ಸಂಕೇಶ್ವರ:
ನಿಡಸೋಶಿ ರಸ್ತೆಯ ಶಂಕರ ನಗರದಲ್ಲಿರುವ ಶ್ರೀ ಜ್ಯೋತಿರ್ಲಿಂಗ ದೇವರ ಜಾತ್ರೆಯು ರವಿವಾರ ದಿನಾಂಕ 3/5/2026 ರಂದು ಬೆಳಗ್ಗೆ 5:00 ಗಂಟೆಗೆ ಅಭಿಷೇಕ ಮತ್ತು ಮಹಾಪೂಜೆ ಮತ್ತು ಕಾಕಡ ಆರುತಿಯೊಂದಿಗೆ ಆರಂಭವಾಗುವುದು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಮಹಾಸ್ವಾಮೀಜಿ, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಮಠ (ಕರವೀರ) ಸಂಕೇಶ್ವರ ಹಾಗೂ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಸುಕ್ಷೇತ್ರ ಕಾರಿಮಠ ಹತ್ತಿರಗಿ ಇವರ ಸಮ್ಮುಖದಲ್ಲಿ ಮುಂಜಾನೆ 9 ರಿಂದ 11 ಗಂಟೆವರೆಗ ಅರಿಷಿಣ ಕುಂಕುಮ ಕಾರ್ಯಕ್ರಮ ಜರಗುವುದು. ನಂತರ ಶ್ರೀ ಜ್ಯೋತಿರ್ಲಿಂಗ ಮೂರ್ತಿ ಪೂಜೆ ಹಾಗೂ ಪ್ರವಚನ ಕಾರ್ಯಕ್ರಮ ಜರಗವುದು ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ಮಹಾಪ್ರಸಾದ ಜರುಗುವುದು. ಕಾರ್ಯಕ್ರಮದ ಲಾಭವನ್ನು ಸದಭಕ್ತರು ಪಡೆದುಕೊಳ್ಳುಬೇಕು ಎಂದು ಜ್ಯೋತಿರ್ಲಿಂಗ ಜಾತ್ರೆ ಕಮಿಟಿಯವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ. ಸಾಯಂಕಾಲ 7:00 ಗೆ ಶ್ರೀ ಮಂದಿರದಲ್ಲಿ ಆರತಿ ಕಾರ್ಯಕ್ರಮದೊಂದಿಗೆ ಜಾತ್ರೆಯು ಸಮಾಪ್ತಗೊಳ್ಳುವುದು.