ಮೂಡಲಗಿ : ಕನ್ನಡ ಸಾಹಿತ್ಯ ಪರಿ?ತ್ತು ಮೂಡಲಗಿ ತಾಲ್ಲೂಕು ಘಟಕ, ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನ ಮೂಡಲಗಿ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಹಯೋಗದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ೫೦ನೇ ’ಸುವರ್ಣ ಸಂಚಿಕೆ’ ಇಂದು ಶುಕ್ರವಾರ ದಿ.೧ರಂದು ಸಂಜೆ ೫.೩೦ಕ್ಕೆ ಮೂಡಲಗಿಯ ಶ್ರೀ ಸತ್ಯಸಾಯಿ ಮಂದಿರದ ಆವರಣದಲ್ಲಿ ಜರುಗಲಿದೆ ಎಂದು ಕಸಾಪ ಮೂಡಲಗಿ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಥಣಿಯ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರ ಹಣಮಂತ ಕೊಂಗಾಲಿ ಉದ್ಘಾಟಿಸುವರು. ಹಾರೂಗೇರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಬುದ್ಧ ಬಸವ ಸಮನ್ವಯದ ವಿವೇಚನೆ’ ಕುರಿತು ಅನುಭಾವ ನುಡಿಗಳನ್ನಾಡುವರು, ಸತ್ಯ ಸಾಯಿ ಸಮಿತಿಯ ಸಂಚಾಲಕರಾದ ಹಣಮಂತ ಸೊರಗಾಂವಿಯವರು ಅಧ್ಯಕ್ಷತೆ ವಹಿಸುವುದರೊಂದಿಗೆ ಅನೇಕ ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ. ಪ್ರತಿ ಹುಣ್ಣಿಮೆಯಂದು ಜರುಗುವ ಈ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮ ೫೦ ಯಶಸ್ವಿ ಸಂಚಿಕೆ ಪೂರೈಸಿದ ಕುರಿತು ವಿಶೇ? ಲೇಖನ ಹೊತ್ತ ಪತ್ರಿಕೆ ಬಿಡುಗಡೆ ಸಮಾರಂಭ ಕೂಡ ನಡೆಯಲಿದೆ ಎಂದು ಡಾ.ಸಂಜಯ ತಿಳಿಸಿದ್ದಾರೆ.