಿಮಿತ್ಯ ಗುರುವಂದನಾ ಕಾರ್ಯಕ್ರಮ

ಬೆಳಗಾವಿ: ಪ್ರತಿಯೊಬ್ಬ ವ್ಯಕ್ತಿ ಗುರುವಿನ ಮಾರ್ಗದಲ್ಲಿ ನಡೆದರೆ ಶಾಶ್ವತ ಸುಖ ಲಭಿಸಲು ಸಾಧ್ಯ. ಜೀವನದ ಯಶಸ್ಸಿಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು  ಆಶೀರ್ವಚನ ನೀಡಿದರು.

ಇಲ್ಲಿನ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾದ "ಗುರು  ಕಾರುಣ್ಯ" ನಿಮಿತ್ಯವಾಗಿ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ , ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಯಶಸ್ಸು ಸಾಧಿಸಲು ಗುರು ಮತ್ತು ಗುರಿ ಬೇಕು.  ಪ್ರತಿ ಹೆಜ್ಜೆಯಲ್ಲೂ ಗುರುವಿನ ಮಾರ್ಗದರ್ಶನ ಅಗತ್ಯವಿದೆ.  'ಗು' ಎಂದರೆ ಅಂಧಕಾರ, 'ರು' ಎಂದರೆ ಅದನ್ನು ನಿರೋಧಿಸುವ ಶಕ್ತಿ, ಅಂಧಕಾರವನ್ನು ನಿರೋಧಿಸುವ ಶಕ್ತಿಯನ್ನೇ 'ಗುರು' ಎನ್ನಲಾಗುತ್ತದೆ. ಇಲ್ಲಿ ಗುರುವೆಂದರೆ ಯಾವುದೋ ವ್ಯಕ್ತಿಯೆಂದೋ ಪರಂಪರೆಯೆಂದೋ ಸೂಚಿಸಿಲ್ಲ ಎಂದು ಶ್ರೀಗಳು ಹೇಳಿದರು.

ಗುರು ಶಿಷ್ಯ ಪರಂಪರೆಯು ಕಲಿಕೆಗೆ ಸಮಗ್ರ ವಿಧಾನವನ್ನು  ಕಲಿಸುತ್ತದೆ. .ಜ್ಞಾನವು ಪಠ್ಯಪುಸ್ತಕಗಳಿಗೆ ಸೀಮಿತವಾಗಿರಲಿಲ್ಲ, ಅದು ಜೀವನದ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ.  ಗುರು-ಶಿಷ್ಯ ಪರಂಪರೆಯು ನಿರ್ದಿಷ್ಟ ವಿಭಾಗಗಳನ್ನು ಮೀರಿದೆ. ಇದನ್ನು ಸಂಗೀತ, ನೃತ್ಯ, ಸಮರ ಕಲೆಗಳು, ಯೋಗ ಮತ್ತು ಸಾಂಪ್ರದಾಯಿಕ ಔಷಧದಂತಹ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದು.  ಕಲಿಕೆಯ ವಿಷಯವು ಭಿನ್ನವಾಗಿದ್ದರೂ, ಸಮರ್ಪಣೆ, ಗೌರವ ಮತ್ತು ವೈಯಕ್ತಿಕ ಮಾರ್ಗದರ್ಶನದ ಮೂಲ ತತ್ವಗಳು ಸ್ಥಿರವಾಗಿರುತ್ತವೆ  ಎಂದು ಶ್ರೀಗಳು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಆಗುವುದು ಬಹಳ ಅಪರೂಪ. ಗುರುಗಳನ್ನು ನೆನಪಿಸಿಕೊಂಡು ಅವರಿಗೆ ವಂದನೆ ಮತ್ತು ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಯುವ ಪೀಳಿಗೆಗೆ ಗುರುವಿನ ಮಾರ್ಗದರ್ಶನ   ಅವಶ್ಯಕತೆ ಇದೆ. ನಾವೆಲ್ಲರೂ ‌ನಡೆದ ದಾರಿಯಲ್ಲಿ ಯುವ ಪೀಳಿಗೆ ಸಾಗಲಿದೆ ಎಂದು  ಹೇಳಿದರು.

ವೇಳೆ  ಶ್ರೀ ರಾಮಕೃಷ್ಣ ಮರಾಠೆ ರಚಿಸಿದ ಶ್ರೀ  ಶೀರಿಷ್ ಜೋಶಿ ಅವರು ನಿರ್ದೇಶಿಸಿದ ನಾಟಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶಿಸಲಾಯಿತು. ಸಹಸ್ರಾರು  ಜನರು ನಾಟಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ   ಬೆಳ್ಳಿಚುಕ್ಕಿ ಸಂಗೀತ ಸಂಸ್ಥೆಯ ಸಹೋದರಿಯರು ರಾಜೇಶ್ವರಿ ಹಿರೇಮಠ ನೇತೃತ್ವದಲ್ಲಿ ಪುಟ್ಟರಾಜ ಗವಾಯಿ ಅವರ ಹಾಡುಗಳನ್ನು ಪ್ರಸ್ತುತಪಡಿಸಿದರು.

ಮುಖ್ಯ ಅತಿಥಿಗಳಾಗಿ ಶಿವಪ್ರಸಾದ ಹಿರೇಮಠ್  ಆಗಮಿಸಿದ್ದರು. ಮಧುಮತಿ ಹಿರೇಮಠ ಅವರು ಅಧ್ಯಕ್ಷತೆ ವಹಿಸಿದ್ದರು .  ಸರೋಜಾ ನಿಶಾನ್ದಾರ್, ಸರೋಜಾ ನಿಶಾನದಾರ್  ಶರಣು ಸರ್ಮಪಿಸಿದರು. ರಕ್ಷಾ ದೇಗಿನಹಾಳ್ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು.  ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ