ಮೂಡಲಗಿ : ಪಟ್ಟಣದ ಹೆಸರಾಂತ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಮೂಡಲಗಿ, ೨೦೨೫-೨೬ನೇ ಹಣಕಾಸಿನ ವ?ದ ಕೊನೆಯಲ್ಲಿ ೭.೪೫ ಕೋಟಿ ರೂ. ನಿವ್ವಳ ಲಾಭಗಳಿಸುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಸುಭಾಸ.ಗಂ.ಬೆಳಕೂಡ ತಿಳಿಸಿದರು.
ಸೋಮವಾರದಂದು ಪಟ್ಟಣದಲ್ಲಿರುವ ಸಂಘದ ಸಭಾ ಭವನದಲ್ಲಿ ಜರುಗಿದ ೩೧ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವ?ದಲ್ಲಿ ಸೊಸಾಯಿಟಿಯು ೪.೭೩ ಕೋಟಿ ರೂ. ಶೇರು ಬಂಡವಾಳ, ೩೦.೮೪ ಕೋಟಿ ರೂ. ಕಾಯ್ದಿರಿಸಿದ ನಿಧಿಗಳು. ೩೩೩.೮೪ ಕೋಟಿ ರೂ. ಠೇವಣಿ ಹಾಗೂ ೧೧೮.೪೬ ಕೋಟಿ ರೂ. ಗುಂತಾವಣೆ ಹೊಂದಿದ್ದು, ೨೩೭.೫೨ ಕೋಟಿ ರೂ. ಸಾಲ ವಿತರಿಸುವ ಮೂಲಕ, ೩೯೧.೪೧ ಕೋಟಿ ರೂ ದುಡಿಯುವ ಬಂಡವಾಳದೊಂದಿಗೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ದಿವ್ಯ ಸಾನಿಧ್ಯವನ್ನು ಶಿವಾಪೂರದ ಶ್ರೀ ಅಡವಿಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಮೂಡಲಗಿಯ ಶ್ರೀ ಶಿವಾನಂದ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಇಸ್ಮಾಯಿಲ್ ಕಳ್ಳಿಮನಿ, ಲೆಕ್ಕ ಪರಿಶೋಧಕರಾದ ಸೈದಪ್ಪ ಗದಾಡಿ, ದಶರಥ ಹುಲಕುಂದ, ಬೀರಪ್ಪ ಮುಗಳಖೋಡ, ಬಸವರಾಜ ಬಟಕುರ್ಕಿ ಸೇರಿದಂತೆ ವಿವಿಧ ಶಾಖೆಗಳ ಅಧ್ಯಕರು, ನಿರ್ದೇಶಕರು, ಸದಸ್ಯರು, ಪಧಾನ ವ್ಯವಸ್ಥಾಪಕರಾದ ರಮೇಶ ವಂಟಗೂಡಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.