ಇಂಡಿ: ತಾಲೂಕಿನ ಅರ್ಜುಣಗಿ ಬಿ.ಕೆ.ಗ್ರಾಮದ ಅಂಬಾಮಠದ ಶ್ರೀ ಅಂಬಾದೇವಿಯ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ದಿನಾಂಕ ೩೦-೦೪-೨೦೨೬ ರಿಂದ ೮-೦೫-೨೦೨೬ರವರೆಗೆ ಜರಗುವುದು.
೩೦-೦೪-೨೦೨೬ ಗುರುವಾರ ರಂದು ಬೆಳಗ್ಗೆ ೮.೦೦ ಗಂಟೆಗೆ ಪುರುವಂತರ ಸೇವೆಯೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಮೆರವಣಿಗೆ,೯ ದಿನಗಳ ವರೆಗೆ ಪ್ರತಿ ದಿನ ಸಂಜೆ ೮ ಗಂಟೆಗೆ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಮಹಾಪುರಾಣ ಜಗುವದು ಶುಕ್ರವಾರ ದಿನಾಂಕ ೫-೫-೨೦೨೬ ರಂದು ಬೆಳಗ್ಗೆ ೬:೦೦ ಗಂಟೆಗೆ ಶ್ರೀದೇವಿಗೆ ರುದ್ರಾಭಿಷೇಕ ಹಾಗೂ ಹೋಮ ಹವನ ಕಾರ್ಯಕ್ರಮ ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ತದ ನಂತರ ಸುಮಂಗಲೆಯರಿಗೆ ಉಡಿ ತುಂಬ ಕಾರ್ಯಕ್ರಮ, ಅದೆ ದಿನ ಮಧ್ಯಾಹ್ನ ೪-೦೦ಗಂಟೆಗೆ ಶ್ರೀದೇವಿ ಪಲ್ಲಕ್ಕಿ ಹಾಗೂ ಎಲ್ಲಾ ಗ್ರಾಮದ ಪಲ್ಲಕ್ಕಿಗಳ ಮೆರವಣಿಗೆಯು ಜೋಗತಿಯವರ ಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು,ದಿನಾಂಕ ೮-೫-೨೦೬ ಶುಕ್ರವಾರ ಬೆಳಗ್ಗೆ ೮-೦೦ಗಂಟೆಗೆ ಶ್ರೀ ಶ್ರೀ ಸದ್ಗುರು ಹವಾಮಲ್ಲಿನಾಥರ ಭವ್ಯ ಮೆರವಣಿಗೆ ಹಾಗೂ ತುಲಾಭಾರ ಕಾರ್ಯಕ್ರಮ ನಂತರ ಮಧ್ಯಾಹ್ನ ೧೨:೩೦ ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಯುವುದು ನಂತರ ಧರ್ಮಸಭೆ ಜರಗುವುದು, ಅದೆ ದಿನ ರಾತ್ರಿ ೧೦:೦೦ ಗಂಟೆಗೆ ಜೈ ಭೀಮ ಯುವಕ ಮಂಡಳಿಯಿಂದ ತಾಮ್ರಧ್ವಜ ಎಂಬ ಸುಂದರ ಪೌರಾಣಿಕ ನಾಟಕ ಜರಗುವುದು, ಈ ಕಾರ್ಯಕ್ರಮಕ್ಕೆ ಅಫ್ಜಲಪುರ ಶ್ರೀಗಳು, ಶಿರಶ್ಯಾಡ ಶ್ರೀಗಳು,ಅಚಲೇರಿ ಶ್ರೀಗಳು, ತಾರಾಪುರ ಮಠದ ಶ್ರೀಗಳು, ಅರ್ಜುಣಗಿ ಮಠ ಶ್ರೀಗಳು, ಜೈನಾಪುರ ಶ್ರೀಗಳು, ಬೆಕಿನಾಳ ಶ್ರೀಗಳು, ಸಂಕನಾಳ ಶ್ರೀಗಳು, ಭಾಗ್ಯವಂತಿ ಬಟಗೇರಾ ಆಗಮಸಲಿದ್ದು ಆದಕಾರಣ ಸಮಸ್ತ ಭಕ್ತಾದಿಗಳು ತನುಮನ ಧನದೊಂದಿಗೆ ಸೇವೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿ ಪುನೀತರಾಗಬೇಕಾಗಿ ವಿನಂತಿ, ಶ್ರೀ ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿಗಳು ಪ್ರಕಟಣೆಗೆ ತಿಳಿಸಿದ್ದಾರೆ,