ನಿವೃತ್ತ ಶಿಕ್ಷಕ ಶ್ರೀಕಾಂತ ಎಸ್ ವಣ್ಣೂರರವರಿಗೆ ಸನ್ಮಾನ

Pratibha Boi
ನಿವೃತ್ತ ಶಿಕ್ಷಕ ಶ್ರೀಕಾಂತ ಎಸ್ ವಣ್ಣೂರರವರಿಗೆ ಸನ್ಮಾನ
WhatsApp Group Join Now
Telegram Group Join Now

ಬೆಳಗಾವಿ,ಏ.೧೬ ಗ್ರಾಮೀಣ ವಲಯದ ಸರಕಾರಿ ಕನ್ನಡ ಮಾದರಿ ಶಾಲೆಯ ಶಿಕ್ಷಕರಾದ ಶ್ರೀ ಶ್ರೀಕಾಂತ ಎಸ್ ವಣ್ಣೂರ ರವರ ನಿವೃತ್ತಿ ಸಮಾರಂಭ ರಾಮತೀರ್ಥ ನಗರದ ಸಮುದಾಯಭವನ ದಲ್ಲಿ ಬುಧವಾರ ದಿನ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಪೂಜ್ಯ ಶ್ರೀ ಶಿವಪ್ರಸಾದ ದೇವರು, ಉತ್ತರಾಧಿಕಾರಿಗಳು ಶ್ರೀ ಅಲ್ಲಮಪ್ರಭು ಸಿದ್ದ ಸಂಸ್ಥಾನ ಮಠ ಚಿಂಚಣಿ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಕೆ ಆಂಜನೇಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ, ಸನ್ಮಾನ್ಯ ರವಿ ಭಜಂತ್ರಿ ನಗರ ಶಿಕ್ಷಣಾಧಿಕಾರಿಗಳು, ಡಾ ಎಂ ಎಸ್ ಮೇದಾರ, ದಾಸೋಗ ಮೇಡಂ ಜೀತೇಂದ್ರ ಪಾಟೀಲ ಗ್ರಾಮ ಪಂಚಾಯತ್ ಅಧ್ಯಕ್ಷರು ಕೋತಳಿ, ನಿವೃತ್ತ ಗುರುಗಳು ಶ್ರೀ ವ್ಹಿ ಜಿ ಹಿರೇಮಠ ಸಿ, ಎಂ ಗಣಾಚಾರಿ, ಸಿ ಎಂ ಬೂದಿಹಾಳ, ಆರ್ ಜಿ ಮೇಳವಂಕಿ, ಶಬ್ಬೀರ್ ಖುದ್ದುನವರ,ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ವ್ಹಿ ಎಂ ಮುಳ್ಳೂರ ಆಗಮಿಸಿದ್ದರು.
ಮೊದಲಿಗೆ ಶಿಕ್ಷಕರಾದ ರಾಜು ಹಂಚಿನಮನಿ ಪ್ರಾಥನೆ ಹೇಳಿದರು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಂ ವೈ, ಮೆಣಸಿನಕಾಯಿ ಮಾತನಾಡಿದರು, ಅಷ್ಟಗಿ ರವರು ಶ್ರೀಕಾಂತ ವಣ್ಣೂರ ರವರ ಕಿರುಪರಿಚಯ ಮಾಡಿದರು

ವಿವಿಧ ಸಂಘಟನೆ ಅಧ್ಯಕ್ಷರು ಪದಾಧಿಕಾರಿಗಳು ಮುಖೋ ಪಾಧ್ಯಯರು ನೂರಾರು ಶಿಕ್ಷಕರು, ಶಿಕ್ಷಕಿಯರು, ಆಗಮಿಸಿದ್ದರು ವೇದಿಕೆಯ ಮೇಲಿರುವ ಎಲ್ಲ ಗಣ್ಯರನ್ನು ವಣ್ಣೂರ ದಂಪತಿಗಳು ಸನ್ಮಾನಿಸಿದರು ಆಗಮಿಸಿದ್ದ, ಸರ್ವರೂ ಹೂ ಗುಚ್ಚ, ನೀಡಿ,ವಣ್ಣೂರ ದಂಪತಿಗಳಿಗೆ ಸನ್ಮಾನಿಸಿದರು.
ಲಕ್ಷ್ಮಣ ಮೇತ್ರಿ, ರಾಜು ಹಂಚಿನಮನಿ ಸಂಗೀತ ಕಾರ್ಯಕ್ರಮ ನಡೆಸಿದರು ಮಲ್ಲಿಕಾರ್ಜುನ ಹೊಸಮನಿ ಸ್ವಾಗತಿಸಿದರು ಶ್ರೀಮತಿ ವೇಲಾಗಿಣಿ ಹಂಚಿನಮನಿ ಕಾರ್ಯಕ್ರಮ ನಿರೂಪಣೆ ಮಾಡಿದರು ಜಿಲ್ಲಾ ಬರಹಗಾರರ ಸಂಘದ, ಜಿಲ್ಲಾಧ್ಯಕ್ಷರಾದ ಸುರೇಶ ಸಕ್ರೆಣ್ಣವರ ವಂದಿಸಿದರು

WhatsApp Group Join Now
Telegram Group Join Now
Share This Article