ಬೆಳಗಾವಿ : ಇದೇ ತಿಂಗಳು ಮೇ ದಿನಾಂಕ 17 ಮತ್ತು 18 ರಂದು ರವಿವಾರ, ಸೋಮವಾರ ಖಾನಾಪುರ ತಾಲೂಕಿನ ಜಾಂಬೋಟಿ ಹತ್ತಿರವಿರುವ ಕುಸಮಳಿಯ ಕೈವೈಲ್ಯಂ ಪೌಂಡೇಶನ್ ಯೋಗ ಕೇಂದ್ರದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ನಡೆಯಲಿದ್ದು ಈ ಪ್ರಶಿಕ್ಷಣವರ್ಗದಲ್ಲಿ ರಾಜ್ಯದ ಪ್ರಮುಖ ಮುಖಂಡರು,ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು,ಪ್ರಮುಖ ಪದಾಧಿಕಾರಿಗಳು ಪ್ರಶಿಕ್ಷಣಾರ್ಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
