Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿನಯ್​ ಕುಲಕರ್ಣಿಗೆ ಮತ ಚಲಾಯಿಸಲು ಹೈಕೋರ್ಟ್ ಅನುಮತಿ:

ಧಾರವಾಡ, ಮೇ.07: ಮತದಾನದಲ್ಲಿ ಭಾಗವಹಿಸಲು ಶಾಸಕ ವಿನಯ್ ಕುಲಕರ್ಣಿಗೆ  ಹೈಕೋರ್ಟ್ ಏಕಸದಸ್ಯ ಪೀಠ ಅನುಮತಿ ನೀಡಿದ್ದು, ಇಂದು ಕುಟುಂಬ ಸಮೇತ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75 ಕ್ಕೆ ಬಂದು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು,‘ ನಾಲ್ಕು ವರ್ಷಗಳ‌ ಬಳಿಕ ಧಾರವಾಡಕ್ಕ ಬಂದಿದ್ದು ಸಂತೋಷ ಆಗಿದೆ. ಅಷ್ಟೇ ನೋವು ಕೂಡ ಇದೆ. ಇವತ್ತು ಹೈಕೋರ್ಟ್ ಮತದಾನಕ್ಕೆ ಅವಕಾಶ‌ ಕೊಟ್ಟಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು, ಉಚ್ಚ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸಿವೆ ಎಂದರು.

ಇನ್ನು ನನ್ನ ಎಲೆಕ್ಷನ್​ಗೆ ನಾಮಪತ್ರ ಸಲ್ಲಿಸಲು ಜೊತೆಗೆ ಮತದಾನಕ್ಕೂ ಅವಕಾಶ ಆಗಿರಲಿಲ್ಲ. ಆದರೆ ಈಗ ವಿನೋದ ಅಸೂಟಿಗೆ ಮತ ಹಾಕಲು ಅವಕಾಶ ಸಿಕ್ಕಿದೆ. ನಿಜವಾಗಿಯೂ ಬಹಳ ಸಂತೋಷ ಆಗಿದೆ. ಹಲವಾರು ಕಾರ್ಯಕರ್ತರಿಗೆ ನಾನು ಬರೋದು ಮಾಧ್ಯಮಗಳಿಂದ ತಿಳಿದಿದೆ. ಹೀಗಾಗಿ ಕಾರ್ಯಕರ್ತರೂ ಸಹ ಬಂದಿದ್ದಾರೆ. ಇದಕ್ಕಾಗಿ ಮಾಧ್ಯಮಗಳಿಗೆ ಅಭಿನಂದನೆ ಹೇಳುವೆ. ಕಾರ್ಯಕರ್ತರಲ್ಲಿ ಸಹಜವಾಗಿ ಜೋಶ್ ಕಾಣುತ್ತಿದೆ. 25 ವರ್ಷದಿಂದ ನಾನು ರಾಜಕೀಯಲ್ಲಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲ ರಂಗದಲ್ಲಿ ಕೆಲಸ ಮಾಡಿದ್ದೇನೆ. ನಾನು ಕ್ಷೇತ್ರದಲ್ಲಿ ಇರಲಿಲ್ಲ, ಆದರೂ ಅಭಿಮಾನಿಗಳು ಆರಿಸಿ ಕಳುಹಿಸಿದ್ದಾರೆ. ಇದು ಕರ್ನಾಟಕದಲ್ಲಿ ಮಾದರಿ ಆಗಿತ್ತು. ನಾನು ಕ್ಷೇತ್ರಕ್ಕೆ ಬರದಿದ್ದರೂ ಚುನಾಯಿತ ಆಗಿದ್ದೇನೆ ಎಂದರು.

ಇದೇ ವೇಳೆ ಮತದಾನಕ್ಕೆ ಅವಕಾಶ ಸಿಕ್ಕ ವಿಚಾರ, ‘ಇದರಿಂದಲೇ ಕಾಂಗ್ರೆಸ್ ಗೆಲವು ಖಚಿತ ಅನ್ನೋದು ಗೋಚರ ಆಗುತ್ತಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಧಾರವಾಡ ಈಗಾಗಲೇ ನಾವು ಗೆದ್ದಾಗಿದೆ. ಲಿಂಗಾಯತರು ಈ ಸಲವೂ ನಮ್ಮ ಕೈ ಹಿಡಿದಿದ್ದಾರೆ. ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಇನ್ನು ಎಲ್ಲಿಯೂ ಭೇಟಿ ನೀಡಿಲ್ಲ. ಮತ ಹಾಕಿ ಬನ್ನಿ ಎಂದು ಅಷ್ಟೇ ಕೋರ್ಟ್ ಹೇಳಿದೆ. ಮತ ಚಲಾಯಿಸಿ ವಾಪಸ್ ಹೋಗುವೆ ಎಂದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ