LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಸೆ.15 ರವರೆಗೆ ‘ಜಾಬ್ ಕಾರ್ಡ್ ಮೇಳ' ಆಯೋಜನೆ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್

ಬಳ್ಳಾರಿ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಭದ್ರತೆ



ಬಳ್ಳಾರಿ,ಆ.25 ‘ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಅಜೀವಿಕ ಮಿಷನ್' ಯೋಜನೆಯಡಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 15 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಿಂಗಳ ಕಾಲ ‘ಜಾಬ್ ಕಾರ್ಡ್ ಮೇಳ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಲು ಹಾಗೂ ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
‘ಪ್ರತಿ ಮನೆಗೆ ಭೇಟಿ- ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ’ ಎಂಬ ಧ್ಯೇಯವಾಕ್ಯದೊಂದಿಗೆ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ನೋಂದಣಿ ಕಾರ್ಯ ಹಾಗೂ ಜಾಗೃತಿ ಮೂಡಿಸಲಿದ್ದಾರೆ.
*ಅಭಿಯಾನದ ಸೌಲಭ್ಯಗಳು:*
ಉದ್ಯೋಗಾವಕಾಶ: ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಉದ್ಯೋಗ ಖಾತರಿ.
ದೈನಂದಿನ ಕೂಲಿ: ದಿನಕ್ಕೆ ರೂ.382 ನಿಗದಿತ ಕೂಲಿ ನೀಡಿಕೆ.
ಜೀವನೋಪಾಯ ರಕ್ಷಣೆ: ಸ್ಥಳೀಯವಾಗಿಯೇ ಅಕುಶಲ ಕೆಲಸ ನೀಡಿ ನಗರಗಳಿಗೆ ವಲಸೆ ಹೋಗುವುದನ್ನು ನಿಯಂತ್ರಿಸುವುದು.
*ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳು:*
ಬರ ಮತ್ತು ಜಲ ಸಂರಕ್ಷಣೆ: ಕೃಷಿ ಹೊಂಡ, ತೆರೆದ ಬಾವಿ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕಗಳು ಮತ್ತು ನಾಲಾಗಳಿಗೆ ತಡೆಗೋಡೆ ನಿರ್ಮಾಣ.
ವೈಯಕ್ತಿಕ ಜೀವನೋಪಾಯ: ಫಲಾನುಭವಿಗಳ ಜಮೀನಿನಲ್ಲಿ ದನದ ಕೊಟ್ಟಿಗೆ, ಕುರಿ ಮತ್ತು ಮೇಕೆ ಶೆಡ್‌ಗಳ ನಿರ್ಮಾಣಕ್ಕೆ ಆದ್ಯತೆ.
ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ಈ ಅಭಿಯಾನದ ಸದುಪಯೋಗ ಪಡೆದುಕೊಂಡು, ಹೊಸ ಜಾಬ್ ಕಾರ್ಡ್ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.15 ರವರೆಗೆ ‘ಜಾಬ್ ಕಾರ್ಡ್ ಮೇಳ' ಆಯೋಜನೆ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ರೈತರ ಹಿತಕ್ಕಾಗಿ ಶ್ರಮಿಸಿದ ಶಶಿಧರ ಸರ್‌: ಬೆಳೆ ಸಮೀಕ್ಷೆದಾರರ ಸಂಘದ ಅಭಿನಂದನೆಸಚಿವ ಬಿ. ನಾಗೇಂದ್ರ ಪರ ಕಾಂಗ್ರೆಸ್ ಬೃಹತ್ ರ್ಯಾಲಿ: ಬಿಜೆಪಿ ಆರೋಪಗಳಿಗೆ ತಿರುಗೇಟುವ್ಯಕ್ತಿತ್ವ ವಿಕಸನ ಮತ್ತು ಸಮಾಜದ ಏಳಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತವೆ : ಎನ್.ವಿ.ಹನುಮಂತ ರಾವ್ವಿರೋಧಿಗಳ 5 ಸಾವಿರ ಕೋಟಿ ರೂ. ಆರೋಪ ಬರಿ ಸ್ಟಂಟ್; ಚರ್ಚೆಗೆ ನಾನು ಸಿದ್ಧ , ಆದರೆ ಮಳೆ ಕರ್ಣಿ ಮುಂದೆ ಬರಬೇಕು; ಸಂಜಯ್ ಪಾಟೀಲ್ ನೇರವಾಗಿ ಚರ್ಚೆಗೆ ಬರಲಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು*ಡಿ.ವೈ. ಪಾಟೀಲ ಮನೆಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್* *ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಲಕ್ಷ್ಮೀ ಹೆಬ್ಬಾಳಕರ್*‘ಆರೋಗ್ಯವೇ ಸಂಪತ್ತು’ – ಕ್ರೆಡೈ ಯೂತ್ ವಿಂಗ್‌ನ 3K ಫನ್ ರನ್  ಸಂಪನ್ನಬಳ್ಳಾರಿ ಸಿಟಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ: ಜಿಲ್ಲಾಧಿಕಾರಿಗೆ ಕಾರ್ಮಿಕ ಶಕ್ತಿ ಮನವಿಈದ್ ಮಿಲಾದ್, ಗಣೇಶ ಹಬ್ಬ: ಮಹಾಲಿಂಗಪುರದಲ್ಲಿ ಪೊಲೀಸ್ ಜಾಥಾ