ಮುರಗುಂಡಿ. ( ತಾ. ಅಥಣಿ ) ಇಲ್ಲಿನ ಪ್ರತಿಷ್ಠಿತ ಶ್ರೀ ಭಾರತ ಮಾತಾ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ನೆರವೇರಿಸುವದರ ಮೂಲಕ ಅದ್ದೂರಿಯಾಗಿ ಸಕಲ ಗೌರವಗಳೊಂದಿಗೆ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಸಂಸ್ಥೆಯ ಅಧ್ಯಕ್ಷ ಬಾಬುರಾವ ವಾಘಮೋಡೆ ಮಾತನಾಡಿ ದೇಶದ ಸ್ವತಂತ್ರ್ಯಕ್ಕೆ ಅನೇಕರು ತ್ಯಾಗ, ಬಲಿಧಾನ ಮಾಡಿದು, ಅವರನ್ನು ಸ್ಮರಿಸಿ, ದೇಶ ಬೆಳವಣಿಗೆಗೆ ನಾವು, ನೀವೆಲ್ಲರೂ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿಗಳಾದ ಪ್ರಶಾಂತರಾವ ವಾಘಮೋಡೆ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಹೊಳೆಪ್ಪ ಪೂಜೇರಿ,, ಎಸ್ ಡಿ ಎಂ ಸಿ ಅಧ್ಯಕ್ಷ ಸುಕುಮಾರ ಕುಡೊಳ್ಳಿ, ಸುರೇಶ ಸನದಿ, ಶ್ರೀಶೈಲ ಬಿರಾಜದಾರ, ಪ್ರಾಚಾರ್ಯ ಆಜೀತ ಗಸ್ತಿ, ಅಂಜಲಿ ಪೋತದಾರ, ಶ್ರೀಕಾಂತ ಉಳವಿ, ಶಾಲಾ, ಕಾಲೇಜು, ಶಿಕ್ಷಕರು, ಗ್ರಾಮದ ಮುಖಂಡರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.