LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಪರ್ಪೆಚುವಲ್ ಲೀಸ್ ಆಸ್ತಿ ನೋಂದಣಿ ಸಮಸ್ಯೆ ಶೀಘ್ರ ಪರಿಹಾರ: ಕ್ರೆಡಾಯ್ ನಿಯೋಗಕ್ಕೆ ಐಜಿಆರ್ ಭರವಸೆ

ಬೆಳಗಾವಿ: ಪರ್ಪೆಚುವಲ್ ಲೀಸ್ (ಶಾಶ್ವತ ಗುತ್ತಿಗೆ) ಆಸ್ತಿಗಳಿಗೆ ಸಂಬಂಧಿಸಿದಂತೆ ಬಹುಕಾಲದಿಂದ ಬಾಕಿ ಉಳಿದಿರುವ ನೋಂದಣಿ ಹಾಗೂ ವಹಿವಾಟು ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ಕರ್ನಾಟಕ ಸರ್ಕಾರದ ನೋಂದಣಿ ಮಹಾನಿರೀಕ್ಷಕರು (IGR) ಮುಲ್ಲೈ ಮುಹಿಲನ್ ನೀಡಿದ್ದಾರೆ.
ಈ ಸಂಬಂಧ ಬೆಳಗಾವಿ ಕ್ರೆಡಾಯ್ ತಂಡವು ಕರ್ನಾಟಕ ಸರ್ಕಾರದ IGR ಮುಲ್ಲೈ ಮುಹಿಲನ್ ಅವರನ್ನು ಭೇಟಿಯಾಗಿ, ಪರ್ಪೆಚುವಲ್ ಲೀಸ್ ಆಸ್ತಿಗಳಿಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿತು. ಈ ಸಂದರ್ಭದಲ್ಲಿ AIGR (ಕಂಪ್ಯೂಟರ್) ಮಧುಸೂಧನ ಅವರು ಉಪಸ್ಥಿತರಿದ್ದರು.
ಪರ್ಪೆಚುವಲ್ ಲೀಸ್ ಆಸ್ತಿಗಳ ವಹಿವಾಟು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯಿಂದಾಗಿ ಆಸ್ತಿ ಮಾಲೀಕರು, ನಿರ್ಮಾಪಕರು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದವರು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿರುವುದನ್ನು ಕ್ರೆಡಾಯ್ ನಿಯೋಗವು ಐಜಿಆರ್ ಅವರ ಗಮನಕ್ಕೆ ತಂದಿತು.
ಸಮಸ್ಯೆಯ ಕುರಿತು ಈಗಾಗಲೇ ಸಂಪೂರ್ಣ ಅರಿವು ಹೊಂದಿರುವುದಾಗಿ ತಿಳಿಸಿದ IGR ಮುಲ್ಲೈ ಮುಹಿಲನ್, ಅಗತ್ಯ ವಹಿವಾಟುಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಕಾವೇರಿ (CAVERI) ಸಾಫ್ಟ್‌ವೇರ್‌ನಲ್ಲಿ ಹೊಸ ಆಯ್ಕೆಯನ್ನು (ಆಪ್ಷನ್) ಸೇರ್ಪಡೆಗೊಳಿಸಲು ಅಗತ್ಯ ಅನುಮತಿಯನ್ನು ಈಗಾಗಲೇ ಪಡೆಯಲಾಗಿದೆ ಎಂದು ತಿಳಿಸಿದರು.
ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು. 
ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ಸಕಾರಾತ್ಮಕ ಸುದ್ದಿ ಹೊರಬರುವ ನಿರೀಕ್ಷೆಯಿದೆ ಎಂದು ಕ್ರೆಡಾಯ್ ತಂಡ ತಿಳಿಸಿದೆ.
ಪರ್ಪೆಚುವಲ್ ಲೀಸ್ ಆಸ್ತಿಗಳ ಸಮಸ್ಯೆ ಬಗೆಹರಿದರೆ, ಸಂಬಂಧಿತ ಆಸ್ತಿಗಳ ವಹಿವಾಟು ಮತ್ತು ನೋಂದಣಿ ಪ್ರಕ್ರಿಯೆ ಸುಗಮವಾಗಲಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದವರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
 ಹೀಗಾಗಿ ಐಜಿಆರ್ ನೀಡಿರುವ ಭರವಸೆ ಬೆಳಗಾವಿಯ ರಿಯಲ್ ಎಸ್ಟೇಟ್ ವಲಯದಲ್ಲಿ ಆಶಾಭಾವನೆ ಮೂಡಿಸಿದೆ.
ಭೇಟಿಯಲ್ಲಿ ಕ್ರೆಡಾಯ್ ಅಧ್ಯಕ್ಷ ಯುವರಾಜ್ ಹುಲ್ಜಿ, ಪ್ರಶಾಂತ್ ವಾಂಡಕರ್, ಸುಧೀರ್ ಪನಾರೆ, ಅಮರ್ ಅಕ್ನೋಜಿ, ಸಚಿನ್ ಬೈಲವಾಡ್, ಪ್ರಶಾಂತ್ ಪಾಟೀಲ, ವೀರೇಶ್ ಶೆಟ್ಟಣವರ, ರಾಜೇಶ್ ಮಾಳಿ, ರಾಜೇಂದ್ರ ಮುತಗೆಕರ್ ಹಾಗೂ ಡಿ.ಎ. ಸಾಯನೇಕರ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪಗಾಂವದಲ್ಲಿ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ ಮಧ್ಯಾರಾಧನೆ ಅದ್ದೂರಿಪರ್ಪೆಚುವಲ್ ಲೀಸ್ ಆಸ್ತಿ ನೋಂದಣಿ ಸಮಸ್ಯೆ ಶೀಘ್ರ ಪರಿಹಾರ: ಕ್ರೆಡಾಯ್ ನಿಯೋಗಕ್ಕೆ ಐಜಿಆರ್ ಭರವಸೆವಿದ್ಯಾರ್ಥಿಗಳ ಭವಿಷ್ಯಕ್ಕೆ ವಾಣಿಜ್ಯ ಕೋರ್ಸ್ ಉತ್ತಮ ಆಯ್ಕೆ : ಬಾಹುಬಲಿ ಹೊಸಮನಿಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಬೀದಿಗಿಳಿದು ಹೋರಾಟ-ಬಿರಾದಾರಕಾಗವಾಡ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ಜನ..!ನೀರಿನ ತೊಟ್ಟಿ ಸ್ವಚ್ಛಗೊಳಿಸಿ ವರದಿ ಸಲ್ಲಿಸಲು ಸೂಚನೆಬರ ಪೀಡಿತ ತಾಲೂಕುಗಳ ಪಟ್ಟಿಗೆ ಮರುಸೇರ್ಪಡೆಗೆ ಆಗ್ರಹಿಸಿ ಬಿಜೆಪಿಯಿಂದ ಮನವಿಪಿಕೆಪಿಎಸ್ ಅಧ್ಯಕ್ಷರಾಗಿ ಚಂದ್ರಶೇಖರ-ಉಪಾಧ್ಯಕ್ಷರಾಗಿ ಈರಮ್ಮ ಅವಿರೋಧ ಆಯ್ಕೆ31ಕ್ಕೆ ಎಂಜಿನಿಯರ್‌ ಶ್ರೀಧರ ಸಾರವಾಡರಿಗೆ ಬೀಳ್ಕೊಡುಗೆ ಕಾರ್ಯಕ್ರಮಲೇಖಕ ಡಾ.ರಾಕೇಶ ಎ.ವಿ. ಮಾಹಿತಿ । ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಶನ್, ಆರ್.ಎನ್.ಸಿ. ಆಸ್ಪತ್ರೆ ಸಹಯೋಗ