ಬಳ್ಳಾರಿ, ಅ.09:: ಬಳ್ಳಾರಿಯ ಉದ್ಯಮಿ ಹಾಗೂ ಸಮಾಜ ಸೇವಕ ರಾಜೇಶ್ ಎಂ.ಪಿ. ಅವರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಏಷಿಯನ್ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು..
ರಾಜೇಶ್ ಎಂ.ಪಿ. ಅವರು ಸಮಾಜ ಸೇವೆ ಹಾಗೂ ಬಡವರ ಸೇವೆಯಲ್ಲಿ ಸಲ್ಲಿಸುತ್ತಿರುವ ಕಾರ್ಯಗಳನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಎಐಎನ್ಟಿಯುಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎ. ಮನೋಕರಣ್, ಪ್ರಣವ ಸ್ವರೂಪ ಮುನಿ ನಿರಂಜನಾಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮಿಗಳು, ಸಮಾಜ ಸೇವಕ ಹಾಗೂ ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ರವಿಕುಮಾರ್ ಎಲ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.