ಜನ ಮತ್ತು ಜಾನುವಾರುಗಳ ನೆರವಿಗಾಗಿ ಹಗರಿಗೆ ನೀರು ಬಿಡಿ ; ದರೂರು ಪುರುಷೋತ್ತಮ ಗೌಡ 

MK HasiruKranti
ಜನ ಮತ್ತು ಜಾನುವಾರುಗಳ ನೆರವಿಗಾಗಿ ಹಗರಿಗೆ ನೀರು ಬಿಡಿ ; ದರೂರು ಪುರುಷೋತ್ತಮ ಗೌಡ 
WhatsApp Group Join Now
Telegram Group Join Now
ಬಳ್ಳಾರಿ, ಏ.16:..: ತುಂಗಭದ್ರ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಇಲ್ಲದೆ ಕುಡಿಯುವ ನೀರಿನ ಕೆರೆಗಳು, ಹಳ್ಳಗಳು, ಬಾವಿಗಳು ಬೋರ್ವೆಲ್ಗಳು ಹಗರಿ (ವೇದಾವತಿ ನದಿ) ನೀರಿಲ್ಲದೆ ಬತ್ತಿಹೋಗಿ ಜನರಿಗೂ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗುತ್ತಿದೆ.
ಕುಡಿಯುವ ನೀರಿಗಾಗಿ ತುಂಗಭದ್ರ ಜಲಾಶಯದ ಬಲದಂಡೆಯ ಕೆಳ ಮಟ್ಟದ ಕಾಲುವೆಗೆ (ಎಲ್.ಎಲ್.ಸಿ) ನೀರು ಬಿಡಲಾಗಿದೆ. ಈ ನೀರಿನ್ನು ಕುಡಿಯುವ ನೀರಿನ ಕೆರೆಗಳಿಗೆ ಗ್ರಾಮಪಂಚಾಯಿತಿಗಳು ತುಂಬಿಸುತ್ತಿದ್ದಾರೆ. ಆದರೆ ಹಗರಿ (ವೇದಾವತಿ ನದಿ)ಯ ಪಕ್ಕದ ಹಳ್ಳಿಗಳ ರೈತರಿಗೆ ಈ ನೀರು ಲಭ್ಯವಿಲ್ಲ. ಹಾಗಾಗಿ ಬಳ್ಳಾರಿ ಗ್ರಾಮೀಣ ಭಾga ಮತ್ತು ಸಿರುಗುಪ್ಪ ತಾಲೂಕಿನ  ಬೈರದೇವನಹಳ್ಳಿ , ಮೋಕಾ, ಗೋಟೂರು, ಬಾಣಾಪುರ, ಬೆಣಕಲ್ಲು, ಕರ್ಛೇಡು. ಹೊಣೆನೂರು, ಯರಗುಡಿ, ಬಸರಕೋಡು, ಹದ್ದಿಗಿ, ತಾಳೂರು, ಉಳೂರು, ಉತ್ತನೂರು, ಮಾಟಸೂಗುರು, ಕೂರಿಗನೂರು, ಬೂದುಗುವ, ಮೈಲಾಪುರ, ಬಲಕುಂದಿ, ಹಳ್ಳಿಗನೂರು, ಚಾಣುಕ್ಯನೂರು, ರಾರಾವಿ, ಕರ್ಚಿಗನೂರು, ಬಾಗೇವಾಡಿ, ಕುಡದರಹಾಳು, ಶ್ರೀಧರಗಡ್ಡೆ ಮೊದಲಾದ ಗ್ರಾಮಗಳಿಗೆ ನೀರು ದೊರೆಯುತ್ತಿಲ್ಲ.
ಅದಕ್ಕಾಗಿ ಮೋಕಾ ಗ್ರಾಮದ ಹತ್ತಿರ, ಹಗರಿ (ವೇದಾವತಿ ನದಿ)ಗೆ ನೀರು ಬಿಟ್ಟರೆ ಈ ಹಳ್ಳಿಗಳಿಗೆನೀರು ದೊರೆಯಲಿದೆ.
ಅದಕ್ಕಾಗಿ ತಕ್ಷಣ ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಮೋಕಾ ಗ್ರಾಮದ ಹತ್ತಿರ, ಎಲ್.ಎಲ್.ಸಿ ಕಾಲುವೆಯಿಂದ ಹಗರಿ (ವೇದಾವತಿ ನದಿ)ಗೆ ನೀರು ಬಿಡಿಸಬೇಕೆಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ.
 ಈ ಸಂದರ್ಭದಲ್ಲಿ ತಾಳೂರು ರಾಘವೇಂದ್ರ ರೆಡ್ಡಿ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article