ಮೈಸೂರು, ಡಿಸೆಂಬರ್ 19: ಮುಡಾ ಹಗರಣ ಹಗರಣ ಸಂಬಂಧ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ, ಮುಡಾ ಅಕ್ರಮ ತನಿಖೆ ಮಾಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅದಕ್ಕೆ ಅರ್ಹರಲ್ಲ ಎಂದು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರನ್ನು ಸಿಎಟಿ (Central Administrative Tribunal) ಸದಸ್ಯರನ್ನಾಗಿ ನೇಮಕ ಮಾಡಿ ಈ ಹಿಂದೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವೈಯಕ್ತಿಕ ಕಾರಣದಿಂದ ಪಿಎನ್ ದೇಸಾಯಿ ಸದಸ್ಯತ್ವ ಒಪ್ಪಿರಲಿಲ್ಲ. ಆ ಸಂದರ್ಭದಲ್ಲಿ ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಪಿಎನ್ ದೇಸಾಯಿ ಒಪ್ಪಿದ್ದರು.
ಪಿಎನ್ ದೇಸಾಯಿ ಒಪ್ಪಿದ್ದ ನಿಬಂಧನೆಗಳೇನು?
ನೇಮಕಾತಿ ಆದೇಶವನ್ನು ನಿರಾಕರಿಸದೇ ಇರುವುದು, ಆದೇಶ ಆದ 30 ದಿನಗಳ ಒಳಗಾಗಿ ಜವಾಬ್ದಾರಿ ಸ್ವೀಕರಿಸುವ ನಿಬಂಧನೆಗಳನ್ನು ಪಿಎನ್ ದೇಸಾಯಿ ಒಪ್ಪಿದ್ದರು. ಒಂದ ವೇಳೆ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೂರು ವರ್ಷಗಳ ಕಾಲ ಯಾವುದೇ ಆಯೋಗಕ್ಕೆ ನೇಮಕ ಮಾಡದಂತೆ ಡಿಬಾರ್ ಆಗಬಹುದು ಎಂಬ ನಿಬಂಧನೆಗೂ ಒಪ್ಪಿದ್ದರು. ಹೀಗಾಗಿ, ನಂತರದಲ್ಲಿ ಸಿಎಟಿ ಸದಸ್ಯತ್ವ ಒಪ್ಪದ ಕಾರಣ ಅವರನ್ನು ಮೂರು ವರ್ಷ ಶಾಸನಬದ್ಧ ಸಮಿತಿ, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗೆ ನೇಮಕ ಮಾಡದಂತೆ ಆದೇಶ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರ ಸಂಬಂಧ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.