LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ನವಂಬರ್ 2ರಿಂದ  ಹೆಲ್ಮೆಟ್ ಕಡ್ಡಾಯ ಅಭಿಯಾನ : ಎಸ್. ಪಿ ಸುಮನ್ ಡಿ ಪನ್ನೇಕರ್ 

ಬಳ್ಳಾರಿ. ಅ. 29: :  ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ   ಹೆಲ್ಮೆಟ್ ಕಡ್ಡಾಯಗೊಳಿಸಲಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತು ಹೆಲ್ಮೆಟ್ ಧರಿಸುವುದನ್ನು ರೂಢಿಯಾಗಿಸಿಕೊಂಡಿದ್ದು,  ನಂತರತ ಪೊಲೀಸರಿಂದ  ಹೆಲ್ಮೆಟ್ ತಪಾಸಣೆ ಕಡಿಮೆ ಆಗಿದ್ದರಿಂದ   ನಗರ ಪ್ರದೇಶಗಳಲ್ಲಿ ಹೆಲ್ಮೆಟ್ ಧರಿಸುವ ವಾಹನ ಸವಾರರ ಸಂಖ್ಯೆ ಕಡಿಮೆಯಾಗಿರುತ್ತದೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ದಾಖಲಾದ ಅಪಘಾತ ಪ್ರಕರಣಗಳನ್ನು ಪರಿಶೀಲಿಸಲಾಗಿ ಬಹುತೇಕ ಪ್ರಕರಣಗಳಲ್ಲಿ ಮೃತರು ಹಾಗೂ ಗಾಯಾಳುಗಳು ಹೆಲ್ಮೆಟ್ ಧರಿಸದೇ ಇರುವುದರಿಂದ ತಲೆಗೆ ಪೆಟ್ಟಾಗಿ ಸಾಧಾರಣ ಹಾಗೂ ಗಂಭೀರ ಸ್ವರೂಪದ ಗಾಯಗಳಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದಾಖಲಾಗಿ ಮೃತಪಟ್ಟರುವುದು ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿರುವುದು ಕಂಡು ಬಂದಿರುತ್ತದೆ. ಇತ್ತೀಚೆಗೆ ಅಕ್ಟೋಬರ್ 15 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ 16 ವರ್ಷದ, ವಿದ್ಯಾರ್ಥಿ ಚೇತನ ನಿರುಗುಪ್ಪ ರಸ್ತೆಯ ಕುರಿಹಟ್ಟಿ (ಎನ್.ಹೆಚ್. 150(ಎ) ಮೋಟಾರ್ ಸೈಕಲ್ ಅನ್ನು ನಿರ್ಲಕ್ಷತನದಿಂದ ಚಾಲನೆ ಮಾಡಿ ಆಯತಪ್ಪಿ ರಸ್ತೆ ವಿಭಜಕದ  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು  ರಸ್ತೆಯಲ್ಲಿ ಬಿದ್ದ ಪರಿಣಾಮ ತಲೆಯಲ್ಲಿ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಯಲ್ಲಿ ಗುಣಮುಖವಾಗದೆ ಮೃತಪಟ್ಟಿರುತ್ತಾನೆ . ಇದೇ ರೀತಿಯಾಗಿ ಇನ್ನೂ ಅನೇಕ ಅಪಘಾತ ಪ್ರಕರಣಗಳಲ್ಲಿ ಸಾವು-ನೋವು ಸಹ ಉಂಟಾಗಿರುತ್ತವೆ.
ವಾಹನ ಸವಾರರ ಅಮೂಲ್ಯ ಪ್ರಾಣ ಹಾಗೂ ಅಪಘಾತಗಳಿಂದ ಉಂಟಾಗುವ ಅಂಗ ವೈಕಲ್ಯತೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದೇ ನವಂಬರ್ 2ರಿಂದ ಹೆಲ್ಮೆಟ್  ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಹಾಗೂ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ, ತಪ್ಪಿದಲ್ಲಿ ಹೆಲ್ಮೆಟ್ ಧರಿಸಿದೆ ಇರುವವರಿಗೆ ಮತ್ತು ಅಪ್ರಾಪ್ತ ವಯಸ್ಸಿನ ಚಾಲಕರ ಪೋಷಕರಿಗೆ ದಂಡವನ್ನು ವಿಧಿಸಲಾಗುವುದು ಎಂದು ಜಿಲ್ಲಾ ಎಸ್ ಪಿ ಸುಮನ್ ಡಿಪನ್ನೇಕರ್ ಪ್ರಕಟಣೆ ನೀಡಿ  ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವನವನ್ನು ಕಾಪಾಡಿಕೊಳ್ಳಲು ವಿನಂತಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST