ತಾಳಿಕೋಟೆ, ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಆಡಳಿತ ವೈದ್ಯಾಧಿಕಾರಿಯಾಗಿ ಇತ್ತೀಚೆಗೆ ಡಾ. ವಿ.ಜಿ. ಬಿರಾದಾರ ಅವರು ನೇಮಕಗೊಂಡಿದ್ದಾರೆ.
ಡಾ. ವಿ.ಜಿ. ಬಿರಾದಾರ ಅವರು ಈ ಹಿಂದೆ ಸಾಸನೂರ, ಕುದರಿ ಸಾಲವಾಡಗಿ, ಹೂವಿನ ಹಿಪ್ಪರಗಿ, ಉಕ್ಕಲಿ ಒಳಗೊಂಡು ಕೆಲವು ಗ್ರಾಮಗಳಲ್ಲಿಯ ಆರೋಗ್ಯ ಕೇಂದ್ರಗಳಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಈ ಹಿಂದೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಆರ್‌ಎಂಒ ಆಗಿ ೯ ವರ್ಷ ಸೇವಸಲ್ಲಿಸಿರುವ ಅನುಭವಿ ವೈದ್ಯರಾಗಿದ್ದು ಈಗ ಇವರು ತಾಳಿಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆಗೆ ಮುಂದಾಗಿದ್ದಾರೆ. ಅಲ್ಲದೇ ಆಸ್ಪತ್ರೆಯ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವದರ ಜೊತೆಗೆ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನೀರಿಕ್ಷೆ ಇದೆ.