ಹೊಸೇಟೆ : ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಹಾಗೂ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಜವನರು, ನರ್ಸ್ಗಳು, ಕಂಪ್ಯೂಟರ್ ಆಪರೇಟರ್, ಡಾಟ ಎಂಟರಿ ಆಪರೇಟರ್ ರವರು ಕಳೆದ ೧೫-೨೦ ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದು ಇವರ ಕೆಳಕಂಡ ಬೇಡಿಕೆಗಳನ್ನು ಈಡೇರಿಸ ಬೇಕೆಂದುಮುಖ್ಯ ಮಂತ್ರಿಸಿದ್ದರಾಮಯ್ಯ ಹಾಗು ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ.ನೀಡಿದರು.
ಬೇಡಿಕೆಗಳು ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ಜಾರಿ ಮಾಡದೇ ವಿಳಂಬ ಮಾಡುತ್ತಿದ್ದು, ಕೂಡಲೇ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಜಾರಿ ಮಾಡಬೇಕು. ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೂ ಸೇವಾ ಭದ್ರತೆ ನೀಡಿ, ಖಾಯಂ ಮಾಡಬೇಕು. ಈ ಮತ್ತು ಇSI ಕಟ್ಟದೆ ಇರುವ ಖಾಸಗಿ ಏಜನ್ಸಿ ಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಬೀದರ್ ಮಾದರಿ ಸೊಸೈಟಿ ಯನ್ನು ತಕ್ಷಣ ಪ್ರಾರಂಭ ಮಾಡಬೇಕು.
ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕಿರುಕುಳ ಕೊಡುವ ವಾರ್ಡನ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಹಾಸ್ಟೆಲ್ ನೌಕರರಿಗೆ ರಜಾ ಸಹಿತ ವೇತನ ನೀಡಬೇಕು
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕೆಲಸ ಮಾಡುವ ಪ್ರ.ದ. ಸ & ಸ್ಟಾಪ್ ನರ್ಸ್ ಹಾಗೂ ಡಿ-ಗ್ರೂಪ್ ಗಳಿಗೆ ಸೇವಾ ಭದ್ರತೆ ನೀಡಬೇಕು. ಪ್ರಥಮ ದರ್ಜೆ ಸಹಾಯಕರನ್ನು ಏಪ್ರಿಲ್-ಮೇ ನಲ್ಲಿ ಶಾಲೆಯ ಕೆಲಸ ವಿರುವ ಕಾರಣ ಮುಂದುವರೆಸಿಬೇಕು. ೨೦೧೮ ರಲ್ಲಿ ಪ್ರಾರಂಭವಾದ ವಸತಿ ಶಾಲೆಗಳಿಗೆ ಸಿಬ್ಬಂದಿಗಳ ಸಂಖ್ಯೆಯನ್ನು ೧೧ ಕ್ಕೆ ಹೆಚ್ಚಿಸಬೇಕು.
ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಸಂಜೀವಿನಿ ಕಾರ್ಡ್ ಕೊಡಬೇಕು.ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು. ಕನ್ನಡ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ಪಾವತಿ ಮಾಡಬೇಕಾದ ೮-ತಿಂಗಳ ಸಂಬಳ ತಕ್ಷಣ ಪಾವತಿ ಮಾಡಬೇಕು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ಏಜೆನ್ಸಿಯಾಗಿ ಕಾರ್ಯನಿರ್ವಹಿ ಸುತ್ತಿರುವ ಮೆ|| ಕೌಶಲ್ಯ ಸೆಕ್ಯೂರಿಟಿ ಸರ್ವಿಸ್ ಕಲಬುರ್ಗಿ ಮತ್ತು ಮೆ|| ಕವನ ಪಾಟೀಲ್ ಸೆಕ್ಯೂರಿಟಿ ಸರ್ವಿಸ್ ಕಲಬುರ್ಗಿ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಪಾವತಿ ಮಾಡದೆ, ಪಿ.ಎಫ್, ಇ.ಎಸ್.ಐ. ಸರ್ಕಾರಕ್ಕೆ ಪಾವತಿಮಾಡದೇ ವಂಚನೆ ಮಾಡಿರುವ ಬಗ್ಗೆ ಆಡಿಟ್ ವರದಿ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ನೌಕರರಾಗಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ನಂದೀಶ್ ನಾಯಕನಿಗೆ ೧೦-ತಿಂಗಳ ಸಂಬಳ ಇಲ್ಲದ ಕಾರಣಕ್ಕೆ ಹೃದಯಾಘಾತಕ್ಕೆ ಒಳಗಾಗಿ ಮರಣ ಹೊಂದಿರುವ ಹಿನ್ನೆಲೆಯಲ್ಲಿ ಈತನ ಕುಟುಂಬಕ್ಕೆ ೧೦-ಲಕ್ಷ ಪರಿಹಾರ ನೀಡಬೇಕು.
ಜಿಲ್ಲಾಧಿಕಾರಿ (ಆಅ) ಗಳು ಮೇಲಿನ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಕರೆಯಬೇಕು.ಎಂದುಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಮರಡಿ ಜಂಬಯ್ಯ ನಾಯಕ ನೇತೃತ್ವದಲ್ಲಿ ಮನವಿ ನೀಡಿದರು.
ಇದರ ಪ್ರತಿಗಳನ್ನು :
೧) ಮಾನ್ಯ ಶ್ರೀ ಜಮೀರ್ ಅಹಮದ್ ಖಾನ್ ರವರು, ವಕ್ಪ್ ಮತ್ತು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
೨) ಶ್ರೀ ಇ.ತುಕಾರಾಂ ಮಾನ್ಯ ಸಂಸತ್ ಸದಸ್ಯರು, ಬಳ್ಳಾರಿ ಕ್ಷೇತ್ರ, ವಿಜಯನಗರ ಜಿಲ್ಲೆ.
೩) ಶ್ರೀ ಹೆಚ್.ಆರ್.ಗವಿಯಪ್ಪ ಮಾನ್ಯ ಶಾಸಕರು, ವಿಜಯನಗರ ಕ್ಷೇತ್ರ, ಹೊಸಪೇಟೆ.
೪) ಮಾನ್ಯ ಕುಲಸಚಿವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರುಗಳ ಅವಗಾಹನೆಗೆ ಸಲ್ಲಿಸಲಾಗಿದೆ.
೫) ಮಾನ್ಯ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳು, ವಿಜಯನಗರ ಜಿಲ್ಲೆ, ಹೊಸಪೇಟೆ.
ಹಾಸ್ಟೆಲ್ ಹಾಗೂ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸಲು ಮುಖ್ಯ ಮಂತ್ರಿಗಳಿಗೆ ಮನವಿ


