ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು, ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು, ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ವಾಲ್ಮೀಕಿ ನಿಗಮದ ಪ್ರಕರಣ ಸದ್ಯ ತನಿಖಾ ಹಂತದಲ್ಲಿದ್ದು,  ಈ ಪ್ರಕರಣದಲ್ಲಿ ಮಂತ್ರಿಗಳು ಹಾಗೂ ಶಾಸಕರು ಭಾಗಿಯಾಗಿದ್ದರೆ ಖಂಡಿತವಾಗಿ ಅದು ಕಳಂಕ ಎಂದು ಲೋಕೋಪಯೋಗಿ  ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.
 ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಾಲ್ಮೀಕಿ ಪ್ರಕರಣ ತನಿಖಾ ಹಂತದಲ್ಲಿದ್ದು,  ದಾಖಲೇ ನೋಡಿದ ಮೇಲೆಯೇ ಈ ಪ್ರಕರಣ ಗೊತ್ತಾಗಲಿದೆ. ತಕ್ಷಣ ಈ ಪ್ರಕರಣ  ಹೀಗೆ ಇದೆ ಎಂದು ಹೇಳಲು ಕಷ್ಟ ಎಂದು ಹೇಳಿದರು.
ಬಿಜೆಪಿಯವರು ಮುಡಾ ಹಗರಣವನ್ನು ರಾಜಕೀಯವಾಗಿ  ಬಳಿಸಿಕೊಳ್ಳುತ್ತಿದ್ದು, ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಅವರ ಪಾತ್ರ ಏನು ಇಲ್ಲ. ಆಯಾ ಸಚಿವರು ತಮ್ಮ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅದನ್ನು, ಬಿಟ್ಟು ತಮ್ಮ ತಮ್ಮ ಇಲಾಖೆ ಸಮಸ್ಯೆಯನ್ನು ಸಿಎಂ ಮೇಲೆ ತರುವುದು ಸೂಕ್ತವಲ್ಲ ಎಂದ ಅವರು,  ನಮ್ಮ ಇಲಾಖೆಯನ್ನು ನಾವೇ ನೋಡಿಕೊಳ್ಳಬೇಕು. ಅದು ನಮ್ಮ ಜವಾಬ್ದಾರಿ. ಆದ್ದರಿಂದ ಸಿಎಂಗೂ ಇದಕ್ಕೂ  ಯಾವುದೇ ರೀತಿ ಸಂಬಂಧವಿಲ್ಲ ಎಂದರು.
ಮುಡಾಗೆ-ವಾಲ್ಮೀಕಿ ನಿಗಮಕ್ಕೆ ಹೋಲಿಸಲಿಕ್ಕೆ ಆಗೋಲ್ಲ:  ಇಂತಹ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟು ನಡೆದಿವೆ. ನಾವು ಕೂಡಾ ಸಾಕಷ್ಟು ನೋಡಿದ್ಧೇವೆ. ಆದ್ದರಿಂದ ಮುಡಾಗೆ ವಾಲ್ಮೀಕಿ ನಿಗಮಕ್ಕೆ ಹೋಲಿಸಲು ಆಗೋದಿಲ್ಲ. ಅದು ಕ್ಲಸ್ಟಲ್‌ ಕ್ಲೇರ್‌ ಆಗಿದೆ.  ಆದರೆ ಮುಡಾ ಮಾತ್ರ ರಾಜಕೀಯ ಅಂತಾ ಹೇಳಬಹುದು ಎಂದರು.
 ಕಾಂಗ್ರೆಸ್‌ ಆಂತರಿಕ ಜಗಳದಿಂದಲೇ ಈ ಮುಡಾ ಹೊರಗೆ ಬಂದಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣ ಯಾರೂ ಮಾಡಿದರೂ ಎಂದಾದರೂ ಹೊರಗಡೆ ಬರಲೇಬೇಕು. ಅದರಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಆಂತರಿಕ ಜಗಳ ಅಂತಹದೇನಿಲ್ಲ. ಯಾವುದೇ ಪ್ರಕರಣ ಮಾಡಿದ್ದರೂ ಅದು ಹೊರಗಡೆ ಬಂದೇ ಬರುತ್ತದೆ. ಯಾರೇ ತಪ್ಪು ಮಾಡಿದರೇ ಅದು ತಪ್ಪು ತಪ್ಪೇ ಎಂದ ಅವರು, ಒಂದು ಸುಳ್ಳು ಮುಚ್ಚಿಸಲು ಮತ್ತೇ ಸುಳ್ಳು ಹೇಳುವ ಬದಲು ತಪ್ಪು ನಡೆದಾಗ ಯಸ್‌ ಎಂದರೆ ಅದು ಅಲ್ಲಿಗೆ ಫುಲ್‌ ಸ್ಟಾಪ್ ಹಾಕುವುದು ಒಳಿತು ಎಂದು ಹೇಳಿದರು.
WhatsApp Group Join Now
Telegram Group Join Now
Share This Article