*ಭರವಸೆ ಕೊಟ್ಟು ಮರೆತ ಸರ್ಕಾರ: ಪಂಚಾಯತಿ ನೌಕರರ ಸಂಘದ ಬೃಹತ್ ಪ್ರತಿಭಟನೆ*

MK HasiruKranti
*ಭರವಸೆ ಕೊಟ್ಟು ಮರೆತ ಸರ್ಕಾರ: ಪಂಚಾಯತಿ ನೌಕರರ ಸಂಘದ ಬೃಹತ್ ಪ್ರತಿಭಟನೆ*
WhatsApp Group Join Now
Telegram Group Join Now
ಬಳ್ಳಾರಿ, ಏ.19..: ರಾಜ್ಯ ಸರ್ಕಾರದ ಭರವಸೆಗಳು ಕೇವಲ ಮಾತಿನ ಮಟ್ಟದಲ್ಲೇ ಉಳಿದಿವೆ ಎಂಬ ಆರೋಪದೊಂದಿಗೆ ಗ್ರಾಮ ಪಂಚಾಯತ್ ನೌಕರರು ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು) ಬಳ್ಳಾರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ, ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಅಧ್ಯಕ್ಷ ಎ.ಎಸ್. ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೌಕರರು ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ–ಪಂಚಾಯತ್ ರಾಜ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಸಂಘದ ಮಾಹಿತಿ ಪ್ರಕಾರ, ಕಳೆದ ಡಿಸೆಂಬರ್ 20, 2025ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ, ಡಿಸೆಂಬರ್ 22ರಂದು ನಡೆದ ಸಭೆಯಲ್ಲಿ ನೀಡಿದ ಭರವಸೆಗಳು ಇನ್ನೂ ಜಾರಿಯಾಗಿಲ್ಲ. 19 ಬೇಡಿಕೆಗಳಲ್ಲಿ ಕನಿಷ್ಠ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದರೂ, ಮೂರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೌಕರರಲ್ಲಿ ಅಸಮಾಧಾನ ಹೆಚ್ಚಿಸಿದೆ.
“ಮಾತಿನಲ್ಲಿ ಭರವಸೆ – ಕಾರ್ಯದಲ್ಲಿ ಶೂನ್ಯ” ಎಂಬ ಸರ್ಕಾರದ ಧೋರಣೆಯನ್ನು ಖಂಡಿಸಿದ ನೌಕರರು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮನ್ವಯಿತ ಹೋರಾಟ ನಡೆಸುತ್ತಿದ್ದಾರೆ.
ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ “ಬೆಂಗಳೂರು ಚಲೋ” ಹೋರಾಟ ಹಮ್ಮಿಕೊಳ್ಳುವುದಾಗಿ ಸಂಘ ಎಚ್ಚರಿಸಿದೆ.
ಸಂಘವು ಮುಂದಿಟ್ಟಿರುವ ಬೇಡಿಕೆಗಳಲ್ಲಿ ಎಲ್ಲಾ ನೌಕರರಿಗೆ ರೂ.5000 ವೇತನ ಹೆಚ್ಚಳ, ನಿವೃತ್ತಿ/ನಿಧನಕ್ಕೆ ರೂ.6 ಲಕ್ಷ ಪರಿಹಾರ, ಸೇವಾ ಹಿರಿತನ ಆಧಾರಿತ ವೇತನ, ಸ್ವಚ್ಛವಾಹಿನಿ ನೌಕರರ ಸಮಸ್ಯೆಗೆ ಪರಿಹಾರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ, ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಅನುಮೋದನೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಸೇರಿವೆ.
ಚಿನ್ನು ಗುಳಂಬ ಸಹಿಸಲಾಗದ ತಕ್ಷಣ ಆದೇಶವಡಿಸಿ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಕಠಿಣವಾಗಿ ಆಗ್ರಹಿಸಿದೆ.
ಪ್ರತಿಭಟನೆಯ ಬಳಿಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಸೇನರೆಡ್ಡಿ, ರಾಜ್ಯ ಪದಾಧಿಕಾರಿ ರಾಜಸಾಬ್ ಸೇರಿದಂತೆ ಹಲವು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article