ಬಳ್ಳಾರಿ,ಅ.09: ನೌಕರರ ಆರೋಗ್ಯ ಕಾಪಾಡುವ ಪ್ರಮುಖ ಉದ್ದೇಶದೊಂದಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.
ಶಿಬಿರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಒಟ್ಟು 17 ಪ್ರತ್ಯೇಕ ತಪಾಸಣಾ ಕೌಂಟರ್ಗಳನ್ನು ಸ್ಥಾಪಿಸಲಾಗಿತ್ತು. ಮನೋವೈದ್ಯಕೀಯ, ಚರ್ಮರೋಗ, ಇಸಿಜಿ, ಎಕ್ಸ್-ರೇ ಹಾಗೂ ಕ್ಷಯರೋಗ ಸೇರಿದಂತೆ ತಲೆಯಿಂದ ಕಾಲಿನವರೆಗಿನ ಸಂಪೂರ್ಣ ದೈಹಿಕ ಹಾಗೂ ಮಾನಸಿಕ ಸ್ವಾಸ್ಥö್ಯಕ್ಕಾಗಿ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿತ್ತು. ಒಟ್ಟು 216 ನೌಕರರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಂಡರು.
ವಿವಿಧ ಪರೀಕ್ಷೆಗಳ ವಿವರ:*
ರಕ್ತದೊತ್ತಡ ಮತ್ತು ಮಧುಮೇಹ: 152 ಜನರಿಗೆ ರಕ್ತದೊತ್ತಡ ಹಾಗೂ 118 ಜನರಿಗೆ ಮಧುಮೇಹ ಪರೀಕ್ಷೆ ನಡೆಸಲಾಯಿತು.
ಪ್ರಯೋಗಾಲಯ ಪರೀಕ್ಷೆಗಳು: ಹೆಚ್.ಐ.ವಿ ಕ್ಯೂಆರ್ ಕೋಡ್ (208), ಹೆಚ್.ಐ.ವಿ ತಪಾಸಣೆ (119), ಸಿ.ಬಿ.ಸಿ (32), ರಕ್ತಹೀನತೆ (03), ಎಕ್ಸ್-ರೇ (36), ಸ್ಪೂಟಮ್ (03) ಮತ್ತು ಇಸಿಜಿ (52) ಪರೀಕ್ಷೆಗಳನ್ನು ಕೈಗೊಳ್ಳಲಾಯಿತು.
ವಿಶೇಷ ತಜ್ಞರ ತಪಾಸಣೆ:*
ಕಣ್ಣಿನ ತಪಾಸಣೆ (118), ದಂತ ಪರೀಕ್ಷೆ (36), ಇಎನ್ಟಿ (29), ಚರ್ಮರೋಗ (26), ಜನರಲ್ ಮೆಡಿಸಿನ್ (18) ಹಾಗೂ ಕೀಲು-ಮೂಳೆ ತಜ್ಞರಿಂದ 13 ಜನರಿಗೆ ಚಿಕಿತ್ಸೆ ನೀಡಲಾಯಿತು.
ಸಮಾಲೋಚನೆ ಮತ್ತು ಲಸಿಕೆ:*
ಶಸ್ತ್ರಚಿಕಿತ್ಸೆ ಆಪ್ತ ಸಮಾಲೋಚನೆಗೆ 11, ಮಾನಸಿಕ/ತಂಬಾಕು ನಿಯಂತ್ರಣ ಸಮಾಲೋಚನೆಗೆ 13 ಹಾಗೂ ಪ್ರಸೂತಿ ಆರೈಕೆಗೆ 17 ನೌಕರರು ಒಳಪಟ್ಟರು. ಜೊತೆಗೆ 06 ಜನರಿಗೆ ಹೆಚ್.ಪಿ.ವಿ ಹಾಗೂ 16 ಜನರಿಗೆ ಹೆಪಟೈಟಿಸ್-ಬಿ ಲಸಿಕೆ ನೀಡಲಾಯಿತು.
ರಕ್ತದಾನ ಮತ್ತು ಅಂಗಾAಗ ದಾನ:*
ನೌಕರರು ಸ್ವಯಂಪ್ರೇರಿತರಾಗಿ 16 ಯೂನಿಟ್ ರಕ್ತದಾನ ಮಾಡಿದರು ಮತ್ತು ಇಬ್ಬರು ಅಂಗಾAಗ ದಾನಕ್ಕೆ ನೋಂದಣಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹ್ಯಾರೀಸ್ ಸುಮೈರ್, ಜಿ.ಪಂ. ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಡಿ. ಮಳಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ವಿ., ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಜಿಲ್ಲಾ ಮತ್ತು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.