ಗುರ್ಲಾಪೂರ(30):- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ , ಹಾಗೂ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಬೃಹತ್ ರೈತ ಪ್ರತಿಭಟನೆಯು ಆರು ದಿನ ಕಳೆದರೂ ಸಂಬಂಧಪಟ್ಟ ಕಾರ್ಖಾನೆ ಮಾಲೀಕರಾಗಲಿ ಸರ್ಕಾರವಾಗಲಿ ಕ್ಯಾರೆ ಎಂದಿಲ್ಲ , ಇದರಿಂದ ಆಕ್ರೋಶಗೊಂಡ ಬೃಹತ್ ರೈತ ಸಮುದಾಯದಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಕಬ್ಬಿಗೆ ಕಾರ್ಖಾನೆ ಮಾಲೀಕರಿಂದ 4500 ರೂ, ರಾಜ್ಯ ಸರ್ಕಾರದ ಎಸ್ ಎ ಪಿ 1,000 ರೂ ಬೇಡಿಕೆಗೆ ಗುರ್ಲಾಪುರದಲ್ಲಿ ನಡೆಯುತ್ತಿರುವ ಬೃಹತ್ ರೈತ ಹೋರಾಟ ನಡೆಯುತ್ತಿದ್ದರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತ ಕಡೆ ತಿರುಗಿ ನೋಡದೆ ಇರುವುದರಿಂದ ಸಿಟ್ಟುಗೊಂಡ ರೈತ ಸಮುದಾಯ ನಾಳೆ ಕರ್ನಾಟಕ ರಾಜ್ಯ ಬಂದ್ ಗೆ ಕರೆ ನೀಡಿದ್ದಾರೆ.