ಬಳ್ಳಾರಿ. ಏ. 16: ರಾಜ್ಯಾಧ್ಯಕ್ಷ ಆರ್ ಗುರುಮೂರ್ತಿ ಇವರ ನೇತೃತ್ವದ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಆಚರಿಸಲಾಯಿತು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಎಂ ಶಾಂತ ಇವರ ನೇತೃತ್ವದಲ್ಲಿ ಮೋತಿ ಸರ್ಕಲ್ ಸಮೀಪದ ಏಳು ಮಕ್ಕಳ ತಾಯಮ್ಮ ದೇವಸ್ಥಾನದಿಂದ ಮಹಿಳಾ ಸಂಘದವರೆಲ್ಲರೂ ಪಾದಯಾತ್ರೆಯ ಮೂಲಕ ಫಸ್ಟ್ ಗೇಟ್ ಹತ್ತಿರದ ಅಂಬೇಡ್ಕರ್ ಭವನದಲ್ಲಿನ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಮ್ ಶಾಂತ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿತಾ ಸಂವಿಧಾನದಿಂದ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿಮೆಯ ಮುಂಭಾಗದಲ್ಲಿ ಪಿ. ಯು. ಸಿ. 2ನೇ ವರ್ಷದಲ್ಲಿ ಅತಿ ಹೆಚ್ಚಿನ ಶ್ರೇಣಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶ್ಯಾಲು ಹೊದಿಸಿ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಮಹಿಳಾ ಕಾರ್ಯದರ್ಶಿ ದ್ರಾಕ್ಷಾಯಿನಿ, ಸೀತಮ್ಮ,, ಭಾಗ್ಯಮ್ಮ :ಜಿಲ್ಲಾ ಘಟಕದ ಅಧ್ಯಕ್ಷರಾದ ಎಂಪಿ ಕಮಲ, ಜಿಲ್ಲಾ ಉಪಾಧ್ಯಕ್ಷರಾದ ಉಮಾ, ಮಂಜುಳಾ :ಜಿಲ್ಲಾ ಕಾರ್ಯದರ್ಶಿ ಉಮಾ ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ , ಮತ್ತು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮೀನಾಕ್ಷಿ ಪ್ರಧಾನ ಕಾರ್ಯದರ್ಶಿ ವನ್ನೂರಮ್ಮ ಕಾರ್ಯದರ್ಶಿ ಲಕ್ಷ್ಮಿ ದುರುಗಮ್ಮ, ಉಪಾಧ್ಯಕ್ಷರಾದ ರೇಣುಕಮ್ಮ ಕಾರ್ಯದರ್ಶಿ ವಸಂತ ಸೇರಿದಂತೆ ಇನ್ನೂ ಹಲವಾರು ಜನ ಡಿಎಸ್ಎಸ್ ಮಹಿಳಾ ಕಾರ್ಯಕರ್ತರು ಇದ್ದರು. ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಕಾರ್ಯದರ್ಶಿ ಪಿ ಅಂಜಿನಪ್ಪ ವಂದನೆಗಳನ್ನು ಸಲ್ಲಿಸಿದರು.
ನಂತರ ಕಾರ್ಯಮದಲ್ಲಿ ನೆರದವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.


