ಮುಧೋಳ: ಸ.೧೬: ತಾಲ್ಲೂಕಿನ ಸೊರಗಾಂವ ಗ್ರಾಮದ Pಒ SಊಖI ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲಾಮಟ್ಟದ ಡ್ರಮ್‌ಸೆಟ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಬಾಲಕರು ಹಾಗೂ ಬಾಲಕಿಯರು ತಂಡವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ, ಡ್ರಮ್‌ಸೆಟ್‌ನ ವಿವಿಧ ವಾದ್ಯಗಳನ್ನು ಲಯಬದ್ಧವಾಗಿ ಹಾಗೂ ಸಮನ್ವಯದಿಂದ ನುಡಿಸುವ ಮೂಲಕ ತಮ್ಮ ಸಂಗೀತ ಪ್ರತಿಭೆ, ಶಿಸ್ತು, ಸಮಯಪಾಲನೆ ಮತ್ತು ತಂಡದ ಮನೋಭಾವವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಆತ್ಮವಿಶ್ವಾಸ ಹಾಗೂ ಶಿಕ್ಷಕರ ಮಾರ್ಗದರ್ಶನ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಕನೋಲ್ಕರ್ ಮ್ಯಾಡಂ, ಬೆನಕಟ್ಟಿ ಮ್ಯಾಡಂ, ವಿ.ಜಿ. ಮಲಕನ್ನವರ, ಎಸ್.ಎಸ್. ಜೀರಗಾಳ ಹಾಗೂ ಬಿ. ದೋಡಮನಿ ಶಿಕ್ಷಕರ ಪರಿಶ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯ ಬಿ.ಆರ್. ಶಿರೂರು ಶ್ಲಾಘಿಸಿದ್ದಾರೆ.ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಸಿಬ್ಬಂದಿ, ಪೋ?ಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಮುಂದಿನ ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ. ಪ್ರತಿಭೆಗೆ ವೇದಿಕೆ ದೊರೆತಾಗ ಪರಿಶ್ರಮ ಯಶಸ್ಸಾಗಿ ಅರಳುತ್ತದೆ ಎಂಬುದಕ್ಕೆ ಸೊರಗಾಂವ Pಒ SಊಖI ಏPS ವಿದ್ಯಾರ್ಥಿಗಳ ಸಾಧನೆ ಸಾಕ್ಷಿಯಾಗಿದೆ.