4 ರಾಜ್ಯಗಳ 5 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟ

Ravi Talawar
4 ರಾಜ್ಯಗಳ 5 ವಿಧಾನಸಭಾ ಸ್ಥಾನಗಳ  ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟ
WhatsApp Group Join Now
Telegram Group Join Now

ನವದೆಹಲಿ, ಜೂನ್ 23:  ಭಾರತದ ನಾಲ್ಕು ರಾಜ್ಯಗಳ 5 ವಿಧಾನಸಭಾ ಸ್ಥಾನಗಳಿಗೆ ಜೂನ್ 19ರಂದು ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಕೇರಳದ ನೀಲಾಂಬೂರ್‌ನಲ್ಲಿ ಸ್ವತಂತ್ರ ಶಾಸಕ ಪಿ.ವಿ.ಅನ್ವರ್‌ ಹಾಗೂ ಗುಜರಾತ್‌ನ ವಿಸಾವದರ್‌ನಲ್ಲಿ ಆಪ್‌ ಶಾಸಕ ಭೂಪೇಂದ್ರ­ಭಾಯಿ ರಾಜೀನಾಮೆಯಿಂದ ಉಪಚುನಾವಣೆ ನಡೆದಿತ್ತು.

ಗುಜರಾತ್‌ನ ಕಡಿ ಮತ್ತು ವಿಸಾವದರ್ ವಿಧಾನಸಭೆ ಸ್ಥಾನಗಳು, ಕೇರಳದ ನೀಲಂಬೂರ್, ಪಶ್ಚಿಮ ಬಂಗಾಳದ ಕಾಳಿಗಂಜ್ ಮತ್ತು ಪಂಜಾಬ್‌ನ ಲುಧಿಯಾನ ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿದೆ.ಈ ಕ್ಷೇತ್ರಗಳ ಸದಸ್ಯರ ಅಕಾಲಿಕ ಮರಣ ಮತ್ತು ರಾಜೀನಾಮೆಯಿಂದಾಗಿ ಸ್ಥಾನಗಳು ಖಾಲಿ ಇದ್ದವು. ಎಲ್ಲಾ ಮತಗಟ್ಟೆಗಳಲ್ಲಿ ವೆಬ್​ಕಾಸ್ಟಿಂಗ್ ಮಾಡಲಾಗಿತ್ತು.

ವೆಬ್​ಕಾಸ್ಟಿಂಗ್​ ಎಂದರೇನು?: ವೆಬ್‌ಕಾಸ್ಟಿಂಗ್ ಎಂದರೆ ನಿರ್ದಿಷ್ಠ ವಿಷಯವನ್ನು ನೇರಪ್ರಸಾರ ಮಾಡುವುದು. ಅಂದರೆ, ಅಂತರ್ಜಾಲದ ನೆರವಿನಿಂದ ಆಡಿಯೋ ಅಥವಾ ವಿಡಿಯೋ ಮಾಡಿ ಅದನ್ನು ವೀಕ್ಷಕರಿಗೆ ನೇರವಾಗಿ ಪ್ರಸಾರ ಮಾಡುವ ಪ್ರಕ್ರಿಯೆಯಾಗಿದೆ. ಮತಗಟ್ಟೆಗಳಲ್ಲಿ ನಡೆಯುವ ಮತ್ತು ಮತ ಎಣಿಕೆ ಪಾರದರ್ಶಕತೆಯನ್ನು ಕಾಪಾಡಲು ಚುನಾವಣಾ ಆಯೋಗವು ಅದನ್ನು ನೇರಪ್ರಸಾರ ಮಾಡಲು ವೆಬ್​ಕಾಸ್ಟಿಂಗ್ ಪದ್ಧತಿಯನ್ನು ಅಳವಡಿಸುತ್ತಿದೆ.

WhatsApp Group Join Now
Telegram Group Join Now
Share This Article