ಹೊಸಪೇಟೆ:ಕಳೆದ ೧೫ ವರ್ಷದ ಹಿಂದಿನಿಂದ ಗ್ರಾಮೀಣ ಭಾಗದ ಜನರಿಗೆ ಕೂಲಿ ಕೆಲಸ ಕೊಡಬೇಕೆಂಬ ಮನೆರೇಗಾ ಯೋಜನೆ ಆದೇಶ ಬಂದಿದ್ದರೂ , ೨೦೨೫ ರ ನವಂರ್ ನಂತರ ಯಾವದೇ ಕಾಮಗಾರಿಗಳನ್ನು ನೀಡಲು ಜಿಲ್ಲಾಡಳಿತ ವಿಫಲವಾಗಿದೆ ,ಎಂದು ಇಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿ.ಪಂ ಕಾರ್ಯನಿರ್ವಾಹಕರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಯನ್ನು ಸಲ್ಲಿಸಿದ್ದಾರೆ,
ಕಾರ್ಮಿಕರ ಬೇಡಿಕೆ ಇದ್ದರೂ ಸರ್ಕಾರ ಕೆಲಸ ನೀಡಲು ವಿಫಲವಾಗಿದೆ ಎಂಬುದು ಕೋಟ್ಯಾಂತರ ಕಾರ್ಮಿಕರಿಗೆ ಇದರ ಸತ್ಯ ತಿಳಿದಿದೆ. ಕೆಲಸ ವಿಲ್ಲದೆ ಸಾವಿರಾರು ಕುಟುಂಬಗಳು ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ, ನರೇಗಾ ಯೋಜನೆ ಉದ್ಯೋಗದ ಭರವಸೆ ಯಾಗಿದ್ದು, ನಿಮ್ಮ ಸರ್ಕಾರ ಅದನ್ನು ದುರ್ಬಲ ಗೊಳಿಸುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಗ್ರಾಕೂಸ್ ಆರೋಪಿಸಿದೆ.
ಕೇಂದ್ರಸರ್ಕಾರ ದಿನ್ನಕ್ಕೊಂದು ಕಾನೂನು ರಚಿಸುವುದನ್ನು ಬಿಟ್ಟು, ಕಳೆದ ಐದು ತಿಂಗಳಿನಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದೋಗ ಖಾತ್ರಿ ಕಾನೂನಿನ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಕೂಲಿ ಹಣವನ್ನುಕೂಲಿ ಭತ್ಯ ದೊಂದಿಗೆ ಹಣ ಬಿಡುಗಡೆ ಮಾಡಲು ಗೂಕ್ರೂಸ್ ತನ್ನ ಬೇಡಿಕೆ ಯಲ್ಲಿ ತಿಳಿಸಿದೆ. ಈ ಸಂಧರ್ಭದಲ್ಲಿ
ಕೆಮಿಕಲ್ಸ್ ಸೋಗಿ, ಮಾಬುಲೇಶ, ಶ್‌ಬ್ಬೀರ್ ಬಾಷಾ. ಇಂತಾಜ್, ರತ್ನಮ್ಮ, ಸಿದ್ದಲಿಂಗಮ್ಮ,ಕರಿಬಸ್ಸಪ್ಪ , ದುರುಗಪ್ಪ, ಶಾಂತ, ಮಂಜುಳಾ, ನೀಲಪ್ಪ, ಪುಷ್ಪ,ಸುಮಂಗಳಾ,ರೇಣುಕಾ, ಚೆನ್ನಮ್ಮ, ಹಾನ್ಯಾಳಮ್ಮ, ಯಶೋದಾ, ನಾಗಮ್ಮ, ಅಂಬ್ರುತ, ಜಿಲ್ಲಾ ಕಾರ್ಯಕರ್ತರಾದ ಶೈನಾಜ್, ಅಕ್ಕಮಹಾದೇವಿ, ತಾಲೂಕು ಕಾರ್ಯಕರ್ತರಾದ ಸುದಾ, ನಿಂಗಮ್ಮ, ಯಶೋದಾ, ಶಾಂತಮ್ಮ,ಕುಮಾರಸ್ವಾಮಿ, ನಾರಾಯಣ ರತ್ನಮ್ಮ, ಜಾಪ್ರೆನ್ ಇದ್ದರು.
ಮನರೇಗಾ ಕೂಲಿ ಕಾರ್ಮಿಕರಿಗೆ ಕೇಂದ್ರದಿಂಧ ಸುಳ್ಳು ಭರವಸೆ “ಗ್ರಾಕೋಸ್’ ಆರೋಪ್ . ಪ್ರಧಾನಿಗೆ ಮನವಿ


