LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮ / ಉಪನ್ಯಾಸಕ ಸಿದ್ರಾಯ ಕಾಂಬಳೆ  ಅಭಿಮತ 

ಸಮಾನತೆ ಮತ್ತು ನ್ಯಾಯದ ದಾರಿ ತೋರಿದ ಮಹಾನ್ ನಾಯಕ ಡಿ.ದೇವರಾಜ ಅರಸು 

  
ಅಥಣಿ : ಡಿ. ದೇವರಾಜ ಅರಸು ಅವರು ಕರ್ನಾಟಕದ  ಮುಖ್ಯಮಂತ್ರಿಯಾಗಿ  ಸುದೀರ್ಘ ಸೇವೆ ಸಲ್ಲಿಸುವ ಮೂಲಕ  ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯಗಳು ಇಂದಿಗೂ ಪ್ರಸ್ತುತ ಹಾಗೂ ಇಂದಿನ  ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು   ಉಪನ್ಯಾಸಕ ಸಿದ್ರಾಯ ಕಾಂಬಳೆ  ಹೇಳಿದರು. 
  ಅವರು ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ  ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ  ಸಾಮಾಜಿಕ ಕ್ರಾಂತಿಯ ಹರಿಕಾರ ಹಾಗೂ  ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ  ಡಿ. ದೇವರಾಜ ಅರಸು ಅವರು  ಹಿಂದುಳಿದ ವರ್ಗಗಳ ಮತ್ತು ನೋಂದವರ ಬಾಳಿಗೆ ನಂದಾದೀಪವಾಗಿದ್ದರು.
 ಅವರು ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ಅನೇಕ ಪ್ರಮುಖ ಯೋಜನೆಗಳನ್ನು ಜಾರಿಗೆ ತರುವ ಮೂಲಕ  ಸಾಧನೆಗಳ ಸರ್ದಾರ ಎಂಬ ಬಿರುದು ಪಡೆದುಕೊಂಡರು. ಭೂಸುಧಾರಣೆ, ಉಳುವವನಿಗೆ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಆಲೋಚನೆಯನ್ನು ಜಾರಿಗೊಳಿಸಿದರು. ಇದರಿಂದಾಗಿ ಭೂಹೀನರಿಗೆ ಭೂಮಿ ಸಿಕ್ಕಿತು ಮತ್ತು ರೈತರ ಜೀವನ ಮಟ್ಟ ಸುಧಾರಿಸಿತು.ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಹಾವನೂರು ಆಯೋಗದ ರಚನೆ ಅವರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು ಮತ್ತು ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಅವರನ್ನು ಕರ್ನಾಟಕದ ಇತಿಹಾಸದಲ್ಲಿ ಒಬ್ಬ ಮಹಾನ್ ನಾಯಕ ಎಂದು ಪರಿಗಣಿಸಲಾಗುತ್ತದೆ ಎಂದರು. ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ​ ಅರಸು ಅವರ​ ದಾಖಲೆಯನ್ನು  ಇತ್ತೀಚಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ  ಸಿದ್ದರಾಮಯ್ಯ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಪಂಚಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ  ಸಿದ್ದಾರ್ಥ ಶಿಂಗೆ ಮಾತನಾಡಿ  ಡಿ ದೇವರಾಜ ಅರಸು ಅವರು  ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದಂತೆ ಎಲ್ಲಾ ವರ್ಗದವರಿಗೂ ಸಾಮಾಜಿಕ ಒದಗಿಸಿದರು. ಅವರು ಮುಖ್ಯಮಂತ್ರಿಗಳು ಅವಧಿಯಲ್ಲಿ  518 ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣ ದೊರಕುವಂತೆ ಮಾಡಿದರು. ಇಂದು ರಾಜ್ಯದ ಅನೇಕ ವಸತಿ ನಿಲಯಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಆಶ್ರಯ ಪಡೆದುಕೊಂಡು  ಗುಣಮಟ್ಟದ ಮತ್ತು ಉನ್ನತ ಶಿಕ್ಷಣ ಮನ್ನ ಪಡೆಯುತ್ತಿದ್ದಾರೆ. ದೇವರಾಜ ಅರಸು ಅವರ ಸಾಧನೆಯನ್ನು ನಾವೆಲ್ಲ ಅರಿತುಕೊಳ್ಳಬೇಕು. ಅವರ ಬದುಕು ನಮ್ಮೆಲ್ಲರಿಗೆ ಆದರ್ಶವಾಗಬೇಕು ಎಂದರು.   ಪುರಸಭೆಯ ಉಪಾಧ್ಯಕ್ಷ  ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
 ಇದೇ ಸಂದರ್ಭದಲ್ಲಿ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು  ಡಿ ದೇವರಾಜ್ ಅವರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಉತ್ತಮ ಸಾಧನೆ ಮಾಡಿದ ವಸತಿ ನಿಲಯದ ವಿದ್ಯಾರ್ಥಿಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ಮತ್ತು ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ  ತಾಲೂಕಾ ಆಡಳಿತದಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. 
 ಸಮಾರಂಭದಲ್ಲಿ ತಹಶೀಲ್ದಾರ  ಸಿದರಾಯ ಬೋಸಗಿ, ತಾ. ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಡಿಪಿಓ  ಮಲ್ಲಪ್ಪ ಕೋಳಿ, ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಬಿಸಿಎಂ ಅಧಿಕಾರಿ  ವೆಂಕಟೇಶ ಕುಲಕರ್ಣಿ,   ಮಹಾವಿದ್ಯಾಲಯದ ಪ್ರಾಚಾರ್ಯ  ಪ್ರಶಾಂತ ಮಗದುಮ, ರೇಷ್ಮಾ ಇನಾಮದಾರ, ಸಮಾಜ ಸೇವಕಿ  ರೂಪಾ  ಕಾಂಬಳೆ, ಅಶೋಕ ಆಜುರ, ಪಾರ್ವತಿ ಮಲಗೌಡರ, ಗೀತಾ ನಾಯಕ, ಕೇದಾರಿ ಬಾಗಿ, ಮಹೇಶ ಗಾಡಿವಡ್ಡರ, ಪರಸಪ್ಪ ಮಾಳಗೊಂಡ ಸಂಜು ಕೋರಿ,ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ತಾಲೂಕಾ ಹಿಂದುಳಿದ ವರ್ಗಗಳ  ಕಲ್ಯಾಣ ಅಧಿಕಾರಿ  ವೆಂಕಟೇಶ ಕುಲಕರ್ಣಿ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಹಚಡದ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಸತ್ತಿಗೌಡ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ಕೆ. ಹರಿಪ್ರಸಾದ್ ಅವರ ಎಂಎಲ್‌ಸಿ ಸ್ಥಾನ ರದ್ದತಿ ಮಾಡಲಿ(ಎಸ್‌.ಎಲ್‌. ಚನ್ನಬಸವಣ್ಣ ಅವರ ಪುಸ್ತಕ ಲೋಕಾರ್ಪಣೆ ಮತ್ತು ಸನ್ಮಾನ ಸಮಾರಂಭಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ೧೧೧ನೇ ಜನ್ಮ ದಿನಾಚರಣೆದೇವರಾಜ ಅರಸು ಅವರ ಆದರ್ಶ ಎಲ್ಲರಿಗೂ ಪ್ರೇರಣೆ-ಮಂಗಳೂರ  ಮುರುಘೇಂದ್ರ ಶಿವಯೋಗಿಗಳು ಬಸವ ತತ್ವದಂತೆ ನಡೆದು ನಾಡಿಗೆ ಬೆಳಕಾದವರು ಇಂಡಿ: ಹಿರೇರೂಗಿ ಶಾಲೆಯಲ್ಲಿ ಡಿ. ದೇವರಾಜ ಅರಸು 111ನೇ ಜಯಂತಿ ಆಚರಣೆಇಂಡಿ: ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಇಂಡಿ: ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮ / ಉಪನ್ಯಾಸಕ ಸಿದ್ರಾಯ ಕಾಂಬಳೆ  ಅಭಿಮತ ನಶಮುಕ್ತ ಭಾರತ ನಿರ್ಮಾಣಕ್ಕೆ ಯುವಜನತೆಯ ಪಾತ್ರ ಮುಖ್ಯ: ಬಿ.ಕೆ. ಮಂಜುಳಾ ಕರೆಕೋ.ಶಿವಾಪೂರದಿಂದ ಗೊಡಚಿಗೆ ಭಕ್ತರ ಪಾದಯಾತ್ರೆ: ವೀರಭದ್ರೇಶ್ವರನಿಗೆ ವಿಶೇಷ ಪೂಜೆ