ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ನಿಮ್ಮ ಕೈಲಿದೆ: ಪ್ರಧಾನಿ ಮೋದಿ

Ravi Talawar
ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ನಿಮ್ಮ ಕೈಲಿದೆ: ಪ್ರಧಾನಿ ಮೋದಿ
WhatsApp Group Join Now
Telegram Group Join Now

ಅಹಮದಾಬಾದ್,07: ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​ನಲ್ಲಿ ಮತದಾನ ಮಾಡಿದರು. ಪ್ರಜಾಪ್ರಭುತ್ವ ಬಲಪಡಿಸುವ ಶಕ್ತಿ ಇರುವುದು ನಿಮ್ಮ ಕೈಲಿದೆ ಎಂದು ಜನರೆಡೆಗೆ ಕೈಬೀಸಿದ್ದಾರೆ. ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ, ಸೂರತ್ ಹೊರತುಪಡಿಸಿ ಗುಜರಾತ್‌ನ ಎಲ್ಲಾ 25 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಈಗಾಗಲೇ ಸೂರತ್ ಕ್ಷೇತ್ರದಿಂದ ಅವಿರೋಧವಾಗಿ ಗೆದ್ದಿದ್ದಾರೆ. ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಜೊತೆಗೆ ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿರುವ ರಾಜಭವನದಿಂದ ಮತ ಚಲಾಯಿಸಲು ನೇರವಾಗಿ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಗೆ ತೆರಳಿದರು. ಇಲ್ಲಿ ಗೃಹ ಸಚಿವ ಮೋದಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಇದಾದ ಬಳಿಕ ಮೋದಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅಮಿತ್ ಶಾ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮತದಾನದ ನಂತರ ಪ್ರಧಾನಿ ಮೋದಿ ಜನತೆಗೆ ಶುಭಾಶಯ ಕೋರಿದರು. ಬೆರಳಿಗೆ ಹಾಕಿರುವ ಶಾಯಿಯನ್ನೂ ತೋರಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ ಅವರು ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದರು. ನಮ್ಮ ದೇಶದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಈ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ಬೇಸಿಗೆಯಾಗಿರುವ ಕಾರಣ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹೆಚ್ಚು ನೀರು ಕುಡಿಯಿರಿ ಎಂದರು.

 

WhatsApp Group Join Now
Telegram Group Join Now
Share This Article