ಇಂಡಿ: ಇತ್ತಿಚೆಗೆ ಜರುಗಿದ ೨೦೨೫-೨೬ನೇ ಸಾಲೀನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನ ಇಂಗಳಗಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಶಗುಫ್ತಾ ಶಫಿಕ್ ಪಟೇಲ್ ಮಸಳಿ ೬೨೫ ಅಂಕಗಳಿಗೆ ೬೧೬ ಅಂಕಗಳನ್ನು ಪಡೆದು ಶೇಕಡಾ ೯೮.೫೬% ರಷ್ಟು ಅಂಕಗಳನ್ನು ಪಡೆಯುವ ಮೂಲಕ ಗ್ರಾಮೀಣ ಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿನಿ ಮೂಲತಹ ಕೃಷಿ ಮನೆತನದಲ್ಲಿ ಜನಿಸಿದ ಶಗುಫ್ತಾ ಶಫಿಕ್ ಪಟೇಲ್ ಮಸಳಿ ಅವರು ಒಟ್ಟು ೬೨೫ ಅಂಕಗಳಿಗೆ ೬೧೬ ಅಂಕಗಳನ್ನು ಗಳಿಸಿರುವ ಶಗುಫ್ತಾ ಕನ್ನಡ ಮತ್ತು ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ಇವರ ಈ ಯಶಸ್ಸಿನಿಂದ ಇಡೀ ಇಂಗಳಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ಮಗಳ ಈ ಅತ್ಯುನ್ನತ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಶಗುಫ್ತಾ ಅವರ ತಂದೆ ಶಫಿಕ್ ಪಟೇಲ್ ಅವರು, "ನನ್ನ ಮಗಳ ಈ ಸಾಧನೆ ನಮಗೆ ಅತೀವ ಸಂತೋಷ ತಂದಿದೆ. ಅವಳು ಮೊದಲಿನಿಂದಲೂ ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದಳು. ಸಮಯದ ವ್ಯರ್ಥ ಮಾಡದೆ ಶಿಸ್ತಿನಿಂದ ಅಭ್ಯಾಸ ಮಾಡುತ್ತಿದ್ದಳು. ಗ್ರಾಮೀಣ ಭಾಗದಲ್ಲಿ ಸೌಲಭ್ಯಗಳು ಕಡಿಮೆ ಇದ್ದರೂ, ಅವಳು ತೋರಿದ ದೃಢ ನಿರ್ಧಾರ ಇಂದು ಅವಳಿಗೆ ಈ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ. ಅವಳು ಮುಂದೆ ಏನಾಗಬೇಕೆಂದು ಬಯಸುತ್ತಾಳೆಯೋ, ಅದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಒಬ್ಬ ತಂದೆಯಾಗಿ ಅವಳ ಶೈಕ್ಷಣಿಕ ಪ್ರಗತಿಯನ್ನು ನೋಡುವುದೇ ನನಗೆ ದೊಡ್ಡ ಹೆಮ್ಮೆ ಎಂದರು. ಅವರ ಮುಂದಿನ ಉನ್ನತ ವ್ಯಾಸಂಗಕ್ಕೆ ಇಡೀ ಗ್ರಾಮವೇ ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಆನಂದ ಪವಾರ, ಹಸನ ಮುಜಾವರ, ಶಕೀಲ ಮಣ್ಣೂರ, ರಸುಪಟೇಲ ಮಸಳಿ, ಆಶೀಮ ಮುಲ್ಲಾ, ಪಾಂಡುರಂಗ ಜಾದವ, ಬಾಬು ಪಟೇಲ, ಬುಡ್ಡು ಮಣ್ಣುರ, ರಫೀಕಪಟೇಲ ಮಸಳಿ, ಬಾಬುಪಟೇಲ ಮಸಳಿ ಸೇರಿದಂತೆ ಇತರರು ಇದ್ದರು.