ಮಹಾಲಿಂಗಪುರ,ಅ,೨೯: ಅಕ್ಟೋಬರ್ ೨೮ ಮತ್ತು ೨೯ ರಂದು ಆರಂಭವಾಗುವ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬೆಳಗಾವಿ ವಿಭಾಗ ಪ್ರತಿನಿಧಿಸುತ್ತಿರುವ ಮಹಾಲಿಂಗಪುರ ಪಟ್ಟಣದ ಚಿಂಚಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಜೆ ಕೆಜಿಎಫ್ ಕಡೆಗೆ ಪ್ರಯಾಣ ಬೆಳೆಸಿದರು.
ಈ ಪಂದ್ಯಾವಳಿಯನ್ನು ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಪಂದ್ಯಗಳು ಕೆಜಿಎಫ್, ಉರಿಗಾಂ ಪೇಟೆಯ ಜಿವಿಐಟಿ ಇಂಜಿನೀಯರಿಂಗ್ ಕಾಲೇಜಿನ ಸುಸಜ್ಜಿತ ಮೈದಾನದಲ್ಲಿ ನಡೆಯಲಿವೆ.ಇಲ್ಲಿ ಎಲ್ಲ ಶೈಕ್ಷಣಿಕ ಜಿಲ್ಲೆಗಳಿಂದ ಆಗಮಿಸುವ ೧೪ ವ?ಗಳ ವಯೋಮಿತಿ ವಿದ್ಯಾರ್ಥಿಗಳು ಲೀಗ್ ಮಾದರಿ ಪಂದ್ಯಗಳನ್ನು ಆಡಲಿದ್ದಾರೆ.
ಈ ಸಂದರ್ಭದಲ್ಲಿ ಕಲ್ಬುರ್ಗಿ, ಬೆಳಗಾವಿ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು,ಉತ್ತಮ ಪ್ರದರ್ಶನ ಕಂಡು ಪ್ರಥಮ ಹಂತವನ್ನು ಪಡೆಯುವ ತಂಡ ರಾ? ಮಟ್ಟದ ಪಂದ್ಯಾವಳಿಯಲ್ಲಿ ಪ್ರದರ್ಶನ ಕಾಣಲಿದೆ.ನಿಯಮದಂತೆ ರಾ? ಮಟ್ಟ ಆಡುವ ತಂಡದಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ೧೧ ಮತ್ತು ದ್ವಿತೀಯ (ರನ್ನರ್ ಅಪ್) ಸ್ಥಾನದ ೫ ಆಟಗಾರರು ಭಾಗವಹಿಸುವರು ಎಂದು ದೈಹಿಕ ಶಿಕ್ಷಕ ರಾಮಚಂದ್ರ ಮೇತ್ರಿ ತಿಳಿಸಿದ್ದಾರೆ.
ತಂಡದ ವ್ಯವಸ್ಥಾಪಕರಾಗಿ ಸಚಿನ್ ಕಂದಂ ಕಾರ್ಯ ನಿರ್ವಹಿಸುವರು.ಶಾಲಾ ಅಧ್ಯಕ್ಷೆ ಮಹಾನಂದಾ ಚಿಂಚಲಿ,ಶಾಲಾ ಕಾರ್ಯದರ್ಶಿ ಪವನ ಚಿಂಚಲಿ, ಆಡಳಿತ ನಿರ್ದೇಶಕ ಮಹಾಂತೇಶ ಚಿಂಚಲಿ, ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ.ಗೋರಬಾಳ ಮತ್ತು ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿ,ನಿಯರು ಉತ್ತಮ ಪ್ರದರ್ಶನಕ್ಕೆ ಶುಭ ಕೋರಿದ್ದಾರೆ.