LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಪತ್ರ ಬರೆಯಿರಿ, ಹತ್ತಿರವಾಗಿರಿ: ಸರ್ಕಾರಿ ಶಾಲೆಯಲ್ಲಿ ವಿಶಿ? ಪತ್ರ ಅಭಿಯಾನ

 

ಮುಧೋಳ: ಆ.೨೦.,ತಾಲೂಕಿನ ಮೆಟಗುಡ್ಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡೋಣಿತೋಟದಲ್ಲಿ ತಂತ್ರಜ್ಞಾನದ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಪತ್ರ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ’ಪತ್ರ ಬರೆಯಿರಿ, ಹತ್ತಿರವಾಗಿರಿ’ ಎಂಬ ವಿಶಿ? ಪತ್ರ ಅಭಿಯಾನ ನಡೆಯಿತು.

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (Iಈಂ) ವತಿಯಿಂದ ಯೋಜನಾ ಸಂಯೋಜಕ ಸುರೇಶ ರಾಜಮಾನೆ ಅವರ ಸಂಯೋಜನೆಯಲ್ಲಿ ನಡೆಯುತ್ತಿರುವ ’ಬೇಟೆ-ನಾಯಿಗಳ ಕೋಟೆ ಮುದುವೊಳಲು’ ಕಲಾ ಅಂತರ್ಗತ ಯೋಜನೆಯ ಭಾಗವಾಗಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.

ತಂತ್ರಜ್ಞಾನದ ವಿವಿಧ ಆವಿ?ರಗಳಿಂದ ಪತ್ರ ಬರೆಯುವ ಸಂಸ್ಕೃತಿ ಕ್ರಮೇಣ ಮರೆಯಾಗುತ್ತಿರುವ ಸಂದರ್ಭದಲ್ಲಿ, ಮಕ್ಕಳಲ್ಲಿ ಪತ್ರ ಬರೆಯುವ ಆಸಕ್ತಿ ಹಾಗೂ ಬರವಣಿಗೆಯ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಯಿತು. ಮಕ್ಕಳು ತಾವು ಕಲಿಯುತ್ತಿರುವ ವಿ?ಯಗಳ ಕುರಿತು ತಮ್ಮ ಪಾಲಕರಿಗೆ ಅಂಚೆಪತ್ರದ ಮೂಲಕ ಪತ್ರಗಳನ್ನು ಬರೆದು, ತಮ್ಮದೇ ಮುದ್ದಾದ ಕೈಬರಹವನ್ನು ದಾಖಲಿಸಿದರು.

ಈ ಚಟುವಟಿಕೆಯ ಮೂಲಕ ಮಕ್ಕಳಿಗೆ ಪ್ರಾಣಿಗಳ ಕುರಿತು ಅಧ್ಯಯನ ಮಾಡುವುದರ ಜೊತೆಗೆ ಪರಿಸರ, ಕನ್ನಡ ಹಾಗೂ ಗಣಿತ ವಿ?ಯಗಳಿಗೆ ಸಂಬಂಧಿಸಿದ ಕಲಿಕಾಫಲಗಳನ್ನು ಅನುಭವಾತ್ಮಕವಾಗಿ ಅರ್ಥಮಾಡಿಕೊಳ್ಳಲು ಅವಕಾಶ ದೊರೆಯಿತು. ಪತ್ರ ಬರೆಯುವ ಮೂಲಕ ವಿ?ಯವನ್ನು ರವಾನಿಸುವ ಪ್ರಕ್ರಿಯೆ, ಪತ್ರದ ವಿನ್ಯಾಸ ಹಾಗೂ ಪತ್ರ ಬರವಣಿಗೆಯ ಶೈಲಿಯನ್ನೂ ಮಕ್ಕಳು ಕಲಿತರು. ಮಕ್ಕಳ ಕಲಿಕೆಯ ಕುರಿತು ಪಾಲಕರಿಗೆ ನೇರವಾಗಿ ತಿಳಿಯುವ ಅವಕಾಶವೂ ಇದರಿಂದ ದೊರೆಯಿತು.

ಮನು? ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸ, ಮನೆಯ ಸದಸ್ಯನಂತೆಯೇ ಬೆರೆತುಹೋಗುವ ನಾಯಿಯ ಸ್ವಭಾವ, ಮುಧೋಳ ನಾಯಿಗಳ ವೈಶಿ?, ಅವುಗಳ ಕಾರ್ಯವೈಖರಿ ಹಾಗೂ ಸಾಮಾನ್ಯ ನಾಯಿಗಳ ದಿನಚರಿ ಕುರಿತು ಮಕ್ಕಳಲ್ಲಿ ಮೂಡಿರುವ ಕುತೂಹಲಕ್ಕೂ ಈ ಪತ್ರ ಅಭಿಯಾನ ಮತ್ತ? ಪುಷ್ಟಿ ನೀಡಿದೆ.

ಈ ಕುರಿತು ಯೋಜನೆಯ ಸಂಯೋಜಕ ಸುರೇಶ ರಾಜಮಾನೆ ಮಾತನಾಡಿ, ಪತ್ರ ಅಭಿಯಾನವು ಮಕ್ಕಳ ಬರವಣಿಗೆಯ ಕೌಶಲ್ಯವನ್ನು ಸುಧಾರಿಸುವುದರ ಜೊತೆಗೆ ಪತ್ರ ಬರೆಯುವ ಶೈಲಿಯನ್ನು ಪರಿಚಯಿಸುತ್ತದೆ. ತಾವು ಕಲಿಯುತ್ತಿರುವ ವಿ?ಯವನ್ನು ಪಾಲಕರೊಂದಿಗೆ ಹಂಚಿಕೊಳ್ಳುವ ಮೂಲಕ ಮಕ್ಕಳಲ್ಲಿ ಕಲಿಕೆಯ ದೃಢೀಕರಣವೂ ಆಗುತ್ತದೆ. ಪಾಲಕರಲ್ಲಿಯೂ ಮಕ್ಕಳ ಬರವಣಿಗೆ ಹಾಗೂ ಕಲಿಕೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡುತ್ತದೆ ಎಂದು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ಕೆ. ಹರಿಪ್ರಸಾದ್ ಅವರ ಎಂಎಲ್‌ಸಿ ಸ್ಥಾನ ರದ್ದತಿ ಮಾಡಲಿ(ಎಸ್‌.ಎಲ್‌. ಚನ್ನಬಸವಣ್ಣ ಅವರ ಪುಸ್ತಕ ಲೋಕಾರ್ಪಣೆ ಮತ್ತು ಸನ್ಮಾನ ಸಮಾರಂಭಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆದೇವರಾಜ ಅರಸು ಅವರ ಆದರ್ಶ ಎಲ್ಲರಿಗೂ ಪ್ರೇರಣೆ-ಮಂಗಳೂರ  ಮುರುಘೇಂದ್ರ ಶಿವಯೋಗಿಗಳು ಬಸವ ತತ್ವದಂತೆ ನಡೆದು ನಾಡಿಗೆ ಬೆಳಕಾದವರು ಇಂಡಿ: ಹಿರೇರೂಗಿ ಶಾಲೆಯಲ್ಲಿ ಡಿ. ದೇವರಾಜ ಅರಸು 111ನೇ ಜಯಂತಿ ಆಚರಣೆಇಂಡಿ: ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಇಂಡಿ: ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮ / ಉಪನ್ಯಾಸಕ ಸಿದ್ರಾಯ ಕಾಂಬಳೆ  ಅಭಿಮತ ನಶಮುಕ್ತ ಭಾರತ ನಿರ್ಮಾಣಕ್ಕೆ ಯುವಜನತೆಯ ಪಾತ್ರ ಮುಖ್ಯ: ಬಿ.ಕೆ. ಮಂಜುಳಾ ಕರೆಕೋ.ಶಿವಾಪೂರದಿಂದ ಗೊಡಚಿಗೆ ಭಕ್ತರ ಪಾದಯಾತ್ರೆ: ವೀರಭದ್ರೇಶ್ವರನಿಗೆ ವಿಶೇಷ ಪೂಜೆ