Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

*ದೇಶಪಾಂಡೆ ಕುಟುಂಬದ ನಾಲ್ಕನೇ ತಲೆಮಾರು ಉದ್ಯಮಕ್ಕೆ ಪ್ರವೇಶ*; 

*ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಉದ್ಘಾಟನೆ*

ಬೆಳಗಾವಿ: ಬೆಳಗಾವಿಯ ವಿಶ್ವಾಸಾರ್ಹ ವಾಹನ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಂಗೇಶ್ ಮೋಟಾರ್ಸ್ ನ ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಅನ್ನು ಕೆಎಲ್ಇ ಸಂಸ್ಥೆಯ ಗೌರವಾಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಸೋಮವಾರ ಉದ್ಘಾಟಿಸಿದರು.
ದೇಶಪಾಂಡೆ ಕುಟುಂಬದ 4ನೇ ಜನರೇಶನ್ ಉದ್ಯಮ ಮುಂದುವರಿಸುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಅವರು ಬೆಳಗಾವಿಯ ಬೆಳವಣಿಗೆಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಉದ್ಯಮ ಯಶಸ್ವಿಯಾಗಲಿ ಎಂದು ಕೋರೆ ಹಾರೈಸಿದರು.
ಮಾರುತಿ ಸಂಸ್ಥೆ ವಾಹನ ಉದ್ಯಮಕ್ಕೆ ಬಂದ ನಂತರ ದೇಶದ ವಾಹನ ಉದ್ಯಮದ ಸ್ಥಿತಿಯೇ ಬದಲಾಯಿತು. ಈಗ ಶೇ. 50ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಕಾರು ಉದ್ಯಮ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದರು.
ಖ್ಯಾತ ಉದ್ಯಮಿ ಹಾಗೂ ವಾಹನ ಬಿಡಿಭಾಗಗಳ ತಯಾರಕರಾದ ರಾಮ ಭಂಡಾರೆ ಮಾತನಾಡಿ, ವಿಶ್ವಾಸಾರ್ಹತೆಯಿಂದಾಗಿ ಮಾರುತಿ ಕಾರು ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ದೇಶಪಾಂಡೆ ಕುಟುಂಬ ಅತ್ಯಂತ ಯಶಸ್ವಿಯಾಗಿ ಉದ್ಯಮ ನಡೆಸಿಕೊಂಡು ಬಂದಿದೆ ಎಂದರು.
 ಬೆಳಗಾವಿ ಫೆರೋಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಐಆರ್‌ಸಿಟಿಸಿ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಾದ ಡಾ. ಸಚಿನ್ ಸಬ್ನಿಸ್,  ಮಾರುತಿ ಜನಸಾಮಾನ್ಯರ ಕಾರು ಎಂದು ಗುರುತಿಸಲ್ಪಟ್ಟಿದೆ. ಎಲ್ಲರ ಜೀವನದ ಭಾಗವಾಗಿದೆ. ದೇಶಪಾಂಡೆ ಕುಟುಂಬ ಅತ್ಯಂತ ಜನಸ್ನೇಹಿ ಸೇವೆ ಸಲ್ಲಿಸುತ್ತಿದೆ ಎಂದರು.
ಮಂಗೇಶ ಮೋಟಾರ್ಸ್ ನಿರ್ದೇಶಕ ಕಪಿಲ ದೇಶಪಾಂಡೆ ಸ್ವಾಗತಿಸಿದರು. ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ರಾಜೇಂದ್ರ ಬೆಳಗಾಂವ್ಕರ್, ರಾಹುಲ್  ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿದರು. ಆಸ್ನಾ ದೇಶಪಾಂಡೆ ಅತಿಥಿಗಳನ್ನು ಗೌರವಿಸಿದರು. ವ್ಯವಸ್ಥಾಪಕ ನಿರ್ದೇಶಕ ರೋಹಿತ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಕುಟುಂಬದ ಉದ್ಯಮ ಪ್ರಯಾಣವನ್ನು ವಿವರಿಸಿದರು. ಉಪಾಧ್ಯಕ್ಷೆ ಪ್ರಾಂಜಲ ಶಹ ವಂದಿಸಿದರು.
ಇದೇ ವೇಳೆ  ಮೊದಲ ಗ್ರಾಹಕರಿಗೆ ಕೀ ಹಸ್ತಾಂತರಿಸಲಾಯಿತು.
*ನಾಲ್ಕು ತಲೆಮಾರುಗಳ ವಾಹನ ಉದ್ಯಮದ ಪರಂಪರೆ*
ದೇಶಪಾಂಡೆ ಕುಟುಂಬದ ವಾಹನ ಉದ್ಯಮದ ಪಯಣ ಆರಂಭವಾಗಿದ್ದು ಜಿ.ಸಿ. ದೇಶಪಾಂಡೆ ಅವರಿಂದ. ಕಾರು ಎನ್ನುವುದೇ ಅಪರೂಪವಾಗಿದ್ದ ಕಾಲದಲ್ಲಿ ಅವರು ಈ ಭಾಗಕ್ಕೆ ಕ್ರೈಸ್ಲರ್ ಮತ್ತು ಜನರಲ್ ಮೋಟಾರ್ಸ್ (ಜಿಎಂ) ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ನಂತರದ ಪೀಳಿಗೆಯಲ್ಲಿ ರಾಜಾಭಾವು ದೇಶಪಾಂಡೆ ಹಾಗೂ ಅವರ ಸಹೋದರರು ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು, ಸುವೇಗಾ ಮೊಪೆಡ್‌ಗಳು ಮತ್ತು ಸ್ಟ್ಯಾಂಡರ್ಡ್ ಕಾರುಗಳ ಮೂಲಕ ಉದ್ಯಮವನ್ನು ವಿಸ್ತರಿಸಿದರು.
1990ರಲ್ಲಿ ರೋಹಿತ್ ದೇಶಪಾಂಡೆ ಅವರು ಕಿನೆಟಿಕ್ ಹೋಂಡಾ ದ್ವಿಚಕ್ರ ವಾಹನಗಳ ಡೀಲರ್‌ಶಿಪ್ ವಹಿಸಿಕೊಂಡರು. 2002ರಲ್ಲಿ ಮಂಗೇಶ್ ಹೋಂಡಾ, ದೇಶದಲ್ಲಿ ಮೊದಲ ಹಂತದಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಡೀಲರ್‌ಶಿಪ್ ಪಡೆದ ಸಂಸ್ಥೆಗಳಲ್ಲಿ ಒಂದಾಯಿತು. ಈ ವರ್ಷ ಬೆಳಗಾವಿಯಲ್ಲಿ ಹೋಂಡಾ ಜತೆಗಿನ ಸಂಸ್ಥೆಯ ಪಯಣಕ್ಕೆ 25 ವರ್ಷ ಪೂರ್ಣಗೊಳ್ಳುತ್ತಿದೆ.
2015ರಲ್ಲಿ ಹೋಂಡಾ ಕಾರ್ಸ್ ಡೀಲರ್‌ಶಿಪ್ ಆರಂಭವಾಯಿತು. ಇದೀಗ 2026ರಲ್ಲಿ ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್ ಸೇರ್ಪಡೆಯೊಂದಿಗೆ ಕಪಿಲ್ ದೇಶಪಾಂಡೆ ಅವರು ಕುಟುಂಬದ ನಾಲ್ಕನೇ ತಲೆಮಾರಿನ ಪ್ರತಿನಿಧಿಯಾಗಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ. 
ಕಳೆದ 35 ವರ್ಷಗಳಲ್ಲಿ ಮಂಗೇಶ್ ಮೋಟಾರ್ಸ್ ಸಮೂಹದ ಮೂಲಕ 2,50,000ಕ್ಕೂ ಅಧಿಕ ವಾಹನಗಳು ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಿಳಿದಿವೆ.
*ಬೆಳಗಾವಿಗೆ ಮಾರುತಿ ಸುಜುಕಿ ಅರೆನಾ ಸೇವೆ*
ಮಾರುತಿ ಸುಜುಕಿ ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಶೇ.42ರಷ್ಟು ಪಾಲು ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ನೂತನ ಅರೆನಾ ಶೋರೂಂನಲ್ಲಿ ಮಾರುತಿ ಸುಜುಕಿಯ ಅರೆನಾ ಶ್ರೇಣಿಯ ಕಾರುಗಳು ಗ್ರಾಹಕರಿಗೆ ಲಭ್ಯವಾಗಲಿವೆ. 
 ಬೆಳಗಾವಿಯಲ್ಲಿ ಮಾರುತಿ ಸುಜುಕಿಯ ಮಾರುಕಟ್ಟೆ ಪಾಲನ್ನು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿಸುವ ಗುರಿಯನ್ನು ಮಂಗೇಶ್ ಮೋಟಾರ್ಸ್ ಹೊಂದಿದೆ.
ಮಂಗೇಶ್ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ದೇಶಪಾಂಡೆ ಅವರು ತಮ್ಮ ಉದ್ಯಮದ ಪಯಣವನ್ನು ಸ್ಮರಿಸುತ್ತಾ, “42 ವರ್ಷಗಳ ಹಿಂದೆ ಕಾಲೇಜು ಶಿಕ್ಷಣ ಮುಗಿಸಿ ಬಂದಿದ್ದ ನನಗೆ ತಂದೆಯವರು ನಮ್ಮ ಪೆಟ್ರೋಲ್ ಬಂಕ್‌ನ ಜವಾಬ್ದಾರಿ ವಹಿಸಿದ್ದರು. ಆಗ ನಮ್ಮ ಬಂಕ್‌ಗೆ ಇಂಧನ ತುಂಬಿಸಿಕೊಳ್ಳಲು ಬರುತ್ತಿದ್ದ ಪ್ರತಿ ಮಾರುತಿ 800 ಕಾರಿಗೂ ವಿಶೇಷ ಆತಿಥ್ಯ ನೀಡುವಂತೆ ಸಿಬ್ಬಂದಿಗೆ ಹೇಳುತ್ತಿದ್ದೆ. ಅದೇ ಕಾರನ್ನು ಹೊಸ ರೂಪದಲ್ಲಿ ಒಂದು ದಿನ ನಾವೇ ಮಾರಾಟ ಮಾಡುತ್ತೇವೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಾಲ್ಕು ದಶಕಗಳಿಂದ ಬೆಳಗಾವಿಯ ಜನರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಶಕ್ತಿ. ಈ ಹೊಸ ಶೋರೂಂ ಮೂಲಕ ನಗರದ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶ” ಎಂದು ತಿಳಿಸಿದರು.
ನಿರ್ದೇಶಕ ಕಪಿಲ್ ದೇಶಪಾಂಡೆ, “ನಮ್ಮ ಕುಟುಂಬಕ್ಕೆ ವಾಹನಗಳು ಎಂದರೆ ಕೇವಲ ಯಂತ್ರಗಳಲ್ಲ; ಅವು ಜನರ ಬದುಕಿನ ಭಾಗ. ಭಾರತೀಯ ಕುಟುಂಬಗಳು ಪ್ರೀತಿಸುವ, ನಂಬುವ ಬ್ರ್ಯಾಂಡ್‌ನೊಂದಿಗೆ ನಾಲ್ಕನೇ ತಲೆಮಾರಿನಲ್ಲಿ ಈ ಪರಂಪರೆಯನ್ನು ಮುಂದುವರಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.
 ಮಂಗೇಶ್ ಮೋಟಾರ್ಸ್ ಕುರಿತು
ಬೆಳಗಾವಿ ಮೂಲದ ಮಂಗೇಶ್ ಮೋಟಾರ್ಸ್ ಸಮೂಹವು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ದೇಶಪಾಂಡೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
 ವಾಹನ ಉದ್ಯಮದ ಆರಂಭಿಕ ದಿನಗಳಿಂದಲೇ ದೇಶಪಾಂಡೆ ಕುಟುಂಬ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಸಂಸ್ಥೆಯು 2002ರಿಂದ ಮಂಗೇಶ್ ಹೋಂಡಾ (ಹೋಂಡಾ ದ್ವಿಚಕ್ರ ವಾಹನಗಳು), 2015ರಿಂದ ಹೋಂಡಾ ಕಾರ್ಸ್ ಡೀಲರ್‌ಶಿಪ್ ಹಾಗೂ ಇದೀಗ 2026ರಲ್ಲಿ ಮಾರುತಿ ಸುಜುಕಿ ಅರೆನಾ ಶೋರೂಂ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿದೆ. ಕಳೆದ 35 ವರ್ಷಗಳಲ್ಲಿ 2.50 ಲಕ್ಷಕ್ಕೂ ಅಧಿಕ ವಾಹನಗಳ ಮಾರಾಟದೊಂದಿಗೆ ಉತ್ತರ ಕರ್ನಾಟಕದ ವಿಶ್ವಾಸಾರ್ಹ ವಾಹನ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್ಸಮಾಜದ ಮುಖ್ಯ ವಾಹಿನಿಗೆ ವಿಕಲ ಚೇತನರು ಮುಂದೆ ಬರಬೇಕು : ಬಾಲಚಂದ್ರ ಜಾರಕಿಹೊಳಿಶ್ರೀ ಸಾಯಿ ಕಾಲೇಜಿನ ಶಿಬಿರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ವಿಧಾನ ಪರಿಷತ್ ಸದಸ್ಯ  ಸ್ಥಾನಕ್ಕೆ ಐದನೇ ಬಾರಿ ಆಯ್ಕೆಯಾದ ಶಶೀಲ್. ಜಿ. ನಮೋಶಿ ಅವರಿಗೆ ಹೊಸಪೇಟೆ ಯಲ್ಲಿ ಅದ್ಧೂರಿ ಸ್ವಾಗತ*ಬಿಜೆಪಿ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ*ಮಹಿಳಾ ಸಾಹಿತಿಗಳ ನಿರ್ಲಕ್ಷ್ಯ ಖಂಡನೀಯ-ಡಾ.ಸುಜಾತಾ ಚಲವಾದಿವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ತಂಡಕ್ಕೆ ತನ್ವೀರ್ ಆಯ್ಕೆಶ್ರೀ ವಿಶ್ವಗುರು ಸೌಹಾರ್ದ ಸೊಸೈಟಿ  ಅಧ್ಯಕ್ಷರಾಗಿ ಅರವಿಂದ ಬಡಕುಂದ್ರಿ, ಉಪಾಧ್ಯಕ್ಷರಾಗಿ ಬರಮಪ್ಪ ನಾಗನೂರ ಆಯ್ಕೆ.ಹತ್ತು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ: 95 ರೈತರಿಗೆ ₹54 ಕೋಟಿ ರೂ. ವಿತರಣೆ