ಬೆಂಗಳೂರು, ಜೂನ್ 16: ಬಹಳ ವರ್ಷಗಳಿಂದ ಕಾತುರದಿಂದ ನಿರೀಕ್ಷಿಸಲಾಗುತ್ತಿದ್ದ
ಜನಗಣತಿ ಪ್ರಕ್ರಿಯೆ ಆರಂಭಿಸಲು ಇಂದು ಕೇಂದ್ರ ಸರ್ಕಾರ
ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿದೆ. ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ನಿನ್ನೆ ಗೃಹ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಬಾರಿಯ ಜನಗಣತಿಯಲ್ಲಿ ಮೊದಲ ಬಾರಿಗೆ ಜಾತಿಗಣತಿಯೂ ನಡೆಯಲಿದೆ. ಗೃಹ ಸಚಿವಾಲಯದಿಂದ ಲಭ್ಯವಾಗಿರರುವ ಮಾಹಿತಿಯ ಪ್ರಕಾರ 34 ಲಕ್ಷ ಗಣತಿದಾರರು ಮತ್ತು 1.3 ಲಕ್ಷ ಮೇಲ್ವಿಚಾರಕರು ಅತ್ಯುತ್ತಮ ತಂತ್ರಜ್ಞಾನದದ ಮೊಬೈಲ್ ಡಿಜಿಟಲ್ ಉಪಕರಣಗಳನ್ನು ಬಳಸಿ ಜನಗಣತಿ ಕಾರ್ಯ ನಡೆಸಲಿದ್ದಾರೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.