Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 15ರಂದು ‘ಶಿಖಂಡಿ’ ಕನ್ನಡ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಬಳ್ಳಾರಿ, ಏ.30.: ಪೋಲಾ ಮೂವೀಸ್ ಪ್ರೊಡಕ್ಷನ್ ನ ಬಹು ನಿರೀಕ್ಷಿತ ‘ಶಿಖಂಡಿ’ ಕನ್ನಡ ಚಲನಚಿತ್ರವು ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕನ್ನಡದ ಜೊತೆಗೆ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ.
ನಗರದ ಪೋಲಾ ಪ್ಯಾರಡೈಸ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಇದು ತಮ್ಮ ಮೊದಲ ನಿರ್ಮಾಣವಾಗಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಅದ್ದೂರಿಯಾಗಿ ಚಿತ್ರ ನಿರ್ಮಿಸಲಾಗಿದ್ದು ಸುಮಾರು 2 ಗಂಟೆ 20 ನಿಮಿಷಗಳ ಅವಧಿಯ ಈ ಚಿತ್ರದಲ್ಲಿ ಬಳ್ಳಾರಿ ಜಿಲ್ಲೆಯ 22ಕ್ಕೂ ಹೆಚ್ಚು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಬಳ್ಳಾರಿ, ಬೆಂಗಳೂರು, ಮೈಸೂರು ಹಾಗೂ ಮಾಗಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ.
ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಿಪಡಿಸುವ ಸಂದೇಶವನ್ನು ಚಿತ್ರ ಒಳಗೊಂಡಿದ್ದು, ಸೌದತ್ತಿ ಯಲ್ಲಮ್ಮ ದೇವಿಯ ದೈವಗೀತೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ನಿರ್ದೇಶಕ ಸುನಾಮಿ ಗುರುಮೂರ್ತಿ ಮಾತನಾಡಿ, ‘ಶಿಖಂಡಿ’ ಎಂಬುದು ಕೇವಲ ಹೆಸರು ಮಾತ್ರವಲ್ಲ, ಮಹಾಭಾರತದ ಪಾತ್ರದಿಂದ ಪ್ರೇರಿತವಾಗಿರುವ ವಿಶಿಷ್ಟ ಕಥಾಹಂದರ ಹೊಂದಿದ ಸಿನಿಮಾ ಇದಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಹಾಗೂ ಫ್ಯಾಮಿಲಿ ಡ್ರಾಮಾ ಅಂಶಗಳನ್ನು ಒಳಗೊಂಡಿರುವ ಈ ರಿವೇಂಜ್ ಸ್ಟೋರಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಿದರು.
ಯುವರಾಜ್ ಗೌಡ ಹಾಗೂ ಖ್ಯಾತಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ದೀಪಕ್ ಶೆಟ್ಟಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೋಗತಿ ಮಂಜಮ್ಮ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಯಾಶಂಕರ್ ಜಿ.ಎಂ. ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಮೈಸೂರು ಸ್ವಾಮಿ ನಿರ್ವಹಿಸಿದ್ದು, ಸಂಗೀತವನ್ನು ಮಂಜು ಕವಿ ಹಾಗೂ ಪ್ರಧ್ಯತ್ತಾನ್ ನೀಡಿದ್ದಾರೆ. ನೃತ್ಯ ನಿರ್ದೇಶನ ಜಗ್ಗು ಮಾಸ್ಟರ್, ಸಾಹಸ ನಿರ್ದೇಶನ ಮಾರುತಿ ಕೈಗೊಂಡಿದ್ದಾರೆ. ಬಳ್ಳಾರಿಯ ಮಂಗಳಮುಖಿ ಚಾಂದಿನಿಯು ಈ ಚಿತ್ರದಲ್ಲಿ ನಟಿಸಿದ್ದು ವಿಶಿಷ್ಟವಾಗಿದೆ. ಚಿತ್ರದ ನಾಲ್ಕು ಹಾಡುಗಳು ಈಗಾಗಲೇ ಗಮನ ಸೆಳೆದಿವೆ ಎಂದು ಚಿತ್ರತಂಡ ತಿಳಿಸಿದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್‌ ಮ್ಯಾನೇಜ್‌ಮೆಂಟ್ ಸ್ವಾಯತ್ತ ವಿಶ್ವವಿದ್ಯಾಲಯ ಆರಂಭಿಸಲು ನಿರ್ಧಾರಹಾಲುಮತದ ಗುರು ರೇವಣಸಿದ್ಧರು ಚಾರಿತ್ರಿಕ ಶರಣರು : ತೋಂಟದ ಸಿದ್ಧರಾಮ ಮಹಾಸ್ವಾಮಿಗಳು*ನಾರಿ ಶಕ್ತಿ ವಂದನಾ ಅಧಿನಿಯಮ ! ಕಾಂಗ್ರೆಸ್ ಹಾಗು ಅದರ ಮಿತ್ರ ಪಕ್ಷಗಳ ವಿರುದ್ದ  ಪ್ರತಿಭಟನೆಯ ಪೂರ್ವಭಾವಿ ಸಭೆ*ಶ್ರೀ ವೆಂಕಟೇಶ್ ಬಡಿಗೇರವರ ಸಂಪಾದಿತ ಕವನ ಸಂಕಲನ "ಕಲ್ಲುತೇರಿನ ಕುಸುರಿ" ದ್ವಿತೀಯ ಮುದ್ರಣ ಲೋಕಾರ್ಪಣೆವಿಜಯಪುರ ಜಿಲ್ಲೆಯ ೧೬೩೬೭.೮೩ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆ ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತುಮಕ್ಕಳು ಮಾದಕ ವ್ಯಸನಕ್ಕೆ ತುತ್ತಗದಂತೆ ಜಾಗೃತಿ ವಹಿಸಿ: ಸಿಂಧೂ ಅಂಗಡಿಬಳ್ಳಾರಿ ಲಿಡ್‌ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕುಡಿತಿನಿ ರೈತರ ಬಂಧನ ಖಂಡನೆ : ಬೇಡಿಕೆ ಈಡೇರಿಸಲು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಗ್ರಹಮೇ 15ರಂದು ‘ಶಿಖಂಡಿ’ ಕನ್ನಡ ಚಿತ್ರ ರಾಜ್ಯಾದ್ಯಂತ ಬಿಡುಗಡೆಜನತಾ ಬಜಾರ್ ನೂತನ ಅಧ್ಯಕ್ಷೆಯಾಗಿ ಮೈತ್ರಿ ಪಲ್ಲೇದ ಅವಿರೋಧ ಆಯ್ಕೆ