ಆರ್ಟೊ ಚಾಲಕರಿಗೆ ಸರಿಯಾಗಿ ನಿಲ್ಲಿಸಲು ಭರತ್ ರೆಡ್ಡಿ ಎಚ್ಚರಿಕೆ

MK HasiruKranti
ಆರ್ಟೊ ಚಾಲಕರಿಗೆ ಸರಿಯಾಗಿ ನಿಲ್ಲಿಸಲು ಭರತ್ ರೆಡ್ಡಿ ಎಚ್ಚರಿಕೆ
WhatsApp Group Join Now
Telegram Group Join Now
ಬಳ್ಳಾರಿ, ಏ.19.. ನಗರದ ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ನಿನ್ನೆ ನಗರ ಶಾಸಕ ನಾರಾ ಭರತ್ ರೆಡ್ಡಿ ಸರ್ಕಲ್ ಸುತ್ತಮುತ್ತ ಎಲ್ಲಂದರಲ್ಲಿ ನಿಲ್ಲಿಸುವ ಆಟೋ ಚಾಲಕರನ್ನು ಕರೆದು. ನಿಗಧಿತ ಸ್ಥಳದಲ್ಲಿ ಮಾತ್ರ ನಿಲ್ಲಿಸಬೇಕು. ಎಲ್ಲಂದರಲ್ಲಿ ನಿಲ್ಲಿಸ ಬಾರದು ಎಂದು ಎಚ್ಚರಿಕೆ ನೀಡಿದರು
ಸರ್ಕಲ್ ನಲ್ಲಿ ಸಂಚಾರಿ ವ್ಯವಸ್ಥೆಯ ಅಸ್ತವ್ಯಸ್ತತೆಯ ಬಗ್ಗೆ ಖುದ್ದು ವೀಕ್ಷಿಸಿದ ಶಾಸಕರು, ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರನ್ನು ಕರೆದು. ಜನ ಮತ್ತು ವಾಹನಗಳ ಸಂಚಾರ ಸುಗಮವಾಗಿ ಸಾಗಲಿ ಎಂದು ಸರ್ಕಲ್ ನ ಅಗಲೀಕರಣ ಮಾಡಿದೆ. ಆದರೂ ಆಟೋಗಳು ಸರ್ಕಲ್ ಸುತ್ತ ಎಲ್ಲಂದರಲ್ಲಿ ವಾಹನಗಳ ಓಡಾಟಕ್ಕೆ ಅಡ್ಡಿಯಾಗುವಂತೆ ನಿಲ್ಲಿಸುವುದು ಸರಿಯಲ್ಲ. ವ್ಯವಸ್ಥಿತವಾಗಿ ನಿಲ್ಲಿಸಲು ಸೂಚಿಸಿ. ಮೀರಿದವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು. ಆಟೋದವರನ್ನು ಕರೆದು ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕೆಂದು ಸೂಚಿಸಿದರು.
WhatsApp Group Join Now
Telegram Group Join Now
Share This Article