Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್ಐಟಿ ತನಿಖೆ ಮೇಲೆ ಸರ್ಕಾರದ ಒತ್ತಡವಿಲ್ಲ: ಡಾ. ಜಿ. ಪರಮೇಶ್ವರ್

ಬೆಂಗಳೂರು,21: ''ಪ್ರಜ್ವಲ್​ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತಂತೆ ಎಸ್ಐಟಿ ತನಿಖೆ ಮೇಲೆ ಸರ್ಕಾರದ ಒತ್ತಡವಿಲ್ಲ. ನಿಯಮ ಏನಿದೆಯೋ ಅದರಂತೆ ಎಸ್ಐಟಿ ಕೆಲಸ ಮಾಡುತ್ತದೆ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.


ಸದಾಶಿವ ನಗರ ತಮ್ಮ ನಿವಾಸದಲ್ಲಿ ಇಂದು (ಮಂಗಳವಾರ) ಮಾತನಾಡಿದ ಅವರು, ''ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ. ಆದ್ರೆ, ನಮಗೆ ಬಹಳ ಕೆಲಸ ಇದ್ದು, ಬರ ನಿರ್ವಹಣೆ, ಆಡಳಿತದ ಜವಾಬ್ದಾರಿ ನಮ್ಮ‌ ಮೇಲಿದೆ. ಕಾಂಗ್ರೆಸ್​ಗೆ ಬೇರೆ ಕೆಲಸ ಇದೆ ಎಂದು ಹೆಚ್​ಡಿಕೆ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ'' ಎಂದು ತಿಳಿಸಿದರು.


''ಬರ ಪರಿಹಾರ ಕೊಟ್ಟಿದ್ದು, ಕೋರ್ಟ್ ಸೂಚನೆ ನಂತರ ಇನ್ನೂ ಬರ ಪರಿಹಾರ ಕೇಂದ್ರದಿಂದ ಬರಬೇಕು. ಆ ಸಹಕಾರವನ್ನು ಅವರು ಮೊದಲು ಕೊಡಲಿ. ನಮ್ಮ ಸಾಧನೆ, ಗ್ಯಾರಂಟಿ ನೋಡಿ ಬಿಜೆಪಿಗೆ ಹೊಟ್ಟೆ ಉರಿ'' ಎಂದು ಇದೇ ವೇಳೆ ಟೀಕಿಸಿದರು.

Advertisement

ಲೋಕಸಭೆಯಲ್ಲಿ 20 ಸ್ಥಾನ ಗೆಲ್ಲುವ ಹಗಲು ಕನಸು ಕಾಣ್ತಿದೆ ಕಾಂಗ್ರೆಸ್ ಎಂಬ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ನಾವು ಹಗಲು ಕನಸು ಕಂಡ್ರೆ ಅವರೇನು ರಾತ್ರಿ ಕನಸು ಕಾಣ್ತಿದ್ದಾರಾ? ಕನಸು ಯಾವಾಗ ಕಂಡ್ರೂ ಕನಸೇ ಆಗಿದೆ. ಹಗಲಲ್ಲೂ, ರಾತ್ರಿಯಲ್ಲೂ ಕಂಡ್ರೂ ಅದು ಕನಸೇ ಆಗಿದೆ. ಸಿಎಂ ಎಷ್ಟು ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಅಂತ ಹೇಳಿದ್ದಾರೋ ಅಷ್ಟು ಗೆಲ್ತೇವೆ. ನಾನು ಬೇರೆ ಹೇಳುವ ಅಗತ್ಯ ಇಲ್ಲ'' ಎಂದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*